ಉಗ್ರರ ದಾಳಿ ಎಚ್ಚರಿಕೆ ಕೊಯಮತ್ತೂರಿನಲ್ಲಿ ಹೈ ಅಲರ್ಟ್
ಚೆನ್ನೈ, ಆಗಸ್ಟ್ 23: ತಮಿಳುನಾಡಿನಲ್ಲಿ ಉಗ್ರರ ದಾಳಿ ನಡೆಯುವ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪಾಕಿಸ್ತಾನ ಮೂಲಕ ಲಷ್ಕರ್-ಎ-ತೊಯಿಬಾ ಉಗ್ರರು ಸಮುದ್ರ ಮಾರ್ಗದಿಂದ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ.
ಆರು ಉಗ್ರರು ಶ್ರೀಲಂಕಾ ಸೇರಿದಂತೆ ಇತರೆ ನಗರಗಳಿಗೆ ತೆರಳಿದ್ದಾರೆ. ತಮಿಳುನಾಡಿನ ಏರ್‌ಪೋರ್ಟ್, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ದೇವಸ್ಥಾನ, ಚರ್ಚ್ , ಮಸೀದಿಗಳ ಬಳಿ ಕಟ್ಟೆಚ್ಚರವಹಿಸಲಾಗಿದೆ.

ಕರಾವಳಿ ಭಾಗಗಳಲ್ಲಿ ಕೂಡ ಭದ್ರತೆ ಹೆಚ್ಚಿಸಲಾಗಿದೆ. ಓರ್ವ ಪಾಕಿಸ್ತಾನಿ,ಈವರು ಶ್ರೀಲಂಕಾದವರು ಹಾಗೂ ಓರ್ವ ತಮಿಳುನಾಡಿನ ಉಗ್ರರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನದ ಉಗ್ರನನ್ನು ಇಲಿಯಾಸ್ ಅನ್ವರ್ ಎಂದು ಗುರುತಿಸಲಾಗಿದೆ. ಕೊಯಮತ್ತೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದಾದಾಗುವುದಕ್ಕಿಂತ ಮುಂಚೆ ಇಂದಲೂ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಜಮ್ಮು ಕಾಶ್ಮೀರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ.
ಈ ಭದ್ರತೆ ಇನ್ನೂ ಮುಂದುವರೆಯಲಿದೆ ಎಂದು ಕೇಂದ್ರ ಹೇಳಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ನಡೆ ತಪ್ಪು ಎಂದು ಸಾಬೀತುಪಡಿಸಲು ಇನ್ನಿಲ್ಲದ್ದಂತೆ ಪ್ರಯತ್ನಿಸಿ ವಿಫಲವಾಗುತ್ತಿದೆ. ಈ ನಡುವೆ, ಗಡಿ ಭಾಗದಲ್ಲಿ ಶೀತಲ ಸಮರ ಮುಂದುವರೆಸಿರುವ ಪಾಕಿಸ್ತಾನ, ಈಗ ದೊಡ್ಡ ಮಟ್ಟದ ಸಾಹಸಕ್ಕೆ ಕೈ ಹಾಕಿದೆ.












Click it and Unblock the Notifications