ಡಿಎಂಕೆಯಲ್ಲಿ ಕಳವಳ; ಜಯಲಲಿತಾಗೆ ರಸಗವಳ

ಡಿಎಂಕೆಯಲ್ಲಿ ಕಳವಳ; ಜಯಲಲಿತಾಗೆ ರಸಗವಳ: ಈಗಾಗಲೇ ಅಳಗಿರಿ ಬೆಂಬಲಿಗರೇ ಹೆಚ್ಚಾಗಿರುವ ಡಿಎಂಕೆ ಮಧುರೈ ಜಿಲ್ಲಾ ಘಟಕವನ್ನು ವಿಸರ್ಜಿಸಲಾಗಿದೆ. ಇದರಿಂದ ಲೋಕಸಭಾ ಚುನಾವಣೆ ಪೂರ್ವ ಸಂದರ್ಭದಲ್ಲಿ ಪಕ್ಷದಲ್ಲಿ ಅಂತಃಕಲಹ ತಲೆದೋರಿರುವುದು ಪ್ರಧಾನಿ ಹುದ್ದೆಯತ್ತ ಕಣ್ಣಿಟ್ಟಿರುವ ಜಯಲಲಿತಾಗೆ ಆಪ್ಯಾಯಮಾನವಾಗಿದೆ.
( ಮುಂದಿನ ಪ್ರಧಾನಿ ತಮಿಳ್ನಾಡಿಂದಲೇ: AIADMK ಘೋಷಣೆ )
ಮೇಲ್ನೋಟಕ್ಕೆ, ನಟ ವಿಜಯಕಾಂತ್ ಅವರ DMDK ಜತೆ ಚುನಾವಣೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಅಪ್ಪ-ಮಗನ ಮಧ್ಯೆ ಕಲಹ ತಲೆದೋರಿದೆ. ಈ ಮೈತ್ರಿಯನ್ನು ಕೇಂದ್ರ ಮಾಜಿ ಸಚಿವ ಅಳಗಿರಿ (62) ವಿರೋಧಿಸುತ್ತಾ ಬಂದಿದ್ದಾರೆ. 14 ವರ್ಷಗಳ ಹಿಂದೆಯೂ ಅಪ್ಪನ ವಿರುದ್ಧ ಅಳಗಿರಿ ಭಿನ್ನ ಹಾದಿ ತುಳಿದಿದ್ದರು.
ಇದರಿಂದ ಕರುಣಾನಿಧಿ (89) ಕಿರಿಯ ಪುತ್ರ ಸ್ಟಾಲಿನ್ ಅನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವ ಸಾಧ್ಯತೆಗಳು ಮತ್ತಷ್ಟು ದಿಟ್ಟವಾಗಿವೆ. ಕಿರಿಯ ಮಗ ಸ್ಟಾಲಿನ್ ಸೋದರ ಅಳಗಿರಿ ವಿರುದ್ಧ ಅಪ್ಪ ಕರುಣಾನಿಧಿಗೆ ಬೆಂಬಲವಾಗಿ ನಿಂತಿದ್ದಾರೆ.












Click it and Unblock the Notifications