'ಬಿಗ್‌ಬಾಸ್'ನಲ್ಲಿ ಜಯಲಲಿತಾ ಸರ್ವಾಧಿಕಾರಿ: ಕಮಲ್ ಹಾಸನ್ ವಿರುದ್ಧ ದೂರು
ಚೆನ್ನೈ, ಆಗಸ್ಟ್ 2: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಸರ್ವಾಧಿಕಾರಿಯಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಿ ನಟ ಕಮಲ್ ಹಾಸನ್ ಹಾಗೂ ಅವರು ನಡೆಸಿಕೊಡುತ್ತಿರುವ ಬಿಗ್ ಬಾಸ್ ಶೋ ವಿರುದ್ಧ ದೂರು ದಾಖಲಿಸಲಾಗಿದೆ.
ತಮ್ಮ ರಿಯಾಟಲಿಟಿ ಶೋ ಮೂಲಕ ದಿವಂಗತ ಜಯಲಲಿತಾ ಅವರ ಹೆಸರಿಗೆ ಮಸಿ ಬಳಿಯಲು ಕಮಲ್ ಹಾಸನ್ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಮಿಳಿನ ಬಿಗ್ ಬಾಸ್- 2 ಕಾರ್ಯಕ್ರಮದಲ್ಲಿ ನೀಡಲಾಗುವ ಟಾಸ್ಕ್ ಒಂದರ ಬಗ್ಗೆ ಕಮಲ್ ಹಾಸನ್ ಮಾತನಾಡುವಾಗ 'ರಾಜ್ಯವನ್ನು ಆಳಿದ ಸರ್ವಾಧಿಕಾರಿಗಳಿಗೆ ಏನಾಯಿತು ಎಂಬುದು ಗೊತ್ತೇ' ಎಂದು ಹೇಳಿದ್ದರು. ಇದು ಜಯಲಲಿತಾ ಅವರನ್ನು ಕೀಳಾಗಿ ಚಿತ್ರಿಸಲು ನಡೆಸಿದ ಪ್ರಯತ್ನ ಎಂದು ದೂರಲಾಗಿದೆ.

ತಮಿಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇತ್ತೀಚಿನ ಟಾಸ್ಕ್ ಆಗಿ ಬಿಗ್ ಬಾಸ್ ಸ್ಪರ್ಧಿಗಳು ಸರ್ವಾಧಿಕಾರಿಯಂತೆ ವರ್ತಿಸುವ ಗುರಿ ನೀಡಲಾಗಿತ್ತು.
ಇದರ ವಿರುದ್ಧ ದೂರು ನೀಡಿರುವ ವಕೀಲೆ ಲೌವಿಸಲ್ ರಮೇಶ್, ಕಾರ್ಯಕ್ರಮವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ಕಮಲ್ ಹಾಸನ್ ಅವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕಾರ್ಯಕ್ರಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಯಲಲಿತಾ ಅವರಿಗೆ ಕಳಂಕ ತರುವ ಉದ್ದೇಶದಿಂದಲೇ ಕಮಲ್ ಹಾಸನ್ ಮತ್ತು ನಿರ್ಮಾಣ ಸಂಸ್ಥೆಯು ಜಯಲಲಿತಾ ಅಮ್ಮಾ ಅವರನ್ನು ಸರ್ವಾಧಿಕಾರಿಯಂತೆ ಬಿಂಬಿಸಿದ್ದಾರೆ ಎಂದಿದ್ದಾರೆ.












Click it and Unblock the Notifications