ತಾರಾ ದಂಪತಿ ರಾಧಿಕಾ ಹಾಗೂ ಶರತ್ ಕುಮಾರ್ ವಿರುದ್ಧ ವಾರೆಂಟ್

ಚೆನ್ನೈ, ಜುಲೈ 03: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ತಾರಾ ದಂಪತಿ ರಾಧಿಕಾ ಹಾಗೂ ಶರತ್ ಕುಮಾರ್ ಅವರಿಗೆ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ತ್ವರಿತಗತಿ ನ್ಯಾಯಾಲಯವೊಂದು ದಂಪತಿಗೆ ವಾರೆಂಟ್ ಜಾರಿಗೊಳಿಸಿದೆ.

2014ರಲ್ಲಿ ರಾಧಿಕಾ, ಶರತ್ ಕುಮಾರ್ ಹಾಗೂ ನಿರ್ಮಾಪಕ ಲಿಸ್ಟಿನ್ ಸ್ಟೀಫನ್ಸ್ ಅವರು ಮ್ಯಾಜಿಕ್ ಫ್ರೇಮ್ಸ್ ಸಂಸ್ಥೆಗಾಗಿ ರೆಡಿಯನ್ಸ್ ಮೀಡಿಯಾ ಎಂಬ ಕಂಪನಿಯಿಂದ 1.5 ಕೋಟಿ ರು ಸಾಲ ಪಡೆದಿದ್ದರು. ಹಣ ಪಾವತಿಗಾಗಿ ಎರಡು ಚೆಕ್ ಕಳಿಸಿದ್ದರು. ಎರಡು ಚೆಕ್ ಗಳು ಬೌನ್ಸ್ ಆಗಿವೆ. ಇದೇ ರೀತಿ ಒಟ್ಟು 7 ಚೆಕ್ ಗಳು ಬೌನ್ಸ್ ಆಗಿದ್ದು, ಜೂನ್ 28ರಂದು ನಡೆದ ವಿಚಾರಣೆಗೆ ಮೂವರು ಗೈರಾಗಿದ್ದರು. ಸಿಆರ್ ಪಿಸಿ ಸೆಕ್ಷನ್ 317ಅಡಿಯಲ್ಲಿ ಪಿಟೀಷನ್ ಹಾಕಿ, ಖುದ್ದು ಹಾಜರಾತಿಯಿಂದ ವಿನಾಯತಿ ಕೋರಿದ್ದರು. ಆದರೆ, ಅರ್ಜಿಯನ್ನು ರದ್ದುಗೊಳಿಸಿದ ನ್ಯಾಯಾಧೀಶರು, ಜುಲೈ 12ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಐದು ಪ್ರಕರಣಗಳಲ್ಲಿ ಕ್ರಿಮಿನಲ್ ವಿಚಾರಣೆಗಳನ್ನು ತಿರಸ್ಕರಿಸುವಂತೆ ಕೋರಿ ಮದ್ರಾಸ್ ಹೈಕೋರ್ಟಿಗೆ ದಂಪತಿ ಅರ್ಜಿ ಹಾಕಿದ್ದರು. ಜಸ್ಟೀಸ್ ಜಿಕೆ ಇಲ್ಲಂತಿರಾಯನ್ ಅವರು ತ್ವರಿತ ಗತಿ ನ್ಯಾಯಾಲಯಕ್ಕೆ 5 ಪ್ರಕರಣಗಳಲ್ಲಿ ಕ್ರಿಮಿನಲ್ ವಿಚಾರಣೆ ರದ್ದುಗೊಳಿಸಲು ಸೂಚಿಸಿದ್ದರು, ಆದರೆ, ಉಳಿದ ಎರಡು ಕೇಸು ಜಾರಿಯಲ್ಲಿತ್ತು.

Cheque bounce case : Warrants to actor-politician Sarathkumar and actor Radhika Sarathkumar

2006ರಿಂದ 2015 ತನಕ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ಶರತ್ ಕುಮಾರ್ ಅವರು ಕಲಾವಿದರದ ಸಂಘದ ಭೂಮಿ ಪರಭಾರೆ ಅವ್ಯವಹಾರ ಆರೋಪವನ್ನು ಎದುರಿಸುತ್ತಿದ್ದು, ಮದ್ರಾಸ್ ಹೈಕೋರ್ಟಿನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+