ಶಶಿಕಲಾಗೆ 'ಟೋಪಿ', ಪನ್ನೀರ್‌ ಸೆಲ್ವಂಗೆ 'ವಿದ್ಯುತ್ ಕಂಬ'

ಚೆನ್ನೈ, ಮಾರ್ಚ್. 23 : ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಡುವೆ ಹಗ್ಗ ಜಗ್ಗಾಟಕ್ಕೆ ಕೊನೆಗೂ ಚುನಾವಣೆ ಆಯೋಗ ಮಂಗಳ ಹಾಡಿದೆ.

ಜಯಲಲಿತಾ ಅವರ ನಿಧನದಿಂದಾಗಿ ತೆರವಾಗಿದ್ದ ಕೆ. ಆರ್ ನಗರ ಕ್ಷೇತ್ರಕ್ಕೆ ಉಪಚುನವಾಣೆಗೆ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಅವರ ಬಣದ ಪಕ್ಷಕ್ಕೆ 'ಎಐಎಡಿಂಎಕೆ ಪುರತಚಿ ಥಲೈವಿ ಅಮ್ಮ' ಎಂಬ ಹೆಸರು ಹಾಗೂ 'ವಿದ್ಯುತ್‌ ಕಂಬ'ದ ಚಿಹ್ನೆ ನೀಡಲಾಗಿದೆ. ಇನ್ನು ಶಶಿಕಲಾ ಬಣಕ್ಕೆ 'ಟೋಪಿ' ಚಿಹ್ನೆ ಹಾಗೂ 'ಎಐಎಡಿಂಎಕೆ ಅಮ್ಮ' ಹೆಸರನ್ನು ಅಂತಿಮಗೊಳಿಸಿದೆ.

ec-gives-auto-rikshaw-symbol-sasikala-s-faction-electricity-poll-symbol-to-ops-camp

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಸಾವಿನಿಂದ ತೆರವಾಗಿದ್ದ ಆರ್.ಕೆ. ನಗರ ಕ್ಷೇತದ ಚುನಾವಣೆ ಹಿನ್ನಲೆ, ಪಕ್ಷದ ಹೆಸರು ಹಾಗೂ ಚಿಹ್ನೆಗಾಗಿ ಪನ್ನೀರ್ ಸೆಲ್ವಂ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.

ಈ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು, ಎಐಎಡಿಎಂಕೆ ಹೆಸರು ಹಾಗೂ ಎರಡು ಎಲೆಗಳಿರುವ ಚಿಹ್ನೆಯ ಬಳಕೆಯ ಮೇಲೆ ಮಾರ್ಚ್ 22ರ ಮಧ್ಯರಾತ್ರಿ ತಾತ್ಕಾಲಿಕ ತಡೆ ಹೇರಿತ್ತು.

ಜಯಲಲಿತಾ ಅವರ ನಿಧನದ ನಂತರ, ಪಕ್ಷದಲ್ಲಿ ಪನ್ನೀರ್ ಸೆಲ್ವಂ ಬಣ ಹಾಗೂ ಶಶಿಕಲಾ ಅವರ ಬಣಗಳಾಗಿ ಇಬ್ಭಾಗವಾಗಿದೆ. ಏಪ್ರಿಲ್ 12ರಂದು ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+