ಜಯಲಲಿತಾ ಗುಣಮುಖ, ಡಿಸ್ಚಾರ್ಜ್ ಗೆ ಮುಹೂರ್ತ ಸನ್ನಿಹಿತ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 12: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯ ಪೂರ್ಣವಾಗಿ ಸುಧಾರಿಸಿದ್ದು, ಅವರಿಗೆ ಆರಾಮದಾಯಕ ವೆನಿಸಿದಾಗ ಯಾವಾಗ ಬೇಕಾದರೂ ಮನೆಗೆ ತೆರಳಬಹುದು ಎಂದು ಅಪೊಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

2 ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಆಗಿದ್ದ ಸೋಂಕು ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿದೆ ಎಂದು ಅಪೊಲೋ ಆಸ್ಪತ್ರೆಯ ಚೇರ್ಮನ್ ತಿಳಿಸಿದ್ದಾರೆ.

jaya

ಆಸ್ಪತ್ರೆಯಲ್ಲಿ ಡಾಕ್ಟರ್ ಪ್ರದೀಪ್ ರೆಡ್ಡಿಯವರು ಮಾಧ್ಯಮದವರ ಮುಂದೆ ಮುಖ್ಯಮಂತ್ರಿಗಳ ಆರೋಗ್ಯದಲ್ಲಿ ಗಮನೀಯ ಸುಧಾರಣೆಯಾಗಿದೆ, ಮುಂದಿನ ದಿನಗಳಲ್ಲಿ ಆರೋಗ್ಯವಾಗಿ ಮನೆಗೆ ಯಾವಾಗ ಬೇಕಾದರೂ ತೆರಳಬಹುದು ಎಂದು ಹೇಳಿದ್ದರು.[ಆಸ್ಪತ್ರೆಯಿಂದಲೇ ಜಯಲಲಿತಾ ಆಡಳಿತ ನಡೆಸುತ್ತಿದ್ದಾರೆ: ಪಕ್ಷ]

ಹಾಗೆಯೇ ತಮಿಳುನಾಡು ಮುಖ್ಯಮಂತ್ರಿ ಕಾಯಿಲೆಯಿಂದ ಗುಣಮುಖರಾಗಿ ಆರೋಗ್ಯ ಸುಧಾರಿಸಲು ತಮಿಳುನಾಡಿನಾದ್ಯಂತ ಪ್ರಾರ್ಥನೆ, ಪೂಜೆಗಳು ವಿವಿಧ ಮಾದರಿಯಲ್ಲಿ ನೆರವೇರಿದ್ದವು.

ಜಯಾ ಆಸ್ಪತ್ರೆಯಲ್ಲಿರುವವರೆಗೂ ಓ.ಪನ್ನಿರ್ ಸೆಲ್ವಂ ಅವರ ಮುಖಂಡತ್ವದಲ್ಲಿ ತಮಿಳುನಾಡಿದನ ಆಡಳಿತವನ್ನು ನಡೆಸಲಾಗುತ್ತಿತ್ತು. ಇನ್ನು ಆರೋಗ್ಯದಲ್ಲಿ ಸುಧಾರಣೆ ಕಂಡಿರವ ಜಯಲಲಿತಾ ಅವರು ರಾಜ್ಯದ ರಾಜಕಾರಣದಲ್ಲಿ ಹೇಗೆ ಸಕ್ರೀಯವಾಗಿ ಭಾಗವಹಿಸುವರು ಎಂಬುದು ಮುಂದಿನ ಪ್ರಶ್ನೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil Nadu chief minister is doing well and she can leave hospital when she feels fit said her doctor today. She has been in hospital for two months now and is doing well the doctor also said.
Please Wait while comments are loading...