ಪುದುಚೇರಿಯಲ್ಲಿ #RahulInsultsDalit ಟ್ರೆಂಡಿಂಗ್
ಚೆನ್ನೈ, ಡಿ. 09: ನ್ಯಾಷನಲ್ ಹೆರಾಲ್ಡ್ ನಿಂದ ಉಂಟಾಗಿರುವ ತೊಂದರೆಯ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಚೆನ್ನೈಯಲ್ಲಿ ಪ್ರವಾಹ ಪರಿಸ್ಥಿತಿ ಕಾಣಲು ಹೋಗಿದ್ದ ರಾಹುಲ್ ಅವರು ದಲಿತ ನಾಯಕರ ಕೈಯಲ್ಲಿ ಚಪ್ಪಲಿ ನೀಡಿ ಭಾರಿ ಪ್ರಮಾದ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿ ತಮಿಳುನಾಡಿನ ಕಾಂಗ್ರೆಸ್ಸಿಗರು ಅತಿಯಾದ ಸ್ವಾಮಿಭಕ್ತಿ ತೋರಿಸಿದರು. ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವರೊಬ್ಬರು ಚಪ್ಪಲಿಯನ್ನು ನೀಡಿ ಭಕ್ತಿ ಪ್ರದರ್ಶಿಸಿದ ಘಟನೆ ನಡೆದಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗುಲ್ಲೆದ್ದಿದೆ.

ಪುದುಚೇರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ತಾವು ಹಾಕಿಕೊಂಡಿದ್ದ ಶೂವನ್ನು ಬಿಚ್ಚಿಟ್ಟು ಬರಿಗಾಲಿನಲ್ಲಿ ನಡೆಯಲು ಮುಂದಾಗಿದ್ದಾರೆ.
RahulG is helping Chennai by lending his slippers to the old man, so that it doesn't get wet
#RahulInsultsDalit pic.twitter.com/hCkm20AgMR
— Sashi Kant (@the_sashiks) ಡಿಸೆಂಬರ್ 9, 2015 ರಾಹುಲ್ ಅವರು ಬರಿಗಾಲಿನಲ್ಲಿ ನಡೆಯಲು ಮುಂದಾಗಿದ್ದು ಕಂಡ ಮಾಜಿ ಕೇಂದ್ರ ಸಚಿವರ ವಿ. ನಾರಾಯಣ ಸ್ವಾಮಿ ಅವರು ರಾಹುಲ್ ಗೆ ತಾವು ತೊಟ್ಟಿದ್ದ ಚಪ್ಪಲಿಯನ್ನು ಬಿಟ್ಟು ರಾಹುಲ್ ಕಾಲಿಗೆ ತೊಡಿಸಲು ಹೋಗಿದ್ದಾರೆ.
Nehru-Gandhi Clad Looted India, Build Billion of $ Fortunes While Treating Dalits Like Dirt #RahulInsultsDalit https://t.co/bTqGG79e9J
— ABHISHEK£Ranjan£ (@ABhi14aug) ಡಿಸೆಂಬರ್ 9, 2015 ನಾರಾಯಣ ಸ್ವಾಮಿ ಅವರ ಸ್ವಾಮಿಭಕ್ತಿ ವಿಡಿಯೋ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
Its Narayanswami's personal choice, but it is low mental level of BJP Bhakt that will relate it to #Dalits. #RahulInsultsDalit Grow up Bhakt
— Idea of a Nation (@smohan2810) ಡಿಸೆಂಬರ್ 9, 2015 ವೀಡಿಯೋದಲ್ಲಿ ಇರುವುದಷ್ಟೇ ಸತ್ಯವಲ್ಲ. ರಾಹುಲ್ ಅವರು ಶೂ ವನ್ನು ತಮ್ಮ ಕೈಯಲ್ಲೇ ಹಿಡಿದು ಓಡಾಡಿದರು. ಭದ್ರತಾ ಸಿಬ್ಬಂದಿಗಳ ಕೈಗೂ ನೀಡುತ್ತಿರಲಿಲ್ಲ.
Hope Kumari Selja has watched d #RahulInsultsDalit vedio and would be shedding some tears in Rajya Sabha on intolerance of Rahul Gandhi!
— Nitin Bhardwaj (@nittin_) ಡಿಸೆಂಬರ್ 9, 2015 ನಾನು ಸೌಜನ್ಯಕ್ಕಾಗಿ ಅವರಿಗೆ ನನ್ನ ಚಪ್ಪಲಿಯನ್ನು ನೀಡಿದೆ ಅದರಲ್ಲಿ ತಪ್ಪೇನಿಲ್ಲ ಎಂದು ನಾರಾಯಣ ಸ್ವಾಮಿ ಸಮರ್ಧಿಸಿಕೊಂಡಿದ್ದಾರೆ.












Click it and Unblock the Notifications