ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಮದ್ರಾಸ್‌ನಲ್ಲಿ 183ಕ್ಕೆ ಏರಿದ ಸೋಂಕಿತರ ಸಂಖ್ಯೆ

|
Google Oneindia Kannada News

ಚೆನ್ನೈ, ಡಿಸೆಂಬರ್ 15: ಐಐಟಿ ಮದ್ರಾಸ್ ನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಮಂಗಳವಾರ 79 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.

ಡಿ.14ರವರೆಗೆ ಇಲ್ಲಿನ 104 ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿತ್ತು. ಅದರಲ್ಲಿ 87 ಮಂದಿ ವಿದ್ಯಾರ್ಥಿಗಳಾಗಿದ್ದು, 16 ಮಂದಿ ಸಿಬ್ಬಂದಿಯಿದ್ದರು. ಇದರಲ್ಲಿ ಕೆಲವರಿಗೆ ಕಿಂಗ್ಸ್ ಇನ್ ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್ ಅಂಡ್ ರಿಸರ್ಚ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ತಿಳಿಸಿದ್ದಾರೆ.

ಐಐಟಿ ಮದ್ರಾಸ್‌ನಲ್ಲಿ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು, ಸೀಲ್‌ಡೌನ್ಐಐಟಿ ಮದ್ರಾಸ್‌ನಲ್ಲಿ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು, ಸೀಲ್‌ಡೌನ್

ತಾತ್ಕಾಲಿಕವಾಗಿ ಕ್ಯಾಂಪಸ್ ಸೀಲ್ ಡೌನ್ ಆಗಿದೆ. ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಒಟ್ಟು 774 ವಿದ್ಯಾರ್ಥಿಗಳಿದ್ದು, ಇದುವರೆಗೂ ಕ್ಯಾಂಪಸ್ ನ 953 ಮಂದಿಯನ್ನು ಪರೀಕ್ಷಿಸಲಾಗಿದೆ. ಸದ್ಯಕ್ಕೆ ಪರೀಕ್ಷಾ ಪ್ರಕ್ರಿಯೆ ನಿಲ್ಲಿಸಲಾಗಿದೆ. ಹತ್ತು ದಿನಗಳ ನಂತರ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲಾಗುವುದು. ಎಲ್ಲರನ್ನೂ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದು ಪ್ರಕರಣಗಳ ಸಂಖ್ಯೆಯನ್ನು ಏರಿಸಬಹುದು, ಆದರೆ ಕೊರೊನಾ ಹರಡುವುದನ್ನು ತಡೆಯಲು ನೆರವಾಗುತ್ತದೆ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.

Coronavirus Positive Cases Rises To 183 In IIT Madras

ಡಿಸೆಂಬರ್ 1ರಂದು ಇಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಡಿ.11ರಲ್ಲಿ 11 ಪ್ರಕರಣ ದಾಖಲಾಗಿದ್ದು, ಮೂರು ದಿನಗಳ ಅಂತರದಲ್ಲಿ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗಿದೆ. ತಮಿಳುನಾಡು ಸರ್ಕಾರದ ಆದೇಶದ ಮೇರೆಗೆ ಡಿ.7ರಿಂದ ಐಐಟಿ ಮದ್ರಾಸ್ ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ಸೋಮವಾರ, ಡಿ.14ರಂದು ತಮಿಳುನಾಡಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಎಂಟು ಲಕ್ಷ ದಾಟಿದೆ. ಇದುವರೆಗೂ 11,909 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

English summary
79 new coronavirus cases found in iit madras on tuesday. Total cases rises to 183,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X