ಇನ್ಮುಂದೆ ನನ್ನ ಮಗನೇ ನನಗೆಲ್ಲ : ಸೌಂದರ್ಯ

Posted By:
Subscribe to Oneindia Kannada

ಚೆನ್ನೈ, ಸೆ. 18: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ ರಜನಿಕಾಂತ್ ಅವರು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಸುದ್ದಿ ನಿಜವಾಗಿದೆ. ಈ ಬಗ್ಗೆ ಸ್ವತಃ ಸೌಂದರ್ಯಾ ಅವರೇ ವೈವಾಹಿಕ ಜೀವನ ಮುರಿದು ಬಿದ್ದಿರುವುದಾಗಿ ಹೇಳಿದ್ದಾರೆ. ಇನ್ಮುಂದೆ ನನ್ನ ಮಗನೇ ನನಗೆಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಒಂದು ವರ್ಷದಿಂದ ಪತಿ ಅಶ್ವಿನ್ ರಾಮ್ ಕುಮಾರ್ ರಿಂದ ದೂರವಾಗಿದ್ದೇನೆ. ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸೌಂದರ್ಯ ರಜನಿಕಾಂತ್ ತಿಳಿಸಿದ್ದಾರೆ. 2010ರಲ್ಲಿ ಉದ್ಯಮಿ ಅಶ್ವಿನ್ ರಾಮ್‌ಕುಮಾರ್‌ರನ್ನು ಮದುವೆಯಾಗಿರುವ ಸೌಂದರ್ಯ ಅವರಿಗೆ ಒಂದು ವರ್ಷ ವಯಸ್ಸಿನ ವೇದ್ ಕೃಷ್ಣ ಎಂಬ ಹೆಸರಿನ ಮಗನಿದ್ದಾನೆ. ಇನ್ಮುಂದೆ ನನ್ನ ಮಗನೇ ನನಗೆ ಸರ್ವಸ್ವ ಎಂದು ಸೌಂದರ್ಯ ಹೇಳಿಕೊಂಡಿದ್ದಾರೆ. [ವಿಚ್ಛೇದನ ಸುದ್ದಿ ಖಚಿತಪಡಿಸಿದ ರಜನಿ ಪುತ್ರಿ ಸೌಂದರ್ಯ]

Divorce talks are on: Soundarya Rajinikanth

ನನ್ನ ದಾಂಪತ್ಯದ ಬಿರುಕಿನ ಬಗ್ಗೆ ಕೇಳಿ ಬರುತ್ತಿರುವ ಸುದ್ದಿ ನಿಜ. ನಾವಿಬ್ಬರೂ ಬೇರೆಯಾಗುವ ಬಗ್ಗೆ ತುಂಬಾ ಸಮಯಗಳಿಂದ ಚಿಂತಿಸಿದ್ದೇವು. ಇದೀಗ ಅದು ಪರಸ್ಪರ ಡೈವೋರ್ಸ್ ಮೂಲಕ ನೆರವೇರುತ್ತಿದೆ.


ನಮ್ಮ ಕೌಟುಂಬಿಕ ಸಮಾಚಾರ ಮತ್ತು ನಮ್ಮ ಖಾಸಗಿ ವಿಚಾರವನ್ನು ನೀವೆಲ್ಲರೂ ಗೌರವಿಸಬೇಕು" ಅಂತ ಸೌಂದರ್ಯ ರಜನಿಕಾಂತ್ ಅವರು ಟ್ವೀಟ್ ಮಾಡಿದ್ದಾರೆ.

ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಮಗಳು ಸೌಂದರ್ಯ ರಜನಿಕಾಂತ್ ಮತ್ತವರ ಪತಿ ಖ್ಯಾತ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಈಗಾಗಲೇ ಇವರಿಬ್ಬರು ಕೌಟುಂಬಿಕ ನ್ಯಾಯಾಲಕ್ಕೆ ವಿಚ್ಛೇದನ ಅರ್ಜಿ ಕೂಡ ಸಲ್ಲಿಸಿದ್ದಾರೆ. ಸೂಪರ್ ಸ್ಟಾರ್ ರಜನಿ ಅವರು ಹಲವು ಬಾರಿ ಸಂಧಾನ ಮಾತುಕತೆ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Soundarya, second daughter of superstar Rajinikanth and industrialist Ashwin Ravikumar got married here in 2010, and they have a one-year old son. She has confirmed that her marriage to industrialist Ashwin Ramkumar was coming to an end and that divorce talks have been initiated.
Please Wait while comments are loading...