ತಮಿಳುನಾಡು ಮಾಜಿ ಸಚಿವರ ಮನೆ ಮೇಲೆ ಡಿವಿಎಸಿ ದಾಳಿ

ಚೆನ್ನೈ, ಡಿಸೆಂಬರ್ 15: ತಮಿಳುನಾಡು ಮಾಜಿ ಸಚಿವ ಎಐಎಡಿಎಂಕೆ ನಾಯಕ ತಂಗಮಣಿ ಒಡೆತನದ ಆಸ್ತಿಗಳ ಮೇಲೆ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ದಾಳಿ ನಡೆಸಿದೆ.

ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಎಐಎಡಿಎಂಕೆ ಮಾಜಿ ಸಚಿವರ ಮನೆಗಳ ಮೇಲೆ ನಡೆದ ಐದನೇ ದಾಳಿ ಇದಾಗಿದೆ. ಇದಕ್ಕೂ ಮೊದಲು ಎಂ ಆರ್ ವಿಜಯಭಾಸ್ಕರ್, ಎಸ್ ಪಿ ವೇಲುಮಣಿ, ಕೆ ಸಿ ವೀರಮಣಿ ಮತ್ತು ಸಿ.ವಿಜಯಭಾಸ್ಕರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.

ಕರೂರು ಸಮೀಪದ ವೇಲಾಯುತಂಪಾಳ್ಯದ ಕುಲಗೌಂಡನೂರು ಪ್ರದೇಶದಲ್ಲಿ ವಾಸವಿರುವ ಮಾಜಿ ಸಚಿವ ತಂಗಮಣಿ ಅವರ ಸಂಬಂಧಿ ವಸಂತಿ ಸುಬ್ರಮಣಿ ಅವರ ಮನೆ ಹಾಗೂ ಕರೂರು-ಕೊಯಮತ್ತೂರು ರಸ್ತೆಯಲ್ಲಿರುವ ಜಯಶ್ರೀ ಸೆರಾಮಿಕ್ಸ್‌ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

DVAC Raids At Former AIADMK Minister Thangamanis Premises

ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಎಐಎಡಿಎಂಕೆ ಮಾಜಿ ಸಚಿವರ ಮನೆಗಳ ಮೇಲೆ ನಡೆದ ಐದನೇ ದಾಳಿ ಇದಾಗಿದೆ. ಇದಕ್ಕೂ ಮೊದಲು ಎಂ ಆರ್ ವಿಜಯಭಾಸ್ಕರ್, ಎಸ್ ಪಿ ವೇಲುಮಣಿ, ಕೆ ಸಿ ವೀರಮಣಿ ಮತ್ತು ಸಿ.ವಿಜಯಭಾಸ್ಕರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.

ತಮಿಳುನಾಡಿನ ಚೆನ್ನೈ, ನಾಮಕ್ಕಲ್, ಈರೋಡ್, ವೆಲ್ಲೂರ್, ಸೇಲಂ, ಕರೂರ್, ತಿರುಪ್ಪೂರ್, ಕೊಯಮತ್ತೂರು ಮಾತ್ರವಲ್ಲದೇ ಕರ್ನಾಟಕ ಮತ್ತು ಆಂಧ್ರಪ್ರದೇಶದ 69 ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆಸಿವೆ. ಚೆನ್ನೈ ನಗರವೊಂದರಲ್ಲೇ 14 ಸ್ಥಳಗಳಲ್ಲಿ ತನಿಖೆ ನಡೆಸಲಾಗಿದೆ.

ತಂಗಮಣಿ ಅವರು ಅಕ್ರಮ ಆಸ್ತಿ ಸಂಗ್ರಹದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಲೆ ಬೀಸಿದ ತಮಿಳುನಾಡಿನ ಐದನೇ ಎಐಎಡಿಎಂಕೆ ಧುರೀಣರಾಗಿದ್ದಾರೆ. ಎಂ.ಆರ್.ವಿಜಯ ಭಾಸ್ಕರ್, ಎಸ್.ಪಿ.ವೇಲುಂನಿ, ಕೆ.ಸಿ.ವೀರಮಣಿ ಮತ್ತು ಸಿ.ವಿಜಯಭಾಸ್ಕರ್ ಇತರ ನಾಲ್ಕರಾಗಿದ್ದಾರೆ.

ಜಾರಿ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ಅಧಿಕಾರಿಗಳು ಚೆನ್ನೈ, ಕರೂರು ಮತ್ತು ನಾಮಕ್ಕಲ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+