ಚೆನ್ನೈ: ಐಎಎಫ್ ರಕ್ಷಿಸಿದ ಗರ್ಭಿಣಿಗೆ ಅವಳಿ ಹೆಣ್ಣು ಮಕ್ಕಳು
ಚೆನ್ನೈ, ಡಿಸೆಂಬರ್, 07: ಚೆನ್ನೈನಲ್ಲಿ ಸಂಭವಿಸಿದ ಜಲಪ್ರಳಯ ವೇಳೆ ಐಎಎಫ್ ರಕ್ಷಣಾ ಸಿಬ್ಬಂದಿ ರಕ್ಷಿಸಿದ ಗರ್ಭಿಣಿಯೊಬ್ಬಳು ಮುದ್ದಾದ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮಕ್ಕಳು ಸುರಕ್ಷಿತವಾಗಿದ್ದಾರೆ. ಪ್ರವಾಹದ ವೇಳೆ ಕೇವಲ ಎರಡು ಮೂರು ದಿನದಲ್ಲಿ ಸಿಬ್ಬಂದಿಯು ಒಟ್ಟು ಏಳು ಗರ್ಭಿಣಿಯರನ್ನು ರಕ್ಷಿಸಿ ಜನರ ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಕೆಲವು ದಿನಗಳಿಂದ ಸ್ಮಶಾನ ಮೌನ ಆವರಿಸುವಂತೆ ಮಾಡಿದ ಜಲಪ್ರಳಯದ ನಡುವೆ ಡಿಸೆಂಬರ್ 04ರಂದು ದೀಪ್ತಿ ವಲ್ಚಾಮಿ ಎಂಬಾಕೆ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈಕೆ ಇದ್ದ ರಾಮಪುರಮ್ ಬಳಿಯ ಗುಂಡ್ಯ ಸಂಪೂರ್ಣ ನೀರುಮಯವಾಗಿದ್ದರಿಂದ ಗರ್ಭಿಣಿಯ ರಕ್ಷಣಾ ಜವಾಬ್ದಾರಿ ಹೊತ್ತ ಐಎಎಫ್ ರಕ್ಷಣಾ ಸಿಬ್ಬಂದಿ ಆಕೆಗೆ ನೆರವು ನೀಡಿದ್ದಾರೆ.[ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]

ದೀಪ್ತಿ ವಲ್ಚಾಮಿಗೆ ಡಿಸೆಂಬರ್ 2ನೇ ದಿನಾಂಕಕ್ಕೆ ಒಂಭತ್ತು ತಿಂಗಳು ತುಂಬಿತ್ತು. ಆಗ ಆಕೆ ಪತಿ ಕಾರ್ತಿಕ್ ವಾಲ್ಷಾಮಿ ಬೆಂಗಳೂರಿನಲ್ಲಿದ್ದರು. ಬಳಿಕ ರಕ್ಷಣಾ ಸಿಬ್ಬಂದಿ ಆಕೆಯನ್ನು ಚೆನ್ನೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಕ್ಷಣೆ ಮಾಡಿರುವುದಾಗಿ ಕರೆ ಬಂದಿತು. ನಂತರ ಪತಿ ಕಾರ್ತಿಕ್ ಚೆನ್ನೈ ತಲುಪಿದರು.
ದೀಪ್ತಿ ಆಕೆಯ ಸಹಾಯಕರೊಂದಿಗೆ ರಕ್ಷಣಾ ಸಿಬ್ಬಂದಿ ಸಹಾಯದಿಂದ ಆಸ್ಪತ್ರೆಗೆ ಬಂದಿದ್ದು, ಮಳೆಯ ತತ್ತರಕ್ಕೆ ಅವಳು ತನ್ನ ಎಲ್ಲಾ ಆಸ್ಪತ್ರೆ ದಾಖಲೆ ಕಳೆದುಕೊಂಡಿದ್ದಳು. ಪುನಃ ಆಸ್ಪತ್ರೆ ದಾಖಲೆಗಳ ಬೆನ್ನು ಹತ್ತಿದ್ದ ಸಿಬ್ಬಂದಿ ಆಕೆಯ ಸಲಹೆ ಮೇರೆಗೆ ರಾಮಚಂದ್ರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಆನ್ ಲೈನ್ ನಿಂದ ಎಲ್ಲಾ ಮಾಹಿತಿಗಳನ್ನು ತಂದುಕೊಟ್ಟರು. ಅವರ ಕಾರ್ಯತತ್ಪರತೆ ಕಂಡು ನನಗೆ ಬಹಳ ಸಂತೋಷವಾಯಿತು ಎಂದು ಐಎಎಫ್ ಸಿಬ್ಬಂದಿಯ ಕಾರ್ಯವೈಖರಿಗೆ ತಲೆಬಾಗಿದರು.[ಚೆನ್ನೈ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ನೀವು ಕೈಜೋಡಿಸಿ]
ದೀಪ್ತಿ ಮಾತ್ರವಲ್ಲದೇ ಸುಖನ್ಯಾ (29) ಎಂಬುವರಿಗೂ ಚೇತಕ್ ಎಂಬ ಹೆಲಿಕಾಫ್ಟರ್ ನ ಐಎಎಫ್ ಸಿಬ್ಬಂದಿ ಸಹಾಯ ಮಾಡಿದ್ದು, ತಾಯಿ ಮಗು ಮತ್ತು ಆಕೆಯ ಮೂರು ವರ್ಷದ ಮಗುವನ್ನು ರಕ್ಷಿಸಿದ್ದಾರೆ. ಯಾವಾಗ ಒಂದು ಎರಡು ಮಹಡಿಗೆ ನೀರು ನುಗ್ಗಿತೋ ಆಗ ನಾವು ನಾಲ್ಕನೇ ಮಹಡಿಗೆ ಹೋದೆವು, ಅಲ್ಲಿ ವಿದ್ಯುತ್ ಸಹ ಇರಲಿಲ್ಲ. ನಾವು ನಮ್ಮ ಜೀವನದ ಮೇಲೆ ಭರವಸೆಯನ್ನೇ ಕಳೆದುಕೊಂಡಿದ್ದೆವು. ಅಷ್ಟರಲ್ಲಿ ರಕ್ಷಣಾ ಸಿಬ್ಬಂದಿ ಸಹಾಯ ನಮಗೆ ಸಿಕ್ಕಿತು ಎಂದು ನಿರಾಳರಾಗುತ್ತಾರೆ.
Kudos to airforce ... Evacuated one pregnant at Jains avantika lady and a child
Posted by Madhu Khurana Gambhir on Thursday, December 3, 2015












Click it and Unblock the Notifications