ಐಐಟಿ ಮದ್ರಾಸ್ ನಲ್ಲಿ 3 ಗಂಟೆಯಲ್ಲಿ 2 ಮಹಿಳೆಯರು ಆತ್ಮಹತ್ಯೆ!

Posted By:
Subscribe to Oneindia Kannada

ಚೆನ್ನೈ, ಜುಲೈ 14: ದೇಶದ ಪ್ರತಿಷ್ಠಿತ ಐಐಟಿ ಕ್ಯಾಂಪಸ್ ಗಳಲ್ಲಿ ಒಂದೆನಿಸಿರುವ ಮದ್ರಾಸ್ ಐಐಟಿಯಿಂದ ಬುಧವಾರ ಆಘಾತಕಾರಿ ಸುದ್ದಿ ಬಂದಿದೆ. ಸಂಶೋಧನಾ ವಿದ್ಯಾರ್ಥಿನಿ ಹಾಗೂ ಪ್ರೊಫೆಸರ್ ರೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಬ್ಬರ ಆತ್ಮಹತ್ಯೆ ಮೂರು ಗಂಟೆಗಳ ಅಂತರದಲ್ಲಿ ನಡೆದಿದೆ. 34 ವರ್ಷ ವಯಸ್ಸಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಪಿ ಮಹೇಶ್ವರಿ ಹಾಗೂ ಭೌತಶಾಸ್ತ್ರ ಪ್ರೊಫೆಸರ್ ಗಣೇಶನ್ ಅವರ ಪತ್ನಿ 47 ವರ್ಷ ವಯಸ್ಸಿನ ವಿಜಯಲಕ್ಷ್ಮಿ ಮೃತಪಟ್ಟವರು.[ಟೆಕ್ಕಿ ಸ್ವಾತಿ ಹತ್ಯೆ: ಕಾಲ್ ರೆಕಾರ್ಡ್ ನಲ್ಲಿದೆಯೇ ರಹಸ್ಯ]

ಚೆನ್ನೈ, ಜುಲೈ 14: ದೇಶದ ಪ್ರತಿಷ್ಠಿತ ಐಐಟಿ ಕ್ಯಾಂಪಸ್ ಗಳಲ್ಲಿ ಒಂದೆನಿಸಿರುವ ಮದ್ರಾಸ್ ಐಐಟಿಯಿಂದ ಬುಧವಾರ ಆಘಾತಕಾರಿ ಸುದ್ದಿ ಬಂದಿದೆ. ಸಂಶೋಧನಾ ವಿದ್ಯಾರ್ಥಿನಿ ಹಾಗೂ ಪ್ರೊಫೆಸರ್ ರೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ಆತ್ಮಹತ್ಯೆ ಮೂರು ಗಂಟೆಗಳ ಅಂತರದಲ್ಲಿ ನಡೆದಿದೆ. 34 ವರ್ಷ ವಯಸ್ಸಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಪಿ ಮಹೇಶ್ವರಿ ಹಾಗೂ ಭೌತಶಾಸ್ತ್ರ ಪ್ರೊಫೆಸರ್ ಗಣೇಶನ್ ಅವರ ಪತ್ನಿ 47 ವರ್ಷ ವಯಸ್ಸಿನ ವಿಜಯಲಕ್ಷ್ಮಿ ಮೃತಪಟ್ಟವರು. ವಿಜಯಲಕ್ಷ್ಮಿ ಅವರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಅನುಮಾನಿಸಲಾಗಿದೆ. ರಸಾಯನ ಶಾಸ್ತ್ರದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ಪಿ ಮಹೇಶ್ವರಿ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮಹೇಶ್ವರಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಈ ಹಿಂದೆ ಕೂಡಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಆಕೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಇಬ್ಬರು ಸ್ನಾತಕೋತ್ತರ ಪದವಿಧರರು ಕ್ಯಾಂಪಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೊಟ್ಟಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಸಾವಿನ ನಡುವೆ ಸಾಮತ್ಯೆ ಕಂಡು ಬಂದರೂ, ನಿಖರ ಕಾರಣ ತಿಳಿದು ಬಂದಿಲ್ಲ. ವಿಚಾರಣೆ ಜಾರಿಯಲ್ಲಿದೆ. (ಒನ್ಇಂಡಿಯಾ ಸುದ್ದಿ)

ವಿಜಯಲಕ್ಷ್ಮಿ ಅವರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಅನುಮಾನಿಸಲಾಗಿದೆ. ರಸಾಯನ ಶಾಸ್ತ್ರದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ಪಿ ಮಹೇಶ್ವರಿ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಮಹೇಶ್ವರಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಈ ಹಿಂದೆ ಕೂಡಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಆಕೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಇಬ್ಬರು ಸ್ನಾತಕೋತ್ತರ ಪದವಿಧರರು ಕ್ಯಾಂಪಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೊಟ್ಟಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಸಾವಿನ ನಡುವೆ ಸಾಮತ್ಯೆ ಕಂಡು ಬಂದರೂ, ನಿಖರ ಕಾರಣ ತಿಳಿದು ಬಂದಿಲ್ಲ. ವಿಚಾರಣೆ ಜಾರಿಯಲ್ಲಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two women - a research scholar and the wife of a professor - were found hanging in their rooms at the Indian Institute of Technology or IIT Madras campus on Wednesday(July 13).
Please Wait while comments are loading...