ಅಶ್ಲೀಲ ಗೀತೆ ವಿವಾದ: ನಟ ಸಿಂಬು ವಿರುದ್ಧ ಪ್ರಕರಣ ದಾಖಲು
ಕೊಯಮತ್ತೂರು, ಡಿ.13: ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಬು ಅಲಿಯಾಸ್ ಸಿಳಬರಸನ್ ಹಾಗೂ ಸಂಗೀತಗಾರ ಅನಿರುಧ್ ವಿರುದ್ಧ ಇಲ್ಲಿನ ರೇಸ್ ಕೋರ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಶ್ಲೀಲ ಗೀತೆಯನ್ನು ಹಾಡುವ ಮೂಲಕ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿರುವ ಆರೋಪವನ್ನು ಇಬ್ಬರ ಮೇಲೆ ಹೊರೆಸಲಾಗಿದೆ.
ಆಲ್ ಇಂಡಿಯಾ ಡೆಮಾಕ್ರಾಟಿಕ್ ಮಹಿಳೆಯರ ಸಮಿತಿ(ಎಐಡಿಡಬ್ಲ್ಯೂಎ) ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಅನಿರುಧ್ ಸಂಗೀತ ಸಂಯೋಜನೆಯ ಸಿಂಬು ಗಾಯನದ 'ಬೀಪ್ ಹಾಡು' ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. [ಹಸಿಬಿಸಿ ಚುಂಬನ ದೃಶ್ಯದಲ್ಲಿ ಸಿಕ್ಕಿಬಿದ್ದ ಅನಿರುದ್ಧ್]

ಅನಿರುಧ್ ಕಂಪೋಸ್ ಮಾಡಿರುವ 'ಕೊಲವೆರಿ ಡಿ' ಹಾಡು ಈ ಹಿಂದೆ ಭರ್ಜರಿ ದಾಖಲೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಷ್ಟಕ್ಕೂ ಹಾಡಿನಲ್ಲಿ ಕೆಲ ಅಶ್ಲೀಲ ಪದಗಳಿದ್ದು, ಅದನ್ನು ಮ್ಯೂಟ್(ಬೀಪ್ ಸೌಂಡ್) ಮಾಡಲಾಗಿದೆ. ಅದು ಬಿಟ್ಟರೆ, ಇಡೀ ಹಾಡಿನಲ್ಲಿ ಲವ್ ಮಾಡ್ಬೇಡ ಎಂದು ಹುಡುಗರಿಗೆ ಹಿತವಚನ ನೀಡುವಂತಿದೆ. ಲವ್ ಬ್ರೇಕ್ ಅಪ್ ಆದರೆ, ಹುಡುಗರಿಯರನ್ನು ಬೈಯಬೇಡ ಎಂದು ಹೇಳಲಾಗಿದೆ. ಅದರೆ, ಮಹಿಳೆಯರ ವಿರುದ್ಧ ಅನಾಚಾರ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಇಂಥ ಹಾಡು ಅನರ್ಥಕಾರಿ ಎಂದು ಮಹಿಳಾ ಸಂಘಟನೆ ವಾದಿಸಿದೆ. [ಸಿಂಬು ನಯನತಾರಾ ಕಣ್ಣು ಕಣ್ಣು ಕಲೆತಾಗ]
ಮಹಿಳಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 4 ಹಾಗೂ 6ರ ಅನ್ವಯ ಹಾಗೂ ಐಪಿಸಿ ಸೆಕ್ಷನ್ 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 67 ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications