ಹಣ ಸಿಗದೆ ರೊಚ್ಚಿಗೆದ್ದು, ಎಟಿಎಂ ಗಾಜು ಪುಡಿ ಪುಡಿ

Posted By:
Subscribe to Oneindia Kannada

ಚೆನ್ನೈ, ನವೆಂಬರ್, 14: ಎಟಿಎಂನಲ್ಲಿ ಹಣ ಸಿಗದಿದ್ದರಿಂದ ಸಹನೆ ಕಳೆದುಕೊಂಡ ಗ್ರಾಹಕನೊಬ್ಬ ಎಟಿಎಂ ಕೋಣೆಯ ಬಾಗಿಲ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಚೆನ್ನೈನಲ್ಲಿ ಭಾನುವಾರ ನಡೆದಿದೆ.

ನೋಟು ನಿಷೇಧ ಪರಿಣಾಮದಿಂದ ಇಲ್ಲಿಯ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಎಟಿಎಂ ಕಳೆದ ನಾಲ್ಕು ದಿನಗಳಿಂದ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿತ್ತು.

ಆದರೆ ಭಾನುವಾರ ರಾತ್ರಿ ಎಟಿಎಂ ಮುಂದೆ ನೇತು ಹಾಕಲಾಗಿದ್ದ ಔಟ್ ಆಫ್ ಸರ್ವಿಸ್ ಫಲಕವನ್ನು ತೆಗೆದು ಹಾಕಲಾಗಿತ್ತು. ಹಣ ಡ್ರಾ ಮಾಡಿಕೊಳ್ಳಲು ಜನರು ಕ್ಯೂಕಟ್ಟಿ ನಿಂತಿದ್ದರು.

ಆದರೆ ಎಟಿಎಂ ಯಂತ್ರದಿಂದ ಯಾವುದೇ ಹಣ ಬಾರದೇ ಇದ್ದುದರಿಂದ ರೊಚ್ಚಿಗೆದ್ದ ಅಪರಿಚಿತ ಗ್ರಾಹಕ ಕಲ್ಲಿನಿಂದ ಎಟಿಎಂ ಯಂತ್ರ ಕೋಣೆಯ ಬಾಗಿಲಿನ ಗಾಜನ್ನು ಕಲ್ಲಿನಿಂದ ಹೊಡೆದು ಪುಡಿ ಪುಡಿ ಮಾಡಿದ್ದಾನೆ. ಎಂದು ಪೊಲೀಸರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಎಟಿಎಂ ಯಂತ್ರಕ್ಕೆ ಯಾವುದೇ ರಕ್ಷಣಾ ಸಿಬ್ಬಂದಿಯನ್ನು ನೇಮಿಸಿರಲಿಲ್ಲ ಎಂಬುದು ಘಟನೆ ಬಳಿಕ ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ.

ಎಟಿಎಂ ಯಂತ್ರದ ಬಳಿಯಿರುವ ಸಿಸಿಟಿವಿ ಕ್ಯಾಮೆರಾ ಫೂಟೇಜ್ ನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Angered over ATM not dispensing cash, a customer reportedly broke the glass of an ATM in Chennai on Sunday. The local police have registered a case in this regard and have begun investigations.
Please Wait while comments are loading...