ಐಐಟಿ ಮದ್ರಾಸ್ ಮಹಿಳಾ ಸಂಶೋಧಕಿ ನೇಣಿಗೆ ಶರಣು
ಚೆನ್ನೈ, ಜನವರಿ 02: ಐಐಟಿ ಮದ್ರಾಸ್ ನ ಮಹಿಳಾ ಸಂಶೋಧಕಿಯೊಬ್ಬರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರದಂದು ನಡೆದಿದೆ.
ಮೃತರನ್ನು ಲೋಹಶಾಸ್ತ್ರ (ಮೆಟಲರ್ಜಿ) ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಜಾರ್ಖಂಡ್ ಮೂಲದ ರಂಜನಾ ಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಜನಾ ಕೊಠಡಿಯಲ್ಲಿ ಯಾವುದೇ ಡೆತ್ನೋಟ್ ಸಿಕ್ಕಿಲ್ಲ ಎಂದು ಪೊಲೀಸ್ಅಧಿಕಾರಿ ತಿಳಿಸಿದ್ದಾರೆ.
ಸಾಬರಮತಿ ಹಾಸ್ಟೆಲ್ನಲ್ಲಿ ಕಳೆದ ಕೆಲ ವರ್ಷಗಳಿಂದ ಅನೇಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಐಐಟಿ ಮದ್ರಾಸ್ನಲ್ಲಿ ನೌಕಾ ವಾಸ್ತುಶಿಲ್ಪಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ 23 ವರ್ಷದ ಶಾಹುಲ್ ಕೋರ್ನಾಥ್ ಕೊಠಡಿಯಲ್ಲಿದ್ದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

2016ರ ಜುಲೈ ತಿಂಗಳಿನಲ್ಲಿ ಐಐಟಿ ಮದ್ರಾಸ್ ನ ಮಹಿಳಾ ಸಂಶೋಧಕಿ ಮೃತಪಟ್ಟಿದ್ದರು. ಇದೇ ರೀತಿ ಪ್ರೊಫೆಸರ್ ರೊಬ್ಬರ ಪತ್ನಿ ಆತ್ಮಹತ್ಯೆ ಪ್ರಕರಣ ಕೂಡಾ ಇಲ್ಲಿ ಸ್ಮರಿಸಬಹುದು.












Click it and Unblock the Notifications