29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ

Written By:
Subscribe to Oneindia Kannada

ಚೆನ್ನೈ, ಜುಲೈ, 22: ಚೆನ್ನೈನ ತಾಂಬರಮ್ ನಿಂದ ಅಂಡಮಾನ್ ಕಡೆ ಹೊರಟಿದ್ದ ಭಾರತದ ವಾಯುಸೇನೆಯ ವಿಮಾನ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ.

ಶುಕ್ರವಾರ ಬೆಳಗ್ಗೆ ವಿಮಾನ ಸಂಪರ್ಕ ಕಳೆದುಕೊಂಡಿದೆ. ಬಂಗಾಳಕೊಲ್ಲಿ ಮೇಲೆ ಹಾರುವಾಗ ನಾಪತ್ತೆಯಾಗಿದೆ. ಚೆನ್ನೈನಿಂದ ಹೊರಟ ಎಎನ್ 32 ವಾಯುಸೇನೆ ವಿಮಾನದಲ್ಲಿ 29 ಜನರಿದ್ದರು. ಎಲ್ಲರೂ ಪೋರ್ಟ್ ಬ್ಲೇರ್ ಕಡೆ ಪ್ರಯಾಣ ಬೆಳೆಸುತ್ತಿದ್ದರು.[ಶಂಕಿತ ಬೋಟ್ ಮಯನ್ಮಾರ್‌ನಿಂದ ಎಲ್ಲಿಗೆ ಹೊರಟಿತ್ತು?]

indian army

ಚೆನ್ನೈನ ತಾಂಬರಮ್ ನಿಂದ ಶುಕ್ರವಾರ ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿತ್ತು. ಹೊರಟ 16 ನಿಮಿಷದ ನಂತರ ವಿಮಾನ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿದೆ. ವಿಮಾನದಲ್ಲಿ ಸುಮಾರು 4 ಗಂಟೆ ಕಾಲ ಆಕಾಶದಲ್ಲಿ ಹಾರಾಡುವಷ್ಟು ಇಂಧನ ಇತ್ತು. ವಾಯುಸೇನೆ ಈಗಾಗಲೇ ವಿಮಾನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ.[ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು]

indian army

ಬಂಗಾಳಕೊಲ್ಲಿಯಲ್ಲಿ ಪತನ?
ವಿಮಾನ ಕೊನೆ ಬಾರಿ ಸಂಪರ್ಕಕ್ಕೆ ಸಿಕ್ಕಾಗ ಬಂಗಾಳ ಕೊಲ್ಲಿಯ ಮೇಲೆ ಹಾರಾಟ ಮಾಡುತ್ತಿತ್ತು. ಇದನ್ನು ವಿಶ್ಲೇಷಿಸಿರುವ ಸೇನೆ ವಿಮಾನ ತಾಂತ್ರಿಕ ಸಮಸ್ಯೆಗೆ ಸಿಕ್ಕಿ ಬಂದಾಗ ಬಂಗಾಳ ಕೊಲ್ಲಿಯಲ್ಲೆ ಪತನವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಣೆಯಾದ ವಿಮಾನದ ಬಗ್ಗೆ ಮತ್ತಷ್ಟು ಮಾಹಿತಿ
* ಎರಡು ಇಂಜಿನ್ ಗಳನ್ನು ಹೊಂದಿದ್ದ ವಿಮಾನ
* ಇದನ್ನು ಸರಕು ಸಾಗಣೆ ವಿಮಾನವನ್ನಾಗಿ ಬಳಕೆ ಮಾಡಲಾಗುತ್ತಿತ್ತು
* 23 ಜನ ಪ್ರಯಾಣಿಕರು ಮತ್ತು 6 ಸಿಬ್ಬಂದಿ ವಿಮಾನದಲ್ಲಿದ್ದರು.
* 7.5 ಟನ್ ತೂಕ ಅಥವಾ 50 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ವಿಮಾನಕ್ಕಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An AN-32 aircraft of the Indian Air Force with 29 people on board went missing today, defence ministry sources said. The aircraft was flying between Chennai and Port Blair. Those on board included six crew members.
Please Wait while comments are loading...