ತಮಿಳುನಾಡಲ್ಲಿ ಕೊರೊನಾ ಭೀತಿ; ಸೆಕ್ಷನ್ 144 ಜಾರಿ
ಚೆನ್ನೈ, ಮಾರ್ಚ್ 23 : ಕೊರೊನಾ ಹರಡುವುದನ್ನು ತಡೆಯಲು ಜನ ಸಂದಣಿ ಸೇರದಂತೆ ನೋಡಿಕೊಳ್ಳಬೇಕಿದೆ. ತಮಿಳುನಾಡು ಜನ ಸೇರುವುದನ್ನು ಕಡಿಮೆ ಮಾಡಲು ರಾಜ್ಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಿದೆ.
Recommended Video
ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಿತು. ಕೊರೊನಾ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, "ಸಿಆರ್‌ಪಿಸಿಯ ಸೆಕ್ಷನ್ 144 ಅನ್ವಯ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗುತ್ತದೆ. ಮಂಗಳವಾರ ಸಂಜೆ 6 ಗಂಟೆಯಿಂದ ಮಾರ್ಚ್ 31ರ ತನಕ ಇದು ಜಾರಿಯಲ್ಲಿರಲಿದೆ" ಎಂದರು.

"ಹಾಲು, ತರಕಾರಿ, ದಿನಸಿ, ಮಟನ್, ಚಿಕನ್, ಮೀನು ಅಂಗಡಿಗಳು ಈ ಸಮಯದಲ್ಲಿ ಕಾರ್ಯ ನಿರ್ವಹಣೆ ಮಾಡಲಿವೆ. ರಾಜ್ಯದ ಗಡಿಗಳನ್ನು ಮುಚ್ಚಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ವಿವರಣೆಯನ್ನು ನೀಡಿದರು.
"ರಾಜ್ಯದ ಎಲ್ಲಾ ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸಲಾಗಿದೆ. ಸರ್ಕಾರದಿಂದ ನಡೆಯುತ್ತಿರುವ ಅಣ್ಣಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಣೆ ಮಾಡಲಿವೆ" ಎಂದು ಕೆ. ಪಳನಿಸ್ವಾಮಿ ಹೇಳಿದರು.
ಸ್ಪೇನ್‌ನಿಂದ ಬಂದ ಮಹಿಳೆಗೆ ಕೊರೊನಾ ಸೋಂಕು ಇರುವುದು ಭಾನುವಾರ ಖಚಿತವಾಗಿತ್ತು. ಈ ಮೂಲಕ ತಮಿಳುನಾಡಿನಲ್ಲಿ 7 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದವು.
ತಮಿಳುನಾಡಿನಲ್ಲಿ ಶುಕ್ರವಾರ 4,253 ಜನರು home quarantine ನಲ್ಲಿದ್ದರು. ಶನಿವಾರ ಅದು 8950ಕ್ಕೆ ಏರಿಕೆಯಾಗಿತ್ತು. ಸೋಂಕು ತಗುಲಿರುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ, ಸರ್ಕಾರ ನಿಷೇಧಾಜ್ಞೆಯನ್ನು ಜಾರಿಗೆ ತರಲಿದೆ.












Click it and Unblock the Notifications