ಸದ್ಯಕ್ಕೆ ರಾಜ್ಯಕ್ಕೆ ದೇಶಿಯ ವಿಮಾನ ಸೇವೆ ಬೇಡ ಎಂದ ತಮಿಳುನಾಡು

ಚೆನ್ನೈ, ಮೇ 22 : ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಮೇ 31ರ ತನಕ ವಿಮಾನ ಸಂಚಾರ ಆರಂಭ ಮಾಡುವುದು ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,967.

Recommended Video

      ಕರ್ನಾಟಕ ಗಡಿಯಲ್ಲಿ ಕನ್ನಡಿಗರ ಮೇಲೆ ತಮಿಳುನಾಡು ಪೊಲೀಸರ ದರ್ಪ | Oneindia Kannada

      ಕೇಂದ್ರ ವಿಮಾನಯಾನ ಸಚಿವಾಲಯ ಮೇ 25ರಿಂದ ದೇಶಿಯ ವಿಮಾನ ಸೇವೆ ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ, ತಮಿಳುನಾಡು ಸರ್ಕಾರ ಮೇ 31ರ ತನಕ ವಿಮಾನ ಸೇವೆ ರಾಜ್ಯದಲ್ಲಿ ಬೇಡ ಎಂದು ಮನವಿ ಮಾಡಿದೆ.

      ವಿಮಾನ ಸೇವೆ ಆರಂಭವಾದರೆ ಕೊರೊನಾ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಲಿದ್ದು, ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಚೆನ್ನೈನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ ಎಂದು ತಮಿಳುನಾಡು ಹೇಳಿದೆ.

      Dont Need Flight Service Till May 31 Says Tamil Nadu

      ಲಾಕ್ ಡೌನ್ ಪರಿಣಾಮ ಚೆನ್ನೈ ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದಾಗಿ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರಿಗೂ ತೊಂದರೆ ಆಗಬಹುದು. ಆದ್ದರಿಂದ, ವಿಮಾನ ಸಂಚಾರ ಆರಂಭಿಸುವುದು ಬೇಡ ಎಂದು ಮನವಿ ಮಾಡಿದೆ.

      ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರು ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯವಿಲ್ಲ ಎಂದು ವಿಮಾನಯಾನ ಸಚಿವಾಲಯ ಹೇಳಿದೆ. ಆದರೆ, ತಮಿಳುನಾಡು ಸರ್ಕಾರ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿಸಿದೆ.

      ವಂದೇ ಭಾರತ್ ಮಿಷನ್ ಅಡಿಯಲ್ಲಿ ಚೆನ್ನೈಗೆ ಈ ತಿಂಗಳಿನಲ್ಲಿ ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಆಗಮಿಸಿವೆ. ದುಬೈನಿಂದ ಆಗಮಿಸಿದ ವಿಮಾನದಲ್ಲಿ 365 ಜನರು ವಾಪಸ್ ಆಗಿದ್ದಾರೆ.

      ದೇಶದಲ್ಲಿಯೇ ಕೊರೊನಾ ಸೋಂಕಿತರು ಹೆಚ್ಚು ಇರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು 2ನೇ ಸ್ಥಾನದಲ್ಲಿದೆ. 41,642 ಪ್ರಕರಣಗಳಿಂದ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ತಮಿಳುನಾಡು 13,967 ಪ್ರಕರಣದಿಂದ 2ನೇ ಸ್ಥಾನದಲ್ಲಿದೆ. ಅದರಲ್ಲೂ ಚೆನ್ನೈನಲ್ಲಿ ಸೋಂಕಿತರ ಸಂಖ್ಯೆ 8,801.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+