ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾಗೆ ಅನಾರೋಗ್ಯ, ತಮಿಳುನಾಡಲ್ಲಿ ಅಘೋಷಿತ ಬಂದ್

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಭಾನುವಾರ ಸಂಜೆ ಜಯಾ ಅವರ ಆರೋಗ್ಯ ಸುಧಾರಣೆ ಬಗ್ಗೆ ಪ್ರಕಟಣೆ ಹೊರಡಿಸಿದ ಕೆಲ ಗಂಟೆಗಳಲ್ಲೇ ಹೃದಯಾಘಾತವಾದ ಸುದ್ದಿ ಹೊರ ಬಂದಿದೆ.

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ 04: ತಮಿಳುನಾಡಿನ ಮುಖ್ಯಮಂತ್ರಿ, ಅಭಿಮಾನಿಗಳ ಪಾಲಿನ 'ಅಮ್ಮ', ಪುರಚ್ಚಿ ತಲೈವಿ ಎನಿಸಿಕೊಂಡಿದ್ದ ಜೆ ಜಯಲಲಿತಾ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾಗಿದೆ.

ಇದಾದ ಬಳಿಕ ಅಪೊಲೊ ಆಸ್ಪತ್ರೆಯ ಸುತ್ತಾ ಮುತ್ತಾ ಭಾರಿ ಭದ್ರತೆ ಒದಗಿಸಲಾಗಿದ್ದು, ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸದಂತೆ ಎಐಎಡಿಎಂಕೆ ಮನವಿ ಮಾಡಿದೆ. ಎಲ್ಲಾ ಅಪ್ಡೇಟ್ ಗಳು ಇಲ್ಲಿವೆ.[ಜಯಲಲಿತಾಗೆ ಹೃದಯಾಘಾತ, ಟ್ವಿಟ್ಟರ್ ನಲ್ಲೂ ಆಘಾತ]

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಭಾನುವಾರ ಸಂಜೆ ಜಯಾ ಅವರ ಆರೋಗ್ಯ ಸುಧಾರಣೆ ಬಗ್ಗೆ ಪ್ರಕಟಣೆ ಹೊರಡಿಸಿದ ಕೆಲ ಗಂಟೆಗಳಲ್ಲೇ ಹೃದಯಾಘಾತವಾದ ಸುದ್ದಿ ಹೊರ ಬಂದಿದೆ. ಇದಾರ ಬಳಿಕ ನಡೆದ ಘಟನಾವಳಿಗಳು ಇಲ್ಲಿವೆ...[ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಹೃದಯಾಘಾತ]

Heightened security at Apollo sparks rumours on Jayalalithaa's health

1.45: ಡಿಎಂಕೆ ಮುಖ್ಯಸ್ಥ ಕರುಣಾನಿಧಿ, ಸ್ಟಾಲಿನ್ ರಿಂದ ಜಯಲಲಿತಾ ಆರೋಗ್ಯ ವಿಚಾರಣೆ.
* ತಮಿಳುನಾಡಿನಲ್ಲಿ ಅಘೋಷಿತ ಬಂದ್ ಆಚರಿಸಲಾಗುತ್ತಿದ್ದು, ರಾಜ್ಯಪಾಲರಿಂದ ಬೆಳಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಲಿದ್ದಾರೆ.
ಮಧ್ಯರಾತ್ರಿ 1 : ರಾಜ್ಯಪಾಲ ವಿದ್ಯಾಸಾಗರ್ ಅವರಿಂದ ಮಾಹಿತಿ ಪಡೆದುಕೊಂಡ ಗೃಹ ಸಚಿವ ರಾಜನಾಥ್ ಸಿಂಗ್.
* ಅತ್ತೆ ಜಯಾ ನೋಡಲು ಬಂದ ಸೋದರ ಜಯಕುಮಾರ್ ಅವರ ಪುತ್ರಿ ದೀಪಾ ಅವರು ಅಪೋಲೋ ಆಸ್ಪತ್ರೆ ಬಳಿ ತಮ್ಮ ಸರದಿಗಾಗಿ ಕಾದಿರುವ ಚಿತ್ರ ಎಲ್ಲೆಡೆ ಕಂಡು ಬಂದಿದೆ.

