ವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರ

Posted By:
Subscribe to Oneindia Kannada
   ವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರ | Oneindia Kannada

   ಚೆನ್ನೈ, ಡಿಸೆಂಬರ್ 1: ಗಾಳಿಯ ರಭಸಕ್ಕೆ ರುದ್ರ ನರ್ತನ ಆರಂಭಿಸಿದ ಮರದ ರೆಂಬೆ - ಕೊಂಬೆಗಳು, ಎಡಬಿಡದೆ ಸುರಿವ ಮಳೆ, ಏನಾಗಿಬಿಡುತ್ತದೋ ಎಂಬ ಆತಂಕದಲ್ಲೇ ಮನೆಯಿಂದ ಹೊರಗೇ ಬರದೆ ಮುದುಡಿ ಕುಳಿತ ಜನ, ರಸ್ತೆಯ ತುಂಬೆಲ್ಲ ಗಾಳಿ-ಮಳೆಯ ಭೋರ್ಗರೆತವಲ್ಲದೆ ಬೇರೆ ಸದ್ದಿಲ್ಲ... ಇದು ತಮಿಳುನಾಡಿನ ಚಿತ್ರ! ತಮಿಳು ನಾಡು ಮಾತ್ರವಲ್ಲ, ಕೇರಳದ ಹಲವೆಡೆಯೂ ಓಖಿ ಸದ್ದು ಮಾಡುತ್ತಿದೆ.

   In Pics : ಓಖಿ ಸೋಕಿದ ಊರೆಲ್ಲ ನೀರೋ ನೀರು, ನೆಲ ನೋಡಿದ ಮರಗಳು

   ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಓಖಿ ಎಂಬ ವಿಚಿತ್ರ ಹೆಸರಿನ ಚಂಡಮಾರುತಕ್ಕೆ ಈಗಾಗಲೇ ಬಲಿಯಾದವರ ಸಂಖ್ಯೆ 8 ಕ್ಕೂ ಹೆಚ್ಚು.

   ಓಖಿಗೂ ಮುನ್ನ ಭಾರತೀಯರ ನಿದ್ದೆಕೆಡಿಸಿದ್ದ 7 ಕ್ರೂರ ಚಂಡಮಾರುತ

   ಮನೆಯಿಂದ ಹೊರಗಂತೂ ಅಡಿಯಿಡಲಾಗದ ಸ್ಥಿತಿಯಲ್ಲಿರುವ, ತಮಿಳುನಾಡು, ಕೇರಳದ ಜನ ಮನೆಯ ಕಿಟಕಿಯಿಂದಲೇ ಚಂಡಮಾರುತದ ಭಯಾನಕ ಚಿತ್ರ, ವಿಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಹರಿಬಿಡುತ್ತಿದ್ದಾರೆ! #CycloneOckhi ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಓಖಿಯ ಅಬ್ಬರವನ್ನು ಪ್ರತಿಬಿಂಬಿಸುವ ಹಲವು ವಿಡಿಯೋ ಮತ್ತು ಚಿತ್ರಗಳಿಗಳು ಟ್ವಿಟ್ಟರ್ ನಲ್ಲಿವೆ.

   ಭಯಾನಕ ಗಾಳಿ!

   ಗಂಟೆಗೆ 85 ಕಿ.ಮೀ.ವೇಗದಲ್ಲಿ ಚಲಿಸುತ್ತಿರುವ ಬಿರುಗಾಳಿ ಕೇರಳದ ತಿರುವನಂತಪುರಂ ಅನ್ನೂ ತತ್ತರಿಸುವಂತೆ ಮಾಡಿದೆ. ಗಾಳಿಯ ವೇಗದ ತೀವ್ರತೆಯನ್ನು ತೋರಿಸುವ ಭಯಾನಕ ವಿಡಿಯೋವೊಂದನ್ನು ತಿರುವನಂತಪುರದ ಅಶ್ವಿನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಸೈಕ್ಲೋನ್ ಅವಾಂತರ

   ತಮ್ಮ ಮನೆಯ ಕಿಟಕಿಯಿಂದ ತೆಗೆದ ಸೈಕ್ಲೋನ್ ಅವಾಂತರ ವಿಡಿಯೋವನ್ನು ಗಾಯತ್ರಿ ಎಂಬುವವರು ಟ್ವೀಟ್ ಮಾಡಿದ್ದಾರೆ. ಗಾಳಿಯ ರಭಸಕ್ಕೆ ಮರಗಳು ಆಗಲೋ, ಈಗಲೂ ಮುರಿದುಬೀಳುವಂತೆ ತೂಗುತ್ತಿರುವ ದೃಶ್ಯ ಇದರಲ್ಲಿ ಸೆರೆಯಾಗಿದೆ.

   ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?

   ಕನ್ಯಾಕುಮಾರಿಯಲ್ಲಿ ಅತೀವೃಷ್ಠಿ!

   ಓಖಿ ಸೈಕ್ಲೋನ್ ನಿಂದ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಅತಿವೃಷ್ಠಿ ಶುರುವಾಗಿದೆ. ಬದುಕು ಹೈರಾಣಾಗಿದ, ಇನ್ನು 24 ಗಂಟೆಗಳಲಲ್ಲಿ ಮತ್ತಷ್ಟು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ ಎಂದು ಕನ್ಯಾಕುಮಾರಿಯ ಮಳೆಯಿಂದ ರಸ್ತೆಗಳೆಲ್ಲ ತುಂಬಿರುವ ದೃಶ್ಯವನ್ನು ಸಿನೆಮಾ ವರ್ಲ್ಡ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ತಿರುವನಂತಪುರದಲ್ಲಿ ಮೂವರು ಬಲಿ

   ಓಖಿ ಸೈಕ್ಲೋನ್ ಕೇರಳವನ್ನೂ ಅಪ್ಪಳಿಸಿದ್ದು, ಇಲ್ಲಿ ಮೂವರು ಮೃತರಾಗಿದ್ದಾರೆ. 270 ಮೀನುಗಾರರು, 62 ದೋಣಿಗಳು ನಾಪತ್ತೆಯಾಗಿವೆ ಎಂದು ಧನ್ಯಾ ರಾಜೇಂದ್ರನ್ ಟ್ವೀಟ್ ಮಾಡಿದ್ದಾರೆ.

   ರುದ್ರ ನರ್ತನ

   ಗಾಳಿ ಮತ್ತು ಮಳೆಯ ರುದ್ರ ನರ್ತನ ಭಯಾನಕ ವಾತಾವರಣವನ್ನು ಸೃಷ್ಟಿಸಿದೆ. ತಿರುವನಂತಪುರದಲ್ಲಿ ಕಂಡುಬಂದ ದೃಶ್ಯವೊಂದನ್ನು ಅರುಣ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಸೋಫಿಯಾಲ್

   ಕನ್ಯಾಕುಮಾರಿಯಲ್ಲಿ ನೂರು ಮರಗಳನ್ನು ಮಕಾಡೆ ಮಲಗಿಸಿ, ಅಸಂಖ್ಯ ಆಸ್ತಿಪಾಸ್ತಿ ನಾಶ ಮಾಡಿದ ಓಖಿ ಚಂಡಮಾರುತದ ಚಂಡಿ ಅವತಾರದ ಪರಿಣಾಮವನ್ನು ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ ಸೋಫಿಯಾಲ್ ಎನ್ನುವವರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Deadliest Ockhi cyclone, which hits Tamil Nadu killed more than 8 people till now. Here are viral videos, which reflect intensity of the Ockhi cyclone.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