ಮುಂದಿನ ಆರು ಗಂಟೆಗಳಲ್ಲಿ ಅಬ್ಬರಿಸಲಿದೆ ಸೈಕ್ಲೋನ್ 'ಫ್ಯಾನಿ'

ಚೆನ್ನೈ, ಏಪ್ರಿಲ್ 29: ಮುಂದಿನ ಆರು ಗಂಟೆಗಳಲ್ಲಿ ಸೈಕ್ಲೋನ್ ಫ್ಯಾನಿ ಅಬ್ಬರಿಸಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಫ್ಯಾನಿ ಚಂಡಮಾರುತ ಅಪ್ಪಳಿಸುತ್ತಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಳ್ಳಲಿದೆ. ಮುಂದಿನ 24 ಗಂಟೆಗಳ ಕಾಲ ಇದರ ಅಬ್ಬರ ಮುಂದುವರಿಯಲಿದೆ.

ಮೇ 29 ಮತ್ತು 30 ರಂದು ಕೇರಳ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಸೈಕ್ಲೋನ್ ಕಾರಣ ಮಳೆಯಾಗಲಿದೆ. ಅದರ ಪರಿಣಾಮ ಕರ್ನಾಟಕದಲ್ಲೂ ಅಲ್ಲಲ್ಲಿ ಕೊಂಚ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Cyclone Fani To Intensify, it may Rain in Tamil Nadu, Andhra Pradesh

ಗಂಟೆಗೆ ಸುಮಾರು 100 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಈ ಭಾಗದ ಜನರಿಗೆ ಆದಷ್ಟು ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.

ಆದರೆ ಚೆನ್ನೈಯಲ್ಲಿ ಫ್ಯಾನಿ ಪ್ರಭಾವವಿರುವುದಿಲ್ಲ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅದು ಹೇಳಿದೆ.

ಮೇ 1, 2 ಮತ್ತು 3 ರಂದು ಒಡಿಶಾದ ಕರಾವಳಿ ಭಾಗಕ್ಕೆ ಈ ಚಂಡಮಾರುತ ಧಾವಿಸಲಿದ್ದು, ಅಲ್ಲಿ ಮೇ 3 ರಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಗಂಟೆಗೆ ಸುಮಾರು 175 ಕಿಮೀ ವೇಗದಲ್ಲಿ ಗಾಳಿ ಚಲಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+