* ಜಯಲಲಿತಾಗೆ ಹೃದಯಾಘಾತ, ಬೆಂಗಳೂರಿನ ಹಲವೆಡೆ ಹೈ ಅಲರ್ಟ್ ಘೋಷಣೆ : ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್.
* ಹತ್ತು ನಿಮಿಷದಲ್ಲೇ ಆಸ್ಪತ್ರೆಯಿಂದ ರಾಜ್ಯಪಾಲರು ಹೊರಕ್ಕೆ!, ರಾಜಭವನದಿಂದ ಪ್ರಕಟಣೆ ಹೊರಡಿಸುವ ಸಾಧ್ಯತೆ.
* ಆಸ್ಪತ್ರೆಗೆ ಬಂದ ಕೆಲ ಸಮಯದಲ್ಲೇ ಪ್ರಧಾನಿ ಮೋದಿ ಜತೆ ಫೋನ್ ಮೂಲಕ ಮಾತುಕತೆ.


* ಡಿಸೆಂಬರ್ 5 ರ ಬೆಳಗ್ಗೆ 7 ಗಂಟೆಗೆ ಡಿಜಿಪಿ ರಾಜೇಂದ್ರನ್ ನೇತೃತ್ವದಲ್ಲಿ ಪೊಲೀಸರ ಉನ್ನತ ಮಟ್ಟದ ಸಭೆ ನಿಗದಿ.
* ಅಣ್ಣಾ ಹಾಗೂ ಮದ್ರಾಸ್ ವಿವಿ ಶಾಲೆಗಳು ಸೋಮವಾರ ಬಂದ್, ಹಲವೆಡೆ ಪೆಟ್ರೋಲ್ ಬಂಕ್ ಬಂದ್

11.15: ಅಪೋಲೊ ಆಸ್ಪತ್ರೆಯಲ್ಲೇ ತುರ್ತು ಸಚಿವ ಸಂಪುಟ ಸಭೆ, ಪನೀರ್ ಸೆಲ್ವಂ ಸೇರಿದಂತೆ ಎಲ್ಲಾ ಸಚಿವರ ಉಪಸ್ಥಿತಿ.

11.10: ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಣೆ, ಹಲವೆಡೆ ರಾತ್ರಿ ಪಾಳೆಯದ ಬಸ್ ಸಂಚಾರ ರದ್ದು

10.55: ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ನಿಯೋಜನೆಗೆ ಡಿಜಿಪಿ ರಾಜೇಂದ್ರನ್ ಸೂಚನೆ


10.45 : ತಮಿಳುನಾಡಿಗೆ ದೆಹಲಿಯ ಏಮ್ಸ್ ತಂಡ ಆಗಮಿಸಲಿದ್ದು, ಪರಿಶೀಲನೆ ನಡೆಸಲಿದೆ.
10.40: ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಂದ ಅಪೋಲೊ ಆಸ್ಪತ್ರೆ ವೈದ್ಯರೊಡನೆ ಸಮಾಲೋಚನೆ.
10.30: ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರಿಂದ ಜಯಾ ಅವರ ಆರೋಗ್ಯದ ಬಗ್ಗೆ ಕಳವಳ, ಶುಭಹಾರೈಕೆ.

Apollo Hospital

10.15: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
9.50: ನಿಯೋಜಿತ ರಾಜ್ಯಪಾಲ ವಿದ್ಯಾಸಾಗರ್ ಅವರು ಮುಂಬೈನಿಂದ ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ.
9.40: ಎಡಿಎಂಕೆ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದು, ಚೆನ್ನೈ ಪೊಲೀಸರು ಮುಂಜಾಗರೂಕತೆ ಕ್ರಮವಾಗಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.
9.35: ತಮಿಳುನಾಡಿನ ಸಚಿವರು, ಅಧಿಕಾರಿಗಳು ಅಪೋಲೊ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ.
9.30: ಜಯಲಲಿತಾ ಅವರಿಗೆ ಸಂಜೆ 4.30ಕ್ಕೆ ಹೃದಯಾಘಾತವಾಗಿದೆ. 9.30ರ ಸುಮಾರಿಗೆ ಅಪೋಲೊ ಆಸ್ಪತ್ರೆ ದೃಢಪಡಿಸಿದೆ.
English summary
Hightened police presence outside Chennai's Apollo hospital has sparked off rumours of J Jayalalithaa's health condition worsening. The AIADMK however, maintains that the Tamil Nadu Chief Minister is completely alright. Latest updates and development is here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X