ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನ ಪ್ರತಿಕಾ ದೇಶದ ಮೊದಲ ತೃತೀಯ ಲಿಂಗಿ ಎಸ್‌ಐ

|
Google Oneindia Kannada News

ಚೆನ್ನೈ, ನವೆಂಬರ್. 06: ತೃತೀಯ ಲಿಂಗಿಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಚೆನ್ನೈನ ಕೆ.ಪ್ರತಿಕಾ ಯಶಿನಿ ಮದ್ರಾಸ್ ಹೈಕೋರ್ಟ್ ನಲ್ಲಿ ಕಾನೂನು ಸಮರ ನಡೆಸಿ ಅಂತಿಮವಾಗಿ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

ಈ ಮೂಲಕ ದೇಶದ ಮೊದಲ ತೃತೀಯ ಲಿಂಗಿ ಇನ್ಸ್ ಪೆಕ್ಟರ್ ಎಂಬ ಹೆಗ್ಗಳಿಕೆಯನ್ನು ಕೆ.ಪ್ರತಿಕಾ ಯಶಿನಿ ಪಡೆದುಕೊಂಡಿದ್ದಾರೆ. ಪ್ರತಿಕಾ ಯಶಿನಿ ಅವರಿಗೆ ಸಬ್ ಇನ್ಸ್ ಪೆಕ್ಟರ್ ಆಗುವ ಎಲ್ಲಾ ಅರ್ಹತೆ ಇದ್ದು ಅವರಿಗೆ ಎಸ್ ಐ ಹುದ್ದೆ ನೀಡಬೇಕೆಂದು ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.[ಜಯಾ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರಿಗೆ ಮುಕ್ತಿ ಸಿಕ್ಕಿಲ್ಲ]

Chennai to Get India's First Transgender Sub Inspector

ಅಲ್ಲದೇ ಇನ್ನು ಮುಂದೆ ನಡೆಯುವ ನೇಮಕಾತಿ ಪ್ರಕ್ರಿಯೆಗಳಲ್ಲಿ ತೃತೀಯ ಲಿಂಗಿಗಳಿಗಾಗಿ 3ನೇ ಕ್ಯಾಟಗರಿ ಸೇರಿಸಬೇಕೆಂದು ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ನ್ಯಾಯ ಪೀಠ ಆದೇಶಿಸಿದೆ. ತಾವು ಸಲ್ಲಿಸಿದ್ದ ಸಬ್ ಇನ್ಸ್ ಪೆಕ್ಟರ್ ಹುದ್ದೆಯ ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ ಪ್ರತಿಕಾ ಯಶಿನಿ ನ್ಯಾಯಾಲಯದ ಮೊರೆ ಹೋಗಿದ್ದರು. [ಲೈಂಗಿಕ ಅಲ್ಪಸಂಖ್ಯಾತರಿಗೆ ತೆರೆದ ವೈಟ್ ಹೌಸ್ ಬಾಗಿಲು]

ತಮ್ಮ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಪ್ರತಿಕಾ ನಿರಂತರವಾಗಿ ಅರ್ಜಿ ಸಲ್ಲಿಕೆ ಮಾಡುತ್ತಾ ಬಂದಿದ್ದರು. ತೃತೀಯ ಲಿಂಗಿಗಳಿಗೆ ವಿಶೇಷ ಕೋಟಾ ನಿಗದಿ ಮಾಡಬೇಕು ಎಂದು ಹೋರಾಟ ನಡೆಸಿತ್ತಿದ್ದರು. ದೈಹಿಕ ಪರೀಕ್ಷೆಯಲ್ಲಿ ಸಹ ಅವರು ಉತ್ತೀರ್ಣರಾಗಿದ್ದರು.

'ಇದು ನಿಜಕ್ಕೂ ಸಂತಸದ ಸಂಗತಿ. ತೃತೀಯ ಲಿಂಗಿಗಳ ಆತ್ಮ ಸ್ಥೈರ್ಯ ಹೆಚ್ಚಿಸುವ ವಿಚಾರ. ಐಪಿಎಸ್ ಕನಸು ನನ್ನ ಮುಂದಿದೆ' ಎಂದು ನ್ಯಾಯಾಲಯದ ಆದೇಶದ ನಂತರ ಪ್ರತಿಕಾ ಹೇಳಿದರು. ಇದಕ್ಕೂ ಮೊದಲು ಮಧುರೈನ ಜಿಲ್ಲಾ ಪೊಲೀಸರು ತೃತೀಯ ಲಿಂಗಿಗಳನ್ನು ಹೋಮ್ ಗಾರ್ಡ್ ಗಳನ್ನಾಗಿ ನೇಮಕ ಮಾಡಿಕೊಂಡಿದ್ದರು.

English summary
Chennai's K Prithika Yashini will soon become India's first transgender Sub Inspector of Police. The Madras High Court has declared the 25-year-old as a fit candidate, paving the way for her appointment as Sub Inspector by the Tamil Nadu Government. The court has also directed the recruitment board to make changes to draw transgenders to the state police force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X