ಜಲ್ಲಿಕಟ್ಟು; ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಜನವರಿ 18: ಸುಪ್ರೀಂ ಕೋರ್ಟ್ ತಡೆ ನಡುವೆಯೂ ತಮಿಳುನಾಡಿನ ಕೆಲವೆಡೆ ಜಲ್ಲಿಕಟ್ಟು ಆಚರಣೆ ನಡೆದಿದ್ದು ಪೊಲೀಸರು ನೂರಾರು ಮಂದಿಯನ್ನು ಬಂಧಸಿದ್ದರು. ಈ ಸಂಬಂಧ ಜನಾಕ್ರೋಶ ಮುಗಿಲು ಮುಟ್ಟಿದ್ದು ಜಲ್ಲಿಕಟ್ಟು ನಡೆಯುವಂತೆ ಮಂಗಳವಾರ ರಾತ್ರಿಯಿಂದಲೂ ಸಾವಿರಾರು ಜನರು ಚೆನ್ನೈನ ಮರೀನಾ ಬೀಚ್ ಬಳಿ ಪ್ರತಿಭಟಿಸುತ್ತಿದ್ದಾರೆ.

ಚೆನ್ನೈನ ಮರೀನಾ ಬೀಚ್ ನಲ್ಲಿ ನಿನ್ನೆ ರಾತ್ರಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು. ಅಲ್ಲದೆ ಪ್ರತಿಭಟನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದ್ದು ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಜಲ್ಲಿಕಟ್ಟು ವಿರೋಧಕ್ಕೆ ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜನರು ಸುಪ್ರೀಂ ಕೋರ್ಟ್ ವಿರುದ್ಧ ಕಿಡಿಕಾರಿದ್ದಾರೆ.[ಜಲ್ಲಿಕಟ್ಟು ಕ್ರೀಡೆ ಬಗ್ಗೆ ಸುಗ್ರೀವಾಜ್ಞೆ ತನ್ನಿ: ಶಶಿಕಲಾ ಆಗ್ರಹ]

Fight for Jallikattu becomes a people's movement in Tamilnadu

ಇನ್ನು ರಾಮೇಶ್ವರಂ ರೈಲ್ವೇ ನಿಲ್ದಾಣವನ್ನು ಪ್ರತಿಭಟನಾಕಾರರು ಆವರಿಸಿದ್ದು ರೈಲು ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಅಂತೆಯೇ ಕಾಂಚೀಪುರಂ ನಲ್ಲಿಯೂ ಜಲ್ಲಿಕಟ್ಟಿನ ಪರವಾಗಿ ಪ್ರತಿಭಟನೆ ಬುಗಿಲೆದ್ದಿದೆ.[ಜಲ್ಲಿಕಟ್ಟು ನಿಷೇಧ ಮುಂದುವರೆಯಲಿದೆ, ತ್ವರಿತ ಆದೇಶ ಸಾಧ್ಯವಿಲ್ಲ]

Fight for Jallikattu becomes a people's movement in Tamilnadu

ಸುಪ್ರೀಂ ಅದೇಶವಿದ್ದರೂ ಅಲಂಗನಲ್ಲೂರಿನಲ್ಲಿ ಮಂಗಳವಾರ ನಡೆದ ಜಲ್ಲಿಕಟ್ಟು ಆಚರಣೆಯಿಂದ ಪೊಲೀಸರು ನೂರಾರು ಮಂದಿಯನ್ನು ಬಂಧಿಸಿದ್ದರು. ಈ ಕಾರಣದಿಂದ ತಮಿಳುನಾಡಿನಾದ್ಯಂತ ಸಾರ್ವಜನಿಕರು ತೀವ್ರ ಆಕೋಶಗೊಂಡು ಪ್ರತಿಭಟನೆಗೆ ಮುಂದಾಗಿದ್ದು, ತಮಿಳುನಾಡಿನಲ್ಲಿ ಖಾಸಗಿ, ಸರ್ಕಾರಿ ಕಾಲೇಜುಗಳೆನ್ನದೆ ವಿದ್ಯಾರ್ಥಿಗಳು ಧರಣಿ ನಿರತರಾಗಿ ಕಾಂಚೀಪುರಂ, ವೆಲ್ಲುಪುರಂ, ಚೆನ್ನೈ, ಮದುರೈ,ರಾಮೇಶ್ವರಂ ಸೇರಿದಂತೆ ಹಲವು ನಗರದ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇದರಿಂದ ರಸ್ತೆ ಸಂಚಾರ ತೀವ್ರ ಅಸ್ತವ್ಯಸ್ತವಾಗಿದೆ.

Fight for Jallikattu becomes a people's movement in Tamilnadu

ಮಧುರೈನಲ್ಲಿ ಜನರು ಜಲ್ಲಿಕಟ್ಟು ಆಚರಣೆಗಾಗಿ ಎಂತಹ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ. ಇನ್ನು ಕೆಲವರು ತಮಿಳುನಾಡು ಸರಕಾರದ ಮೇಲೆ ಜಲ್ಲಿಕಟ್ಟು ಆಚರಿಸುವಂತೆ ಮಾಡಲು ಒತ್ತಡ ಹಾಕುತ್ತಿದ್ದಾರೆ. ಜಲ್ಲಿಕಟ್ಟಿಗಾಗಿ ತಮಿಳುನಾಡಿನಲ್ಲಿ ಜನರು ಒಗ್ಗಟ್ಟು ಪ್ರದರ್ಶಿಸುತ್ತಿದ್ದು ಇದಕ್ಕೆ ರಜನೀಕಾಂತ್, ವಿಜಯ್ , ಸೂರ್ಯ ಸೇರಿದಂತೆ ಅನೇಕ ತಾರಾಗಣವೂ ಬೆಂಬಲನೀಡಿದೆ. ಕೆಲವರು ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Focus on Jallikattu shifted from Alanganallur to Chennai's Marina beach on Tuesday night and the protests have only been gathering momentum ever since. Thousands of people are gathering at the Marina beach while protests have also broken out in various districts of Tamil Nadu.
Please Wait while comments are loading...