ಬಟ್ಟೆ ವ್ಯಾಪಾರಿಯ ಮನೆಯಲ್ಲಿ 45 ಕೋಟಿ ಹಳೆ ನೋಟು ಪತ್ತೆ

Subscribe to Oneindia Kannada

ಚೆನ್ನೈ, ಮೇ 18: ಚೆನ್ನೈ ಪೊಲೀಸರು ಇಲ್ಲಿನ ಬಟ್ಟೆ ವ್ಯಾಪಾರಿಯೊಬ್ಬರ ಮನೆ ಕಂ ಅಂಗಡಿಯಿಂದ 45 ಕೋಟಿ ಹಳೆ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಂಡಪಾಣಿ ಎಂಬವರ ಬಟ್ಟೆ ಉದ್ಯಮಿಯಾಗಿದ್ದು ವಕೀಲರೂ ಆಗಿದ್ದಾರೆ. ಕೊಡಂಬಕ್ಕಂನ ಸೆಕೆಂಡ್ ಸ್ಟ್ರೀಟ್ ನ ಝಕಾರಿಯಾ ಕಾಲೊನಿಯಲ್ಲಿ ಇವರ ಮನೆ ಇದೆ. ಇದರ ಮೇಲೆ ಚೆನ್ನೈ ಪೊಲೀಸರು ದಾಳಿ ನಡೆಸಿದಾಗ ಈ ನಿಷೇಧಿಸಲ್ಪಟ್ಟ ಹಳೆಯ 500 ಮತ್ತು 1,000 ಮುಖಬೆಲೆಯ ನೋಟುಗಳು ಸಿಕ್ಕಿವೆ.

 Chennai: Demonetised notes in crores recovered from shop that sells police uniforms

ಪೊಲೀಸರು ದಾಳಿ ನಡೆಸಿದಾಗ ದಂಡಪಾಣಿಯವರ ಅಂಗಡಿ ಕಂ ಮನೆಯಲ್ಲಿ ಬರೋಬ್ಬರಿ 45 ಕೋಟಿ ಹಣ ಪತ್ತೆಯಾಗಿದೆ. ಇವುಗಳನ್ನು ರಟ್ಟಿನ ಬಾಕ್ಸುಗಳಲ್ಲಿ ಜೋಡಿಸಿಡಲಾಗಿತ್ತು.

ಇವರು ಶಾಲೆಗಳಿಗೆ, ಪೊಲೀಸರಿಗೆ ಹಾಗೂ ಮಿಲಿಟರಿಯವರಿಗೆ ಸಮವಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದರು. ರಾಮಲಿಂಗಂ ಅಂಡ್ ಕೋ ಸಂಸ್ಥೆಯ ಮಾಲೀಕರಾಗಿರುವ ದಂಡಪಾಣಿ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸಮವಸ್ತ್ರಗಳನ್ನು ವಿತರಿಸಿದ್ದರು. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಪೊಲೀಸರು ಇಂದು ಮುಂಜಾನೆ ಅವರ ಮನೆ ಕಂ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಈ ಭಾರಿ ಮೊತ್ತದ ಹಣ ಪತ್ತೆಯಾಗಿದೆ.

ಕೊಡಂಬಕ್ಕಂ ಪೊಲೀಸ್ ಠಾಣೆಗೆ ದಂಡಪಾಣಿಯವರನ್ನು ಪೊಲೀಸರು ಕರೆ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇದು ನನಗೆ ಸೇರಿದ ಹಣವಲ್ಲ. ನನ್ನಲ್ಲಿ ಭದ್ರವಾಗಿ ಇರುತ್ತದೆ ಎಂಬ ಕಾರಣಕ್ಕೆ ನನ್ನ ಅಂಗಡಿಯಲ್ಲಿ ಇಡಲಾಗಿತ್ತು. ಇದು ಬೇರೊಬ್ಬರ ಹಣ ಎಂದು ದಂಡಪಾಣಿ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Chennai police recovered Rs 45 crore in demonetised currency notes from a textile shop in Chennai. The shop in Kodambakkam locality of the city, that incidentally sells police uniforms, had stacked old Rs 500 and Rs 1,000 notes.
Please Wait while comments are loading...