• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈ ಮಳೆ; 2 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

|
Google Oneindia Kannada News

ಚೆನ್ನೈ ನವೆಂಬರ್ 7: ಕಳೆದ ತಡರಾತ್ರಿಯಿಂದ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದ್ದು 2 ದಿನ ಚೆನ್ನೈ, ಕಾಂಚೀಪುರಂನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಸುತ್ತಲಿನ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ಎರಡು ದಿನಗಳ ಕಾಲ ರಜೆ ಘೋಷಿಸಿದ್ದಾರೆ. ಶನಿವಾರ ರಾತ್ರಿ ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕನಿಷ್ಠ 40 ಜನನಿಬಿಡ ವಸತಿ ಮತ್ತು ವಾಣಿಜ್ಯ ನೆರೆಹೊರೆಗಳು ಪ್ರವಾಹದಲ್ಲಿ ಸಿಲುಕಿವೆ. 2015 ನಂತರ ಚೆನ್ನೈನಲ್ಲಿ ಸುರಿದ ಅಧಿಕ ಮಳೆ ಇದಾಗಿದೆ.

ಶನಿವಾರ ರಾತ್ರಿ ಮತ್ತು ಭಾನುವಾರ ಮುಂಜಾನೆ ಮಳೆಯಿಂದಾಗಿ ಟಿ ನಗರ, ವ್ಯಾಸರ್ಪಾಡಿ, ಅಡ್ಯಾರ್, ವೆಲಚೇರಿ, ರಾಯಪೆಟ್ಟಾ ಮತ್ತು ಮೈಲಾಪುರ್ ಸೇರಿದಂತೆ ಹಲವಾರು ನಗರ ನೆರೆಹೊರೆಗಳಲ್ಲಿ ಪ್ರವಾಹ ಉಂಟಾಗಿದೆ. ಜವಾಹರಲಾಲ್ ನೆಹರು ನಗರ, ಮಾಧವರಾಮ್, ತೊಂಡಿಯಾರ್‌ಪೇಟ್ ಹೈ ರೋಡ್, ಉತ್ತರ ಟ್ರಂಕ್ ರಸ್ತೆ, ರಾಯಪುರಂ, ತೆನಾಂಪೇಟ್, ಖಾದರ್ ನವಾಜ್ ಖಾನ್ ರಸ್ತೆ, ವೆಲಚೇರಿಯ ಒಳ ಪ್ರದೇಶಗಳು, ನಗರದ ಉಪನಗರದ ಶೋಲಿಂಗನಲ್ಲೂರಿನ ಹಲವಾರು ಪ್ರದೇಶಗಳು ಭಾನುವಾರ ಮುಂಜಾನೆ ಜಲಾವೃತಗೊಂಡಿವೆ. ಸರ್ಕಾರದ ಪ್ರಕಟಣೆಯ ಪ್ರಕಾರ, ಪುಝಲ್ ಜಲಾಶಯದಿಂದ 500 ಕ್ಯೂಸೆಕ್ ನೀರನ್ನು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿ ಕಾಲುವೆಯ ದಡದಲ್ಲಿರುವ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಚೆಂಬರಂಬಾಕ್ಕಂ ಜಲಾಶಯದಿಂದ ಭಾನುವಾರ ಮಧ್ಯಾಹ್ನ 1.30ಕ್ಕೆ ನೀರು ಬಿಡಲಾಗಿದೆ ಎಂದು ಸರ್ಕಾರ ಘೋಷಿಸಿದೆ.

ಚೆನ್ನೈ ನಗರದ ನುಂಗಂಬಾಕ್ಕಂ ಮತ್ತು ನಗರದ ಉಪನಗರದಲ್ಲಿರುವ ಮೀನಂಬಾಕ್ಕಂ ಎಂಬ ಎರಡು ಪ್ರದೇಶದಲ್ಲಿ ಅಧಿಕ ಮಳೆ ದಾಖಲಾಗಿದೆ. ಅಂಕಿಅಂಶಗಳ ಪ್ರಕಾರ ಭಾನುವಾರ ಬೆಳಿಗ್ಗೆ 8.30 ರ ಹೊತ್ತಿಗೆ ನಗರ ಮತ್ತು ಉಪನಗರಗಳಲ್ಲಿ ಕ್ರಮವಾಗಿ 21.5 ಸೆಂ ಮತ್ತು 11.3 ಸೆಂ.ಮೀ ಮಳೆಯಾಗಿದೆ.

