ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಸ್ಫೋಟಕ್ಕೆ ಬೆಂಗಳೂರು ರೈಲು ನಿಲ್ದಾಣದಲ್ಲಿ ಬಾಂಬ್ ಜೋಡಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 24 : ಚೆನ್ನೈ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರು ರೈಲು ನಿಲ್ದಾಣದಲ್ಲಿ ಆರೋಪಿಗಳು ಬಾಂಬ್ ಅನ್ನು ಜೋಡಿಸಿ ನಂತರ ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಟ್ಟಿದ್ದರು ಎಂದು ತನಿಖೆಯಿಂ ತಿಳಿದುಬಂದಿದೆ.

2014ರ ಮೇ 1ರಂದು ಬೆಳಗ್ಗೆ ಚೆನ್ನೈ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ ರೈಲು ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಸ್ಫೋಟ ನಡೆದಿತ್ತು. ಬೆಂಗಳೂರು ರೈಲು ನಿಲ್ದಾಣದ ಶೌಚಾಲಯದಲ್ಲಿ ಬಾಂಬ್ ಜೋಡಿಸಿ ಆರೋಪಿಗಳು ರೈಲಿನಲ್ಲಿಟ್ಟಿದ್ದರು. [ಬಾಂಬ್ ಸ್ಫೋಟ : ಚೆನ್ನೈ ರೈಲು ನಿಲ್ದಾಣದ ಚಿತ್ರಗಳು]

chennai

ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್‌ ಆಫ್ ಇಂಡಿಯಾದ (ಸಿಮಿ) ಝಾಕೀರ್ ಮತ್ತು ಮೆಹಬೂಬ್ ಈ ಬಾಂಬ್ ಸ್ಫೋಟದ ಯೋಜನೆ ರೂಪಿಸಿದ್ದರು. ರೈಲಿನಲ್ಲಿ ಬಾಂಬ್ ಇಟ್ಟ ಆರೋಪಿಗಳು ಧಾರವಾಡದಲ್ಲಿ ಮನೆ ಮಾಡಿಕೊಂಡಿದ್ದರು. ತಾವು ಬಟ್ಟೆ ವ್ಯಾಪಾರಿಗಳು ಎಂದು ಹೇಳಿಕೊಂಡಿದ್ದರು. [ಚೆನ್ನೈ: ಬೆಂಗಳೂರಿನ ಪ್ರಯಾಣಿಕ ಹರ್ಷ ಪ್ರತಿಕ್ರಿಯೆ]

ಬೆಂಗಳೂರಿಗೆ ಬಂದಿದ್ದರು : ಆರೋಪಿಗಳು ಏ.30ರಂದು ಬೆಂಗಳೂರಿಗೆ ಬಂದಿದ್ದರು. ಸ್ಫೋಟಕಗಳನ್ನು ಹೊಂದಿರುವ ಬ್ಯಾಗ್‌ಗಳನ್ನು ತೆಗೆದುಕೊಂಡೇ ಅವರು ಬೆಂಗೂಳೂರು ರೈಲ್ವೆ ನಿಲ್ದಾಣದ ಶೌಚಾಲಯಕ್ಕೆ ಹೋಗಿದ್ದರು. [ಚೆನ್ನೈನಲ್ಲಿ ಬಾಂಬ್ ಸ್ಫೋಟ]

ಬಾಂಬ್ ಜೋಡಿಸಿ, ಟೈಮರ್ ಸೆಟ್ ಮಾಡಿ ಮುಂಜಾನೆ 3.30ರ ಸುಮಾರಿಗೆ ರೈಲಿನಲ್ಲಿ ಬಾಂಬ್ ಇಟ್ಟಿದ್ದರು. ಬಾಂಬ್ ಇಟ್ಟ ಬಳಿಕ ಮುಂದಿನ ನಿಲ್ದಾಣದಲ್ಲಿ ಇಳಿದ ಆರೋಪಿಗಳು ಅಲ್ಲಿಂದ, ಧಾರವಾಡದ ಮನೆಗೆ ತೆರಳಿದ್ದರು.

ಅರವಿಂದ್ ಮತ್ತು ಆನಂದ್ ಜೋಶಿ ಎಂಬ ಹೆಸರಿನಲ್ಲಿ ಮನೆಗಳನ್ನು ಪಡೆದಿದ್ದ ಆರೋಪಿಗಳು ಉತ್ತರ ಪ್ರದೇಶದಿಂದ ತಾವು ಬಂದಿದ್ದೇವೆ ಎಂದು ಮನೆಯ ಮಾಲೀಕರಿಗೆ ಹೇಳಿದ್ದರು. ಮೇ 1ರಂದು ನಡೆದ ಬಾಂಬ್ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿ, 5ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಅಸ್ಸಾಂನಲ್ಲಿ ಮುಸ್ಲಿಂ ಯುವಕರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಖಂಡಿಸಲು ಈ ಬಾಂಬ್ ಸ್ಫೋಟಿಸಲಾಗಿತ್ತು. ಆದ್ದರಿಂದ, ಕಾಜಿರಂಗ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿತ್ತು. ಯೋಜನೆಯ ಮಾಸ್ಟರ್ ಮೈಂಡ್ ಝಾಕೀರ್ ಧಾರವಾಡದಿಂದ ಚೆನ್ನೈಗೆ ತೆರಳಲು ಟಿಕೆಟ್ ಪಡೆದು ಅದೇ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಚೆನ್ನೈ ತಲುಪಿದ್ದ ಆತ, ಅಲ್ಲಿಂದ ಬಸ್ಸಿನ ಮೂಲಕ ಧಾರವಾಡಕ್ಕೆ ವಾಪಸ್ ಆಗಿದ್ದ.

ಬೆಂಗಳೂರಿನಲ್ಲಿಯೇ ರೈಲಿನಲ್ಲಿ ಬಾಂಬ್ ಇಟ್ಟಿದ್ದ ಝಾಕೀರ್, ಚೆನ್ನೈನಲ್ಲಿ ಅದು ಸ್ಫೋಟಗೊಳ್ಳುವಂತೆ ಟೈಮ್ ಸೆಟ್ ಮಾಡಿ, ಚೆನ್ನೈನಲ್ಲೇ ಬಾಂಬ್ ಇಡಲಾಗಿತ್ತು ಎಂದು ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದರು.

English summary
How effective is the security set up in the railway stations? The statements given by the two accused in the Chennai train blasts suggests that they assembled the bomb in the washroom of the Bengaluru railway station before planting it on the Kaziranga express.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X