ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಕೋರ್ಟ್, ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆ

By Gururaj
|
Google Oneindia Kannada News

ಚೆನ್ನೈ, ಆಗಸ್ಟ್ 08 : ತಮಿಳುನಾಡು ಮಾಜಿ ಮಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಮರೀನಾ ಬೀಚ್‌ನಲ್ಲಿ ನಡೆಸಲು ಮದ್ರಾಸ್ ಹೈಕೋರ್ಟ್‌ ಆದೇಶ ನೀಡಿದೆ. ಇದರಿಂದಾಗಿ ಎಐಎಡಿಎಂಕೆ ಸರ್ಕಾರಕ್ಕೆ ಮುಖಭಂಗವಾಗಿದೆ.

ಬುಧವಾರ ಬೆಳಗ್ಗೆ ಸುದೀರ್ಘ ವಿಚಾರಣೆ ಬಳಿಕ ರಿಟ್ ಅರ್ಜಿ ತೀರ್ಪು ಪ್ರಕಟಿಸಿದ ಮದ್ರಾಸ್ ಹೈಕೋರ್ಟ್ ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆ ನಡೆಸಬಹುದು ಎಂದು ಆದೇಶ ನೀಡಿತು. ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವ ಕುರಿತು ಸಲ್ಲಿಕೆಯಾಗಿದ್ದ 6 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾ ಮಾಡಿತು.

ಮರೀನಾ ಬೀಚ್‌ನಲ್ಲಿಯೇ ಕರುಣಾನಿಧಿ ಸಂಸ್ಕಾರಕ್ಕೆ ಡಿಎಂಕೆ ಪಟ್ಟುಹಿಡಿದಿರುವುದೇಕೆ?ಮರೀನಾ ಬೀಚ್‌ನಲ್ಲಿಯೇ ಕರುಣಾನಿಧಿ ಸಂಸ್ಕಾರಕ್ಕೆ ಡಿಎಂಕೆ ಪಟ್ಟುಹಿಡಿದಿರುವುದೇಕೆ?

ಮರೀನಾ ಬೀಚ್‌ನಲ್ಲಿರುವ ಅಣ್ಣಾದೊರೈ ಸಮಾಧಿ ಪಕ್ಕದಲ್ಲಿಯೇ ಎಂ.ಕರುಣಾನಿಧಿ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ನಡೆಯಲಿದೆ. ಮದ್ರಾಸ್ ಹೈಕೋರ್ಟ್ ಆದೇಶದಿಂದಾಗಿ ಡಿಎಂಕೆ ಪಕ್ಷದ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ, ಅಭಿಮಾನಿಗಳ ಆಸೆ ಈಡೇರಿದಂತಾಗಿದೆ.

ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ

'ಮದ್ರಾಸ್ ಹೈಕೋರ್ಟ್ ಆದೇಶ ಏನೇ ಬಂದರೂ ಅದನ್ನು ಒಪ್ಪಿಕೊಳ್ಳುತ್ತೇವೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡುವುದಿಲ್ಲ' ಎಂದು ತಮಿಳುನಾಡು ಮುಖ್ಯ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಲಾಗಿದೆ. ರಾಜಾಜಿ ಹಾಲ್‌ನಲ್ಲಿ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದೆ...

ಅಂತ್ಯಕ್ರಿಯೆ ವಿವಾದ ಅಂತ್ಯ

ಅಂತ್ಯಕ್ರಿಯೆ ವಿವಾದ ಅಂತ್ಯ

94 ವರ್ಷದ ಎಂ.ಕರುಣಾನಿಧಿ ಅವರು ಮಂಗಳವಾರ ಸಂಜೆ ವಿಧಿವಶರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಎಲ್ಲಿ ಮಾಡಬೇಕು? ಎಂಬ ಬಗ್ಗೆ ವಿವಾದ ಉಂಟಾಗಿತ್ತು. ಡಿಎಂಕೆ ಪಕ್ಷ ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಬಯಸಿತ್ತು. ಆದರೆ, ತಮಿಳುನಾಡಿನಲ್ಲಿರುವ ಎಐಎಡಿಎಂಕೆ ಸರ್ಕಾರ ಇದಕ್ಕೆ ಒಪ್ಪಿರಲಿಲ್ಲ. ಆದ್ದರಿಂದ, ಡಿಎಂಕೆ ಹೈಕೋರ್ಟ್ ಮೊರೆ ಹೋಗಿತ್ತು.