"2015 ರ ನಂತರ ಚೆನ್ನೈನಲ್ಲಿ ಭಾರಿ ಮಳೆಯಾಘಿದ್ದು, ವಿಶೇಷವಾಗಿ ಉತ್ತರ ಮತ್ತು ಮಧ್ಯ ಚೆನ್ನೈ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಮೋಡವಾಗಿದೆ" ಎಂದು ಹವಾಮಾನ ಬ್ಲಾಗರ್ ಆರ್ ಪ್ರದೀಪ್ ಜಾನ್ ತಮ್ಮ ತಮಿಳುನಾಡು ವೆದರ್‌ಮ್ಯಾನ್ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರೀ ಮಳೆಯಿಂದಾಗಿ ಅನೇಕ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಟಿ ನಗರ, ವ್ಯಾಸರಪಾಡಿ, ರಾಯಪೆಟ್ಟ, ಮೈಲಾಪುರ, ಅಡ್ಯಾರ್ ಸೇರಿದಂತೆ ನಗರದ ಹಲವೆಡೆ ಜಲಾವೃತವಾಗಿದೆ. ಹಲವು ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಮೊಣಕಾಲು ಮಟ್ಟದ ನೀರು ನಿಂತಿತ್ತು.

Chennai Rain Schools Colleges Closed In Chennai, Kancheepuram For days

ತೊಂಡಿಯಾರ್‌ಪೇಟ್ (Tondiarpet) ಹೈ ರೋಡ್, ಜೀವನ್ ಲಾಲ್ ನಗರ, ಗ್ರೇಟ್ ನಾರ್ದರ್ನ್ ಟ್ರಂಕ್ ರಸ್ತೆ, ಜವಾಹರಲಾಲ್ ನೆಹರು ನಗರ, ಮಾಧವ್ರಾಮ್‌ನ (Madhavram) ಭಾಗಗಳು (ಗಣಪತಿ ಶಿವ ನಗರ, ದೀಪನ್ ನಗರ, ರಾಘವೇಂದ್ರ ನಗರ), ತೊಂಡಿಯಾರ್‌ಪೇಟ್‌ನ (Tondiarpet) ಭಾಗಗಳು (ಟಿಪಿ ಸ್ಕೀಮ್ ರಸ್ತೆ, ತಿರುವಳ್ಳೂರು ನಗರ, ವಿನೋಭಾ ನಗರ) , ರೋಯಪುರಂನ ಭಾಗಗಳು, ತೇನಾಂಪೇಟೆಯ ಭಾಗಗಳು (ಖಾದರ್ ನವಾಜ್ ಕಾನ್ ರಸ್ತೆ, ಶಿವಾನಂದ ಸಲೈ ಮತ್ತು ಇತರರು), ವೆಲಚೇರಿ ಮತ್ತು ಶೋಲಿಂಗನಲ್ಲೂರ್ ಇತರ ಪೀಡಿತ ಪ್ರದೇಶಗಳಾಗಿವೆ. ಇನ್ನೂ ವ್ಯಾಸರಪಾಡಿ ಗಣೇಶಪುರಂ ಸುರಂಗಮಾರ್ಗ ಮತ್ತು ಟಿ ನಗರ ದುರೈಸಾಮಿ ಸುರಂಗಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.

ಮುಂದಿನ 5 ದಿನಗಳ ಕಾಲ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. "ಚಂಡಮಾರುತದ ಪರಿಚಲನೆಯು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಮೀ ವರೆಗೆ ವಿಸ್ತರಿಸಿದೆ. ಇದರ ಪ್ರಭಾವದ ಅಡಿಯಲ್ಲಿ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆಯಲ್ಲಿ 09 ನವೆಂಬರ್ 2021 ರ ಸುಮಾರಿಗೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು IMD ಹೇಳಿದೆ.

English summary
Tamil Nadu Chief Minister MK Stalin announces holiday for educational institutions around Chennai, Chengalpattu, Kancheepuram, and Tiruvallur districts for the next two days due to heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X