ಹೊಸ ಪಕ್ಷ ಕಟ್ಟಿದ ದಿನಕರನ್ 'ಶನಿ' ಇದ್ದಂತೆ: ಎಐಎಡಿಎಂಕೆ ಶಾಸಕ

ಚೆನ್ನೈ, ಮಾರ್ಚ್ 15: ತಮಿಳುನಾಡು ರಾಜಕೀಯದಲ್ಲಿ ದಿನ ದಿನವೂ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ 'ಅಮ್ಮ' ಜಯಲಲಿತಾ ಅವರ ಮರಣಾನಂತರವಂತೂ ತಮಿಳುನಾಡಿನ ರಾಜಕೀಯದಲ್ಲಿ ಏನೆಲ್ಲ ಆಗುತ್ತಿದೆ. ಎಐಎಡಿಎಂಕೆ ಯಿಂದ ಬಂಡಾಯವೆದ್ದಿದ್ದ ಮುಖಂಡ ಟಿಟಿವಿ ದಿನಕರನ್ ಇಂದು(ಮಾ.15) ಹೊಸ ಪಕ್ಷ ಕಟ್ಟಿದ್ದಾರೆ.

ಅವರ ಹೊಸ ಪಕ್ಷ ''ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ' ಕುರಿತು ಪ್ರತಿಕ್ರಿಯೆ ನೀಡಿದ ಎಐಎಡಿಎಂಕೆ(All India Anna Dravida Munnetra Kazhagam) ಶಾಸಕ ಡಿ.ಜಯಕುಮಾರ್, 'ಟಿಟಿವಿ ದಿನಕರನ್ ಸೊಳ್ಳೆಯಂತೆ. ಅದು ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲವಲ್ಲ, ಹಾಗೇ! ಅದೊಂದು 'ಶನಿ'ಯಾಗಿತ್ತು. ಸದ್ಯ ನಮ್ಮ ಪಕ್ಷದಿಂದ ಆಚೆ ಹೋಗಿದೆ!' ಎಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Dhinakaran a shani that has gone now: AIADMK MLA

ಕಳೆದ ಡಿಸೆಂಬರ್ ನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಆರ್ ಕೆ ನಗರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ದಿನಕರನ್, ಎಐಎಡಿಎಂಕೆ ಯಿಂದ ಬಂಡಾಯವೆದ್ದಿದ್ದರು. ಅವರು ಜಯಾ ಆಪ್ತೆ ಶಶಿಕಲಾ ನಟರಾಜನ್ ಅವರ ಸಂಬಂಧಿ ಎಂಬುದೂ ಎಐಎಡಿಎಂಕೆ ನಾಯಕರು ಅವರನ್ನು ದೂರ ಇಟ್ಟಿರುವುದಕ್ಕೆ ಒಂದು ಕಾರಣ. ಆದರೆ ಇದೀಗ ಸ್ವತಂತ್ರವಾಗಿ ಅವರೊಂದು ಪಕ್ಷ ಕಟ್ಟಿರುವುದು ತಮಿಳುನಾಡು ರಾಜಕೀಯದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+