ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ತ್ಯಜಿಸಿದ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಸುಬ್ಬುಲಕ್ಷ್ಮಿ ಜಗದೀಶನ್

|
Google Oneindia Kannada News

ಚೆನ್ನೈ, ಸೆಪ್ಟೆಂಬರ್‌ 20: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಮಾಜಿ ಕೇಂದ್ರ ಸಚಿವೆ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಉಪ ಪ್ರಧಾನ ಕಾರ್ಯದರ್ಶಿ ಸುಬ್ಬುಲಕ್ಷ್ಮಿ ಜಗದೀಶನ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ, ತಾವು ರಾಜಕೀಯ ತ್ಯಜಿಸುವ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಡಿಎಂಕೆ ಮಾಜಿ ಕೇಂದ್ರ ರಾಜ್ಯ ಸಚಿವೆ ಸುಬ್ಬುಲಕ್ಷ್ಮಿ ಜಗದೀಶನ್ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರಿಗೆ ರಾಜೀನಾಮೆಯನ್ನು ಕಳುಹಿಸಿ ನಾನು ರಾಜಕೀಯ ಜೀವನ ತ್ಯಜಿಸುತ್ತೇನೆ ಎಂದು ತಿಳಿಸಿದ್ದಾರೆ. ಇದೀಗ ನಮ್ಮ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಉತ್ತಮ ಕಾರ್ಯಗಳಿಗಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದಕ್ಕೆ ನನಗೆ ಸಂತೋಷವಾಗಿದೆ, ನಾನು ದೀರ್ಘಾವಧಿಯವರೆಗೆ ರಾಜಕೀಯದಿಂದ ನಿವೃತ್ತಿ ಹೊಂದಲು ಬಯಸುತ್ತೇನೆ. ಇದಕ್ಕಾಗಿ ನಾನು ಪಕ್ಷಕ್ಕೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರಿಗೆ ಆಗಸ್ಟ್ 29 ರಂದು ರಾಜೀನಾಮೆ ಕಳುಹಿಸಿದ್ದೇನೆ ಎಂದರು.

Periyar Birthday- ಕನ್ನಡಿಗನಿಂದ ಹುಟ್ಟಿದ ದ್ರಾವಿಡ ಚಳವಳಿ; ಹಿಂದೂ ಧರ್ಮ, ದೇವರು ತಿರಸ್ಕರಿಸಿದ ಇವಿಆರ್ ಬದುಕಿನತ್ತ ಒಂದು ನೋಟPeriyar Birthday- ಕನ್ನಡಿಗನಿಂದ ಹುಟ್ಟಿದ ದ್ರಾವಿಡ ಚಳವಳಿ; ಹಿಂದೂ ಧರ್ಮ, ದೇವರು ತಿರಸ್ಕರಿಸಿದ ಇವಿಆರ್ ಬದುಕಿನತ್ತ ಒಂದು ನೋಟ

DMK Deputy General Secretary Subbulakshmi Jagadeesan quit politics

ಸುಬ್ಬುಲಕ್ಷ್ಮಿ ಜಗದೀಶನ್ ಅವರು 2004 ರಿಂದ 2009 ರವರೆಗೆ ಭಾರತದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯಗಳ ಮಾಜಿ ಸಚಿವರಾಗಿದ್ದರು. ನಂತರ ಅವರು ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿರಲಿಲ್ಲ. ಆದರೆ ಡಿಎಂಕೆ ಪಕ್ಷದ ಪ್ರಮುಖ ಹುದ್ದೆಯಾದ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

2021ರ ರಾಜ್ಯ ಚುನಾವಣೆಯಲ್ಲಿ, ಜಗದೀಶನ್ ಅವರು ಮೊಡಕುರಿಚಿಯಿಂದ ಶಾಸಕರಾಗಿ ಸ್ಪರ್ಧಿಸಿದರು. ಅಲ್ಲಿ ಅವರು ಬಿಜೆಪಿ ಅಭ್ಯರ್ಥಿ ಸಿ. ಸರಸ್ವತಿ ವಿರುದ್ಧ ಸೋತರು. ಈರೋಡ್ ಜಿಲ್ಲೆಯ ಸ್ಥಳೀಯ ಡಿಎಂಕೆ ನಡುವಿನ ಸುದೀರ್ಘ ಹೋರಾಟದ ನಂತರ ಅವರು ಮೊಡಕುರಿಚಿಯಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದರು. ಅವರು ಹಿರಿಯ ನಾಯಕಿ ಮತ್ತು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿರುವುದರಿಂದ ಅವರು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಗೆಲ್ಲಲು ವಿಫಲರಾದರು. ಚುನಾವಣೆಯ ನಂತರ ತನ್ನ ಸೋಲಿಗೆ ಪಕ್ಷದ ಸ್ಥಳೀಯ ಕಾರ್ಯಕರ್ತರನ್ನು ದೂಷಿಸಿದ್ದರು. ಸೇಡಿನ ಕಾರಣಕ್ಕಾಗಿ ತನಗಾಗಿ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದ್ದರು.

ಆರ್ಥಿಕ ಅಭಿವೃದ್ಧಿಗೆ ನಿಮ್ಮ ನೋಡಿ ಕಲಿಯುವುದು ಏನಿದೆ? ಕೇಂದ್ರ ಸರ್ಕಾರಕ್ಕೆ ಪಳನಿವೇಲ್ ತರಾಟೆಆರ್ಥಿಕ ಅಭಿವೃದ್ಧಿಗೆ ನಿಮ್ಮ ನೋಡಿ ಕಲಿಯುವುದು ಏನಿದೆ? ಕೇಂದ್ರ ಸರ್ಕಾರಕ್ಕೆ ಪಳನಿವೇಲ್ ತರಾಟೆ

English summary
Former Union Minister for Social Justice and Empowerment and Dravida Munnetra Kalagam (DMK) Deputy General Secretary Subbulakshmi Jagadeesan has announced her decision to quit politics, resigning from the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X