ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಸಾವು- 2 ತಿಂಗಳಲ್ಲಿ 2ನೇ ಪ್ರಕರಣ

|
Google Oneindia Kannada News

ಚೆನ್ನೈ ಜೂನ್ 13: ತಮಿಳುನಾಡಿನ ಚೆನ್ನೈನಲ್ಲಿ ಭಾನುವಾರ ಸಂಜೆ 30 ವರ್ಷದ ವ್ಯಕ್ತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದು, ಇದು ಎರಡು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಎರಡನೇ ಘಟನೆಯಾಗಿದೆ. ಕಳೆದ ಶನಿವಾರ ಕೊಡಂಗಯ್ಯೂರು ಪೊಲೀಸರು ರಾಜಶೇಖರ್ ಅವರನ್ನು ವಶಕ್ಕೆ ಪಡೆದಿದ್ದರು. ಈತನ ವಿರುದ್ಧ 20ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಆರೋಪಿಸಲಾಗಿದೆ.

ತಿರುವಳ್ಳೂರು ಜಿಲ್ಲೆಯ ನಿವಾಸಿ ರಾಜಶೇಖರ್ ಕೂಡ ಅಪರಾಧವನ್ನು ಒಪ್ಪಿಕೊಂಡಿದ್ದರು. ಈ ವೇಳೆ ಆತ ಅಸ್ವಸ್ಥನಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಚಿಕಿತ್ಸೆಯ ನಂತರ ಉತ್ತಮವಾಗಿದ್ದು ಬಳಿಕ ಅವರನ್ನು ಮತ್ತೆ ಪೊಲೀಸ್ ಠಾಣೆಗೆ ಕರೆತರಲಾಗಿತ್ತು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈಎಸ್ ರಾಜಶೇಖರ್ ರೆಡ್ಡಿ ಜನ್ಮದಿನದಂದು ಶರ್ಮಿಳಾ ಪಕ್ಷ ಉದಯ ವೈಎಸ್ ರಾಜಶೇಖರ್ ರೆಡ್ಡಿ ಜನ್ಮದಿನದಂದು ಶರ್ಮಿಳಾ ಪಕ್ಷ ಉದಯ

ಐವರು ಪೊಲೀಸ್ ಸಿಬ್ಬಂದಿ ಅಮಾನತು

ಐವರು ಪೊಲೀಸ್ ಸಿಬ್ಬಂದಿ ಅಮಾನತು

ಅವರು ಪತ್ತೆ ಅಸ್ವಸ್ಥಗೊಂಡಿದ್ದು ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ಕರೆದೊಯ್ದಾಗ ಅವರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಚೆನ್ನೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ ಎಸ್ ಅನ್ಬು ತಿಳಿಸಿದ್ದಾರೆ.

ಪಳನಿಸ್ವಾಮಿ ಆರೋಪಿ

ಪಳನಿಸ್ವಾಮಿ ಆರೋಪಿ

ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸೈಲೇಂದ್ರ ಬಾಬು ಅವರು ರಾಜಶೇಖರ್ ಸಾವಿನ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಬಿ-ಸಿಐಡಿ) ಆದೇಶಿಸಿದ್ದಾರೆ. ಪ್ರತಿಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ರಾಜಶೇಖರ್ ಸಾವಿನ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಹೈಕೋರ್ಟ್ ನ್ಯಾಯಾಧೀಶರು ಈ ವಿಷಯವನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.

 ಕಾನೂನು ಕ್ರಮಕ್ಕೆ ಒತ್ತಾಯ

ಕಾನೂನು ಕ್ರಮಕ್ಕೆ ಒತ್ತಾಯ

"ತಮಿಳುನಾಡಿನಲ್ಲಿ ಮತ್ತೊಂದು ಲಾಕಪ್ ಡೆತ್ ಸಂಭವಿಸಿದೆ. ಡಿಎಂಕೆ ಸರ್ಕಾರದಲ್ಲಿ ಲಾಕಪ್ ಡೆತ್ ಮುಂದುವರೆದಿದೆ ಮತ್ತು ಲಾಕಪ್ ಡೆತ್ ತಡೆಯಲು ಯಾವುದೇ ಭೀತಿಯಿಲ್ಲ. ಡಿಎಂಕೆ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ಲಾಕಪ್ ಡೆತ್ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಹೈಕೋರ್ಟ್ ನ್ಯಾಯಾಧೀಶರು ಮುಂದಾಗಬೇಕು" ಪಳನಿಸ್ವಾಮಿ ಹೇಳಿದರು.

ಕೊಲೆ ಆರೋಪ

ಕೊಲೆ ಆರೋಪ

ಇದಕ್ಕೂ ಮೊದಲು, 25 ವರ್ಷದ ವಿ ವಿಘ್ನೇಶ್ ಎಂಬ ವ್ಯಕ್ತಿಯನ್ನು ಈ ವರ್ಷದ ಏಪ್ರಿಲ್‌ನಲ್ಲಿ ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಮರುದಿನ ಆತ ಸಾವನ್ನಪ್ಪಿರುವುದು ವರದಿಯಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ವಿಘ್ನೇಶ್ ಅವರ ದೇಹದ ಮೇಲೆ ಗಾಯಗಳು ಕಂಡುಬಂದಿವೆ. ಹೀಗಾಗಿ ಕೊಲೆ ಆರೋಪದ ಮೇಲೆ ಆರು ಪೊಲೀಸರನ್ನು ಬಂಧಿಸಲಾಯಿತು.

English summary
A 30-year-old man has died in police custody on Sunday evening in Tamil Nadu, the second such incident in the state in two months. Five police, including an inspector and a sub-inspector, have been suspended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X