ನಾಳೆ IIT JEE ಪರೀಕ್ಷಾ ಫಲಿತಾಂಶ: ಅಸ್ಪಷ್ಟ ಪ್ರಶ್ನೆಗಳಿಗೆ ಬೋನಸ್ ಅಂಕ
ಲಕ್ಷಾನುಲಕ್ಷ ವಿದ್ಯಾರ್ಥಿಗಳು ನಿರೀಕ್ಷಿಸುತ್ತಿರುವ ಮದ್ರಾಸ್ ಐಐಟಿಯ 2017ರ ಜೆಇಇ ಅಡ್ವಾನ್ಸ್ಡ್ ಪರೀಕ್ಷಾ ಫಲಿತಾಂಶವು ಭಾನುವಾರ (ಜೂನ್ 10) ಪ್ರಕಟಗೊಳ್ಳಲಿವೆ. ಈ ಪರೀಕ್ಷೆಯಲ್ಲಿ ಅಸ್ಪಷ್ಟ ಪ್ರಶ್ನೆಗಳಿದ್ದಿದ್ದರಿಂದ ಪರೀಕ್ಷೆ ಬರೆದ ವಿದ್ಯಾರ್
ನವದೆಹಲಿ, ಜೂನ್ 10: ಈ ಬಾರಿಯ ಐಐಟಿ ಜೆಇಇ ಅಡ್ವಾನ್ಸ್ ಡ್ ಫಲಿತಾಂಶಗಳು ಭಾನುವಾರ (ಜೂನ್ 11ರಂದು) ಪ್ರಕಟಗೊಳ್ಳಲಿವೆ.
ಮದ್ರಾಸ್ ನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಈ ಪರೀಕ್ಷೆಯನ್ನು ಮೇ 21ರಂದು ಆಯೋಜಿಸಿತ್ತು. ಈ ಪರೀಕ್ಷೆ ಬರೆದಿರುವ ಲಕ್ಷಾನುಲಕ್ಷ ವಿದ್ಯಾರ್ಥಿಗಳು ಕೆಲವಾರು ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಅಸ್ಪಷ್ಟ ಪ್ರಶ್ನೆಗಳನ್ನು ಎದುರಿಸಿದ್ದರು.

ಗಣಿತ ವಿಷಯದಲ್ಲಿ 2 ಪ್ರಶ್ನೆಗಳು ಹಾಗೂ ಭೌತಶಾಸ್ತ್ರ ವಿಷಯದಲ್ಲಿ 1 ಪ್ರಶ್ನೆಯು ಅಸ್ಪಷ್ಟವಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ 11 ಅಂಕಗಳನ್ನು ಬೋನಸ್ ಆಗಿ ನೀಡಲು ಮದ್ರಾಸ್ ಐಐಟಿ ಆಡಳಿತ ಮಂಡಳಿ ನಿರ್ಧರಿಸಿದೆ.
ರಿಸಲ್ಟ್ ಇಲ್ಲಿ ನೋಡಬಹುದು:
ಭಾನುವಾರ (ಜೂನ್ 10) ಬರುವ ಫಲಿತಾಂಶಕ್ಕಾಗಿ jeeadv.ac.in ಜಾಲತಾಣಕ್ಕೆ ಭೇಟಿ ನೀಡಿ, ಅಲ್ಲಿನ ಹೋಂ ಪೇಜ್ ನಲ್ಲಿ ಅಭ್ಯರ್ಥಿಯು ತನ್ನ ರಿಜಿಸ್ಟರ್ ಸಂಖ್ಯೆಯನ್ನು ದಾಖಲಿಸಬೇಕು.
ಆನಂತರ ಸಬ್ ಮಿಟ್ ಬಟನ್ ಕ್ಲಿಕ್ ಮಾಡಿದರೆ, ವ್ಯೂ ರಿಸಲ್ಟ್ ಎಂಬ ಆಯ್ಕೆ ಬರುತ್ತದೆ. ಅದನ್ನು ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಬಹುದು.
ನಿರ್ದಿಷ್ಟ ಸಂಖ್ಯೆಯ ಫಲಿತಾಂಶವನ್ನು ಪ್ರಿಂಟ್ ಔಟ್ ಪಡೆಯಲೂ ಆಯ್ಕೆಯಿದೆ.












Click it and Unblock the Notifications