ರಾತ್ರಿ ರಿಟ್ ಅರ್ಜಿ ವಿಚಾರಣೆ

ರಾತ್ರಿ ರಿಟ್ ಅರ್ಜಿ ವಿಚಾರಣೆ

ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುಂವತೆ ಕೋರಿ ಮಂಗಳವಾರ ರಾತ್ರಿ ಹೈಕೋರ್ಟ್‌ಗೆ ಡಿಎಂಕೆ ಪಕ್ಷ ರಿಟ್ ಅರ್ಜಿ ಸಲ್ಲಿಸಿತು. ರಾತ್ರಿ 10.30ಕ್ಕೆ ಅರ್ಜಿಯ ವಿಚಾರಣೆಯನ್ನು ನಡೆಸಿದ ಕರ್ನಾಟಕ ಮೂಲದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ತಡರಾತ್ರಿ 1.30ರ ತನಕ ಡಿಎಂಕೆ, ತಮಿಳುನಾಡು ಸರ್ಕಾರದ ವಾದವನ್ನು ಆಲಿಸಿದರು. ನಂತರ ವಿಚಾರಣೆಯನ್ನು ಬುಧವಾರ ಬೆಳಗ್ಗೆ 8.30ಕ್ಕೆ ಮುಂದೂಡಿದರು.

ಮರೀನಾಬೀಚ್‌ನಲ್ಲಿಯೇ ಅಂತ್ಯಕ್ರಿಯೆ

ಮರೀನಾಬೀಚ್‌ನಲ್ಲಿಯೇ ಅಂತ್ಯಕ್ರಿಯೆ

ಬುಧವಾರ ಬೆಳಗ್ಗೆ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ತೀರ್ಪು ನೀಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಅವರು ಮರೀನಾ ಬೀಚ್‌ನಲ್ಲಿಯೇ ಅಂತ್ಯ ಸಂಸ್ಕಾರ ನಡೆಸುವಂತೆ ಆದೇಶ ನೀಡಿದರು. ಇದರಿಂದಾಗಿ ಡಿಎಂಕೆ ಪಕ್ಷದ ಕಾರ್ಯಕರ್ತರಿಗೆ ಜಯಸಿಕ್ಕಿದಂತಾಗಿದೆ.

'ಹೈಕೋರ್ಟ್ ಆದೇಶ ಏನೇ ಬಂದರೂ ಅದನ್ನು ಒಪ್ಪಿಕೊಳ್ಳುತ್ತೇವೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡುವುದಿಲ್ಲ' ಎಂದು ತಮಿಳುನಾಡು ಮುಖ್ಯಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಲಾಗಿದೆ.

ವಿವಾದ ಏಕಾಗಿತ್ತು?

ವಿವಾದ ಏಕಾಗಿತ್ತು?

ಮರೀನಾ ಬೀಚ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದಾಗಲೇ ವಿಧಿವಶರಾದ ಸಿ.ಎನ್.ಅಣ್ಣಾದೊರೈ, ಎಂ.ಜಿ.ರಾಮಚಂದ್ರನ್ ಅವರ ಸಮಾಧಿ ಇದೆ. 2016ರಲ್ಲಿ ಜೆ.ಜಯಲಲಿತಾ ಅವರು ಮೃತಪಟ್ಟಾಗ ಎಐಎಡಿಎಂಕೆ ಸರ್ಕಾರ ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡಿತ್ತು.

ಮುಖ್ಯಮಂತ್ರಿಗಳಾಗಿರುವವರು ಮೃತಪಟ್ಟರೆ ಮಾತ್ರ ಮರೀನಾ ಬೀಚ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಮಾಜಿ ಮುಖ್ಯಮಂತ್ರಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಆದ್ದರಿಂದ ಅಂತ್ಯಕ್ರಿಯೆ ಜಾಗ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು.

English summary
Madras High Court on August 8, 2018 ordered to perform Former chief minister M.Karunanidhi's burial in Marina beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X