ಜಯಾ ಅವರ ಕೊಡ್ನಾಡ್ ಎಸ್ಟೇಟ್ ಸೇರಿ ಎಲ್ಲೆಲ್ಲಿ ಐಟಿ ದಾಳಿ?

ಚೆನ್ನೈ, ನವೆಂಬರ್ 09: ಜಯಾಟಿವಿ ಕಚೇರಿ ಸೇರಿದಂತೆ 187 ಸ್ಥಳಗಳಲ್ಲಿ ಸುಮಾರು 700 ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ಮುಂದುವರೆಸಿದ್ದಾರೆ. ತಮಿಳುನಾಡು ಮಾತ್ರವಲ್ಲದೆ, ಆಂಧ್ರಪ್ರದೇಶ, ದೆಹಲಿ ಹಾಗೂ ಬೆಂಗಳೂರಿನಲ್ಲೂ ದಾಳಿ ನಡೆಸಲಾಗಿದೆ.

ಮೊದಲಿಗೆ ಚೆನ್ನೈನಲ್ಲಿರುವ ದಿವಂಗತ ಜೆ ಜಯಲಲಿತಾ ಅವರ ಒಡೆತನದ ಜಯಾ ಟಿವಿ ಕಚೇರಿ ಅಮೇಲೆ ಐಟಿ ಇಲಾಖೆಯ 10 ಅಧಿಕಾರಿಗಳು ದಾಳಿ ನಡೆಸಿದರು. 'ಆಪರೇಷನ್ ಕ್ಲೀನ್ ಮನಿ' ಕಾರ್ಯಾಚರಣೆ ನಂತರ ಉಳಿದೆಡೆ ದಾಳಿ ಮುಂದುವರೆಸಲಾಗಿದೆ.

ಚಿತ್ರಗಳು: ಶಶಿಕಲಾ ನಟರಾಜನ್ ಸಾಮ್ರಾಜ್ಯದ ಮೇಲೆ ಐಟಿ ದಾಳಿ

From Jayalalithaa’s Kodanad hill retreat to TTV’s residence, here is where IT raids are taking place

ಜಯಾ ಅವರ ಸಮಸ್ತ ದಾಳಿಯ ಉಸ್ತುವಾರಿ ವಹಿಸಿಕೊಂಡಿರುವ ಶಶಿಕಲಾ ನಟರಾಜನ್ ಹಾಗೂ ಅವರ ಆಪ್ತರ ಮನೆ, ಕಚೇರಿ ಮೇಲೆ ಕೂಡಾ ದಾಳಿ ನಡೆಸಲಾಗಿದೆ. ಜಯಾ ಟಿವಿ ಮೂಲಕ ಬೇನಾಮಿ ಆಸ್ತಿ ಗಳಿಕೆ, ಅಕ್ರಮ ಹೂಡಿಕೆ, ಶೆಲ್ ಕಂಪನಿಗಳ ಮೇಲೆ ದೂರು ದಾಖಲಾದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.

ಐಟಿ ದಾಳಿ ನಡೆದ ಸ್ಥಳಗಳು:
* ಜಯಾ ಟಿವಿ, ಎಕ್ಕತ್ತುಹಂಗಲ್, ಚೆನ್ನೈ
* ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರ ಮನೈ ನಗರ, ಮನ್ನಾರ್ ಗುಡಿ ಮನೆ.
* ಶಶಿಕಲಾ ಅವರ ಸೋದರ ದಿವಾಕರನ್ ಅವರ ಸುಂದರ ಕೊಟೈ ನಿವಾಸ.
* ವಿವೇಕ ಜಯರಾಮನ್ ಅವರ ಚೆನ್ನೈ ನಿವಾಸ.
* ಶಶಿಕಲಾ ಕುಟುಂಬಸ್ಥರ ಒಡೆತನದ ಜಾಝ್ ಸಿನಿಮಾಸ್.
* ಕರ್ನಾಟಕದ ಎಐಎಡಿಎಂಕೆ ಕಾರ್ಯದರ್ಶಿ ಪುಗಳೆಂದಿ ಅವರ ಬೆಂಗಳೂರಿನ ನಿವಾಸ, ಕಚೇರಿ.
* ಡಾ. ನಮಧು ಎಂಜಿಆರ್ ಅವರ ಕಚೇರಿ.
* ಜಯಲಲಿತಾ ಅವರಿಗೆ ಸೇರಿರುವ ಕೊಡ್ನಾಡ್ ಎಸ್ಟೇಟ್
* ಶಶಿಕಲಾ ಅವರ ಸೋದರ ಸುಂದರವದನಮ್ ಅವರ ಗಾಂಧಿನಗರ, ಪುದುಕೊಟೈ ನಿವಾಸ.
* ಶಶಿಕಲಾ ಅವರ ಪತಿ ಎಂ ನಟರಾಜನ್ ಅವರ ತಂಜಾವೂರು ನಿವಾಸ.
(ಒನ್ಇಂಡಿಯಾಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+