ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake news:ಹಸಿರು ಕ್ರಾಂತಿಯ ಹರಿಕಾರ ಡಾ. ಸ್ವಾಮಿನಾಥನ್ ನಿಧನ ಸುದ್ದಿ ಸುಳ್ಳು

|
Google Oneindia Kannada News

ಚೆನ್ನೈ, ಮೇ 24: ಭಾರತೀಯ ಹಳ್ಳಿಗರ ಆರ್ಥಿಕ ಸ್ವಾವಲಂಬನೆ, ಕೃಷಿ ಕ್ಷೇತ್ರದ ಬೆಳವಣಿಗೆ, ರೈತರ ಹಿತ ಕಾಪಾಡುವಲ್ಲಿ ನಿರಂತರವಾಗಿ ತೊಡಗಿರುವ ಹೆಮ್ಮೆಯ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರ ಡಾ. ಎಂ.ಎಸ್.ಸ್ವಾಮಿನಾಥನ್ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿದೆ.

ಆದರೆ, ಇದು ಸುಳ್ಳು ಸುದ್ದಿ, ಸ್ವಾಮಿನಾಥನ್(94) ಅವರು ಆರೋಗ್ಯವಾಗಿದ್ದಾರೆ ಎಂದು ಎಂಎಸ್ ಸ್ವಾಮಿನಾಥನ್ ಟ್ರಸ್ಟ್ ಸ್ಪಷ್ಟಪಡಿಸಿದೆ.

Death reports on of Dr M.S Swaminathan are fake

''ಕೃಷಿ ವಿಜ್ಞಾನಿ ಡಾ|| ಎಂ. ಎಸ್. ಸ್ವಾಮಿನಾಥನ್ ನಿಧನರಾಗಿದ್ದಾರೆ'' ಎಂದು ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದು ಗೊಂದಲ ಹೆಚ್ಚಾಗುವಂತೆ ಮಾಡಿತ್ತು.

Death reports on of Dr M.S Swaminathan are fake

ಆದರೆ, ನಂತರ ತಪ್ಪಿನ ಅರಿವಾಗಿ, ಹಳೆ ಟ್ವೀಟ್ ಡಿಲೀಟ್ ಮಾಡಿ, ಕ್ಷಮೆಯಾಚಿಸಿ ಮತ್ತೊಂದು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.

Death reports on of Dr M.S Swaminathan are fake

ಆದರೆ, ಟ್ವೀಟ್ ವೊಂದಕ್ಕೆ ಪ್ರತಿಕ್ರಿಯಿಸಿರುವ ಎಂಎಸ್ ಸ್ವಾಮಿನಾಥನ್ ಟ್ರಸ್ಟ್ (@mssrf) ಡಾ.ಎಂಎಸ್ ಎಸ್ ಆರೋಗ್ಯವಾಗಿದ್ದು, ಸಕ್ರಿಯವಾಗಿ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದೆ.

1990ರಲ್ಲಿ ಚೆನ್ನೈನಲ್ಲಿ ಸ್ಥಾಪನೆಯಾದ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೆಶನ್ ಸಂಸ್ಥೆಯು ಟ್ವಿಟ್ಟರಲ್ಲಿ ಬಂದಿರುವ ಸುಳ್ಳು ಸುದ್ದಿಯನ್ನು ಅಲ್ಲಗೆಳೆದಿದೆ.

ಕೃಷಿ ವಿಜ್ಞಾನಿ ದೇಶದ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಹಸಿರು ಕ್ರಾಂತಿಯ ಡಾ|| ಎಂ. ಎಸ್. ಸ್ವಾಮಿನಾಥನ್ ಅವರು , ಭಾರತ ದೇಶವನ್ನು ಎಲ್ಲ ರೀತಿಯ ಆಹಾರ ಧಾನ್ಯಗಳ ಆಮದುಗಳಿಂದ ಮುಕ್ತವಾಗಿಸಬೇಕೆಂಬ ಆಶಯ ಹೊಂದಿದವರು. ಆಧುನಿಕ ಬೇಸಾಯ ಪದ್ಧತಿಗಳ ಅಳವಡಿಕೆಯಿಂದಾಗುವ ಪ್ರಯೋಜನಗಳನ್ನು ರೈತಾಪಿ ಜನರಿಗೆ ಮನನ ಮಾಡಿಕೊಡುವುದಕ್ಕಾಗಿ ಡಾ. ಸ್ವಾಮಿನಾಥನ್ ಸಿದ್ದಪಡಿಸಿದ ವರದಿ, ಗೋಧಿ ಉತ್ಪಾದನೆಯನ್ನು ಆದ ಕ್ರಾಂತಿ ಎಲ್ಲವೂ ಭಾರತವನ್ನು ಆಹಾರ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ಸಾಗುವಂತೆ ಮಾಡಿದೆ.

English summary
Social media flooded with several messages on Dr Swaminathans death. Dr Swaminathan trust(@mssrf) has clarified Prof Swaminathan is fine please and attending to his routine work as usual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X