ವಿಶಾಲ್ ಕಚೇರಿ ಮೇಲೆ ದಾಳಿ ನಡೆಸಿಲ್ಲ: ಡಿಜಿಜಿಎಸ್ ಟಿಐ

Posted By:
Subscribe to Oneindia Kannada

ಚೆನ್ನೈ, ಅಕ್ಟೋಬರ್ 23: ಜಿಎಸ್ ಟಿ ಅಧಿಕಾರಿಗಳು ನಟ ವಿಶಾಲ್ ಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸೋಮವಾರ ವರದಿಯಾಗಿದೆ. ಆದರೆ ಅಂಥ ಯಾವ ದಾಳಿಯೂ ಚೆನ್ನೈ ವಲಯ ವಿಭಾಗದ ಜಿಎಸ್ ಟಿ ಅಧಿಕಾರಿಗಳಿಂದ ಆಗಿಲ್ಲ ಎಂಬ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ತಮಿಳು ನಟ ವಿಶಾಲ್ ನಿರ್ಮಾಣ ಸಂಸ್ಥೆ ಮೇಲೆ ಜಿಎಸ್ಟಿ ದಾಳಿ

ಡಿಜಿಜಿಎಸ್ ಟಿಐ ಅಧಿಕಾರಿಗಳು ಅಂಥ ಯಾವ ಶೋಧ ಕಾರ್ಯಾಚರಣೆಯನ್ನೂ ನಡೆಸಿಲ್ಲ ಮತ್ತು ಕೆಲವು ಮಾಧ್ಯಮಗಳಲ್ಲಿ ಹಾಗೆ ಮಾಡಿದ ವರದಿಗಳು ವಾಸ್ತವವಾಗಿ ತಪ್ಪು ಹಾಗೂ ಸುಳ್ಳು ಮಾಹಿತಿಗಳಿಂದ ಕೂಡಿರುವಂಥದ್ದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Letter

ಜಿಎಸ್ಟಿ ಗುಪ್ತಚರ ವಿಭಾಗದ ತಂಡವೊಂದು ವಿಶಾಲ್ ಫಿಲ್ಮ್ ಫ್ಯಾಕ್ಟರಿ ಮೇಲೆ ಮೇಲೆ ದಾಳಿ ನಡೆಸಿದೆ. ತಮಿಳುನಾಡು ಸಿನಿಮಾ ನಿರ್ಮಾಪಕ ಸಂಘದ ಅಧ್ಯಕ್ಷ ನಟ ವಿಶಾಲ್ ಗೆ ಸೇರಿದ ನಿರ್ಮಾಣ ಸಂಸ್ಥೆ ಮೇಲೆ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದಾಳಿ ನಡೆದಿದೆ. ವಡಪಳನಿಯಲ್ಲಿರುವ ಕಚೇರಿಯ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿತ್ತು.

ಆರಂಭದಲ್ಲಿ ಇದನ್ನು ಆದಾಯ ತೆರಿಗೆ ಇಲಾಖೆ ದಾಳಿ ಅಂತಲೂ ನಂತರ ಇದು ಜಿಎಸ್ಟಿ ಗುಪ್ತಚರ ಇಲಾಖೆ ದಾಳಿ ಅಂತಲೂ ಸುದ್ದಿ ಮಾಡಲಾಗಿತ್ತು. ಆದರೆ ಇದೀಗ ಅಧಿಕೃತವಾಗಿ ಅಂತಹ ಯಾವುದೇ ದಾಳಿ ನಡೆದಿಲ್ಲ ಎಂಬುದು ಖಾತ್ರಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
DGGSTI officers denied raid news on actor Vishal office. They denied raid news and claimed those news in media are false and incorrect.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