ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು ಆಮದು ಪ್ರಕರಣದಲ್ಲಿ ಶಶಿಕಲಾ ಪತಿಗೆ 2 ವರ್ಷ ಜೈಲು

By Sachhidananda Acharya
|
Google Oneindia Kannada News

ಚೆನ್ನೈ, ನವೆಂಬರ್ 17: ಗಂಡನಿಗೂ ಜೈಲು, ಹೆಂಡತಿಗೂ ಜೈಲು.. ಇದು ಶಶಿಕಲಾ ನಟರಾಜನ್ ಮತ್ತು ಎಂ. ನಟರಾಜನ್ ದಂಪತಿಗಳ ಸದ್ಯದ ಪರಿಸ್ಥಿತಿ.

ಶುಕ್ರವಾರ ಮದ್ರಾಸ್ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದು ಶಶಿಕಲಾ ಪತಿ ಎಂ. ನಟರಾಜನ್ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

HC confirms jail term for huband of Sasikala in Lexus car import case

1994ರಲ್ಲಿ ಟೊಯೊಟಾ ಲೆಕ್ಸಸ್ ಎಂಬ ಐಷಾರಾಮಿ ಕಾರನ್ನು ಆಮದು ಮಾಡಿಕೊಂಡ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಟರಾಜನ್ ಸೇರಿ ನಾಲ್ಕು ವ್ಯಕ್ತಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು.

ಈ ಕಾರು ಆಮದು ಪ್ರಕರಣದಲ್ಲಿ ನಾಲ್ವರು ಸರಕಾರಕ್ಕೆ 1.06 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಮತ್ತು ನಾಲ್ಕೂ ಜನ ಅಪರಾಧಿಗಳಿಗೆ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಇದರ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಮೇಲ್ಮನವಿ ತಿರಸ್ಕರಿಸಿರುವ ಮದ್ರಾಸ್ ಹೈಕೋರ್ಟ್ ಜೈಲು ಶಿಕ್ಷೆ ಎತ್ತಿ ಹಿಡಿದಿದೆ.

English summary
The Madras High Court today upheld a CBI court order convicting husband of jailed AIADMK leader V K Sasikala's sister in a Lexus car import case registered two decades ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X