ಚೆನ್ನೈನಲ್ಲಿ ಅಗ್ನಿ ಆಕಸ್ಮಿಕ, ಹಿಮಾಚಲದಲ್ಲಿ ಬಸ್ ದುರಂತ
ಚೆನ್ನೈ, ಆ.21: ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದ ಕಾರಣ ನಾಲ್ವರು ಮೃತಪಟ್ಟಿರುವ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ. ಬೆಂಕಿ ಆಕಸ್ಮಿಕಕ್ಕೆ ಇನ್ನೂ ಕಾರಣ ತಿಳಿದು ಬಂದಿಲ್ಲ.
ಸುಮಾರು 15ಕ್ಕೂ ಅಧಿಕ ಅಗ್ನಿಶಾಮಕ ದಳದವರು ಬೆಳಗ್ಗಿನಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಚೆನ್ನೈನ ಅವದಿ ಪೂನ್ಮಾಲೆ ರಸ್ತೆ ಸಮೀಪವಿರುವ ಈ ಗೋಡೌನ್ ನಲ್ಲಿ ಬೆಳಗ್ಗೆ ಸುಮಾರು 1.45 ರ ಸುಮಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.

ಬೆಂಕಿ ಬಿದ್ದ ಸಮಯದಲ್ಲಿ ನಾಲ್ವರು ಕಾರ್ಮಿಕರು ಗೋದಾಮಿನೊಳಗೆ ಮಲಗಿದ್ದರು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲವಾಗಿ ದುರಂತ ಸಾವನ್ನಪ್ಪಿದ್ದಾರೆ.
ಇನ್ನೊಂದು ದುರಂತ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಬಸ್ ಒಂದು ಕಂದಕಕ್ಕೆ ಬಿದ್ದಿದೆ. ದುರಂತದಲ್ಲಿ 17 ಪ್ರಯಾಣಿಕರು ಸಾವನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಹಿಮಾಚಲ ಪ್ರದೇಶದ ಕಿನ್ನೊರ್ ಜಿಲ್ಲೆಯ ಜೋರ್ಜ್ನಲ್ಲಿ ಈ ದುರ್ಘಟನೆ ಸಂಭವಿಸಿದೆ.












Click it and Unblock the Notifications