ತಮಿಳುನಾಡಿನಲ್ಲಿ ಗಜ ಚಂಡಮಾರುತಕ್ಕೆ 11 ಮಂದಿ ಬಲಿ
Recommended Video

ಚೆನ್ನೈ, ನವೆಂಬರ್ 16: ಗಜ ಚಂಡ ಮಾರುತ ತಮಿಳುನಾಡಿಗೆ ತಲುಪಿದ್ದು ಶುಕ್ರವಾರ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.
ಕಡಲೂರು ನಲ್ಲಿ ಎರಡು ಮಂದಿ, ತಾಂಜಾವೂರ್ ನಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಚಂಡಮಾರುತವು 120 ಕೆಎಂಪಿಎಚ್ ವೇಗದಲ್ಲಿ ಆವರಿಸುತ್ತಿದೆ.
ತಮಿಳುನಾಡು ನೈಸರ್ಗಿಕ ಮತ್ತು ವಿಕೋಪ ಕೇಂದ್ರದ ವರದಿ ಪ್ರಕಾರ ತಗ್ಗು ಪ್ರದೇಶದಲ್ಲಿರುವ 76,290ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 300ಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳಲ್ಲಿ ಇರಿಸಲಾಗಿದೆ.ನಾಗಪಟ್ಟಣಂ, ಪುದುಕೊಟ್ಟಯ್, ತಿರುವರೂರ್ ನಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ.
ಚಂಡಮಾರುತ ಪಶ್ಚಿಮಕ್ಕೆ ಮಥ ಬದಲಾಯಿಸಲಿದ್ದು ಮುಂದಿನ ಆರು ಗಂಟೆಗಳ ಕಾಲ ಆರ್ಭಟ ಕಡಿಮೆ ಇರಲಿದೆ.ನಾಗಪಟ್ಟಣಂನಲ್ಲಿ ಹೆಚ್ಚು ಮಳೆಯಿಂದಾಗಿ ಭೂ ಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೆಲಸ ಮಾಡುತ್ತಿದೆ.
ದಕ್ಷಿಣ ರೈಲ್ವೆಯು ಚೆನ್ನೈನಿಂದ ನಾಗಪಟ್ಟಣಂ ತೆರಳಲಿರುವ ನಾಲ್ಕು ರೈಲು ಸೇವೆಯನ್ನು ರದ್ದುಗೊಳಿಸಿದೆ. ಹಾಗೆಯೇ ತಾಂಜಾವೂರ್, ತಿರುವರೂರ್, ನಾಗಪಟ್ಟಣಂಗೆ ತೆರಳುತ್ತಿದ್ದ ನಾಲ್ಕು ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ.

ತಮಿಳುನಾಡಿನ ಯಾವ್ಯಾವ ಭಾಗದಲ್ಲಿ ಎಷ್ಟು ಮಳೆ
ತಮಿಳುನಾಡುನಲ್ಲಿ ಈಗಾಗಲೇ ಆರು ಮಂದಿ ಮೃತಪಟ್ಟಿದ್ದು 81 ಸಾವಿರಕ್ಕೂ ಹೆಚ್ಚು ಜನರನ್ನು ತಗ್ಗು ಪ್ರದೇಶದಿಂದ ಸ್ಥಳಾಂತರಿಸಲಾಗಿದೆ. ಕಡಲೂರು, ನಾಗಪಟ್ಟಣ, ತೋಂಡಿ, ಪಂಬನ್ ಕರೈಕಲ್, ಪುದುಚೆರಿಯಲ್ಲಿ ಸುಮಾರು 3ರಿಂದ 8 ಸೆಂ.ಮೀ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 5.30ರವರೆಗೆ ನಾಗಪಟ್ಟಣದಲ್ಲಿ 5 ಸೆಂ,ಮೀ ಮಳೆಯಾಗಿದೆ ಎಂದು ಚೆನ್ನೈ ಹವಾಮಾನ ಇಲಾಖೆ ವರದಿ ಮಾಡಿದೆ.

471 ನಿರಾಶ್ರಿತ ಕೇಂದ್ರಗಳಿಗೆ 81 ಸಾವಿರ ಮಂದಿ ಸ್ಥಳಾಂತರ
ಗಜ ಚಂಡ ಮಾರುತದಿಂದಾಗಿ ಮಂದಿ ಸಾವನ್ನಪ್ಪುತ್ತಿದ್ದಾರೆ, ತಮಿಳುನಾಡು ಕರಾವಳಿ ಭಾಗದಲ್ಲಿರುವ ಜನರನ್ನು 471 ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನಾಗಪಟ್ಟಣಂ, ಪುದುಕೊಟ್ಟಯ್, ಕಡಲೂರು, ತಾಂಜಾವೂರ್ ಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.

ತಮಿಳುನಾಡಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಗಜ ಚಂಡ ಮಾರುತ ಅಪಾಯವನ್ನು ತಂದೊಡ್ಡುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ. ತಮಿಳುನಾಡು ನೈಸರ್ಗಿಕ ವಿಕೋಪ ಕೇಂದ್ರವು ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದರು, ಗಜ ಚಂಡ ಮಾರುತ ಅಪ್ಪಳಿಸುವ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ವಿವರವಾಗಿ ನೀಡಿದ್ದಾರೆ.

ಗಜ ಚಂಡ ಮಾರುತ: ವಿದ್ಯುತ್ ಸಂಪರ್ಕ ಕಡಿತ
ಗಲ ಚಂಡ ಮಾರುತ ಚೆನ್ನೈಗೆ ಅಪ್ಪಳಿಸಿರುವ ಕಾರಣ ಮರಗಳು ಧರೆಗುರುಳಿವೆ, ವಿದ್ಯುತ್ ಕಂಬಗಳು ನೆಲ ಕಂಡಿವೆ ಹಾಗಾಗಿ ವೇದಾರಣ್ಯ, ಮನ್ನಾರ್‌ಗುಡಿ, ಇರುಲ್ ನೀಕಿ, ತಿರುವರೂರ್ ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತ ಮಾಡಲಾಗಿದೆ.












Click it and Unblock the Notifications