ತಮಿಳುನಾಡಿಗೂ ಕಾಲಿಟ್ಟ ಮಾರಕ ಕೊರೊನಾ ವೈರಸ್
ಚೆನ್ನೈ, ಮಾರ್ಚ್ 7: ಕೊರೊನಾ ವೈರಸ್ ಸೋಂಕು ಇಡೀ ದೇಶದ ತುಂಬ ವ್ಯಾಪಿಸುತ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಪಂಜಾಬ್ ನಂತರ ತಮಿಳುನಾಡ ಕೊರೊನಾ (ಕೋವಿಡ್ 19) ಕಾಲಿಟ್ಟಿದೆ.
ತಮಿಳುನಾಡಿನ ಚೆನ್ನೈನಲ್ಲಿ 46 ವರ್ಷದ ವ್ಯಕ್ತಿಗೆ ಕೊರೊನಾ ಇರುವುದು ದೃಡಪಟ್ಟಿದೆ. ಓಮನ್ ದೇಶದ ಮಸ್ಕತ್‌ಗೆ ತೆರಳಿದ್ದ ವ್ಯಕ್ಯಿಯೊಬ್ಬರಿಗೆ ಸೋಂಕು ತಗುಲಿದೆ. ಅವರನ್ನು ಚೆನ್ನೈನ ರಾಜೀವಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಮಿಳುನಾಡು ಹಾಗೂ ಲಡಾಕ್‌ನಲ್ಲಿ ಒಂದು ಕೊರೊನಾ ಸೋಂಕು ಪ್ರಕರಣ ದಾಖಲಾಗಿದೆ
ಫೆಬ್ರವರಿಯಲ್ಲಿ ಮಸ್ಕತ್‌ಗೆ ತೆರಳಿ ಕಳೆದ ವಾರ ಮರಳಿದ್ದ ಅವರು ರಾಜೀವಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ರಕ್ತ ಪರೀಕ್ಷೆಯ ನಂತರ ಸೋಂಕು ತಗುಲಿರುವುದು ಖಚಿತಪಟ್ಟಿದೆ.

ಇದುವರೆಗೆ ಭಾರತದಲ್ಲಿ ಒಟ್ಟು 33 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಇಟಲಿಯ 16 ಪ್ರವಾಸಿಗರೂ ಸೇರಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಸೋಂಕು ಹರಡದಂತೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ.












Click it and Unblock the Notifications