ನಯನತಾರಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ರಕ್ತಕಣ್ಣೀರ್ ನಟನಿಗೆ ಕೊಕ್

ಚೆನ್ನೈ, ಮಾರ್ಚ್ 25: ನಟಿ ನಯನತಾರಾ ಅವರ ಮುಂಬರುವ ಚಿತ್ರದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕೆ ರಕ್ತಕಣ್ಣೀರ್ ಖ್ಯಾತಿಯ ಹಿರಿಯ ನಟ ರಾಧಾ ರವಿ ಅವರನ್ನು ಡಿಎಂಕೆ ಪಕ್ಷದಿಂದ ಇಂದು ಉಚ್ಚಾಟನೆ ಮಾಡಲಾಗಿದೆ.

'ಕೊಲಯುತ್ತಿಲ್ ಕಾಲಂ' ತಮಿಳು ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ರಾಧಾ ರವಿ ಅವರು ಪಾಲ್ಗೊಂಡಿದ್ದರು. 'ನಯನತಾರಾ ಅವರು 'ಭೂತ' ಹಾಗೂ ಸೀತೆಯ ಪಾತ್ರ ಎರಡು ಪಾತ್ರ ನಿರ್ವಹಿಸಿದ್ದಾರೆ. ಹಿಂದೆಲ್ಲ ದೇವತೆಯ ಪಾತ್ರ ಎಂದರೆ ಕೆಆರ್ ವಿಜಯ ಅವರು ಮೊದಲ ಆಯ್ಕೆಯಾಗಿರುತ್ತಿದ್ದರು. ಈಗ ಯಾರು ಬೇಕಾದರೂ ದೇವತೆಯ ಪಾತ್ರವನ್ನು ನಿರ್ವಹಿಸಲು ಆಯ್ಕೆ ಮಾಡಲಾಗುತ್ತಿದೆ. ನೋಡಿದ ತಕ್ಷಣ ನಮಸ್ಕಾರ(ಕುಂಬುಡುಣು) ಮಾಡಬೇಕು ಅನಿಸುವವರನ್ನು ಪಾತ್ರಕ್ಕೆ ಆಯ್ಕೆ ಮಾಡಬಹುದು ಅಥವಾ ನೋಡಿದ ತಕ್ಷಣ ಕರೆಯಬೇಕು(ಕೂಪುಡುಣು) ಅಂತಾ ಅನಿಸುವವರನ್ನು ಆರಿಸಬಹುದು
ಎಂದು ರಾಧಾರವಿ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಧಾರವಿ ಹೇಳಿಕೆಯನ್ನು ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಚಿತ್ರ ತಯಾರಕ ವಿಘ್ನೇಶ್ ಶಿವನ್ ಮುಂತಾದವರು ಸಾಮಾಜಿಕ ಜಾಲ ತಾಣಗಳಲ್ಲಿ ಟೀಕಿಸಿದ್ದರು. ಈ ಎಲ್ಲಾ ಬೆಳವಣಿಗಳನ್ನು ಗಮನಿಸಿದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ರಾಧಾರವಿ ಅವರನ್ನು ಅಮಾನತು ಮಾಡಿದ್ದಾರೆ. ಮಾರ್ಚ್ 24ರಿಂದಲೇ ಶಿಸ್ತು ಪರಿಶೀಲನಾ ಸಮಿತಿಯಿಂದ ತನಿಖೆ ಆರಂಭಗೊಂಡಿದೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಅನ್ಬಳಗನ್ ಹೇಳಿದ್ದಾರೆ.

DMK suspends Radha Ravi for comments against Actress Nayanthara

ಸಾಹಿತಿ ವೈರಮುತ್ತು ವಿರುದ್ಧ ಮೀಟೂ ಅಭಿಯಾನದ ಮೂಲಕ ಆರೋಪ ಹೊರೆಸಿದ್ದ ಗಾಯಕಿ ಚಿನ್ಮಯಿ ಅವರನ್ನು ಡಬ್ಬಿಂಗ್ ಯೂನಿಯನ್ ನಿಂದ ರಾಧಾ ರವಿ ಅವರು ಹೊರ ಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+