ಚೆನ್ನೈ ಬಾಲಕನಿಗೆ ಗೂಗಲ್ ನಿಂದ ಪ್ರತಿಷ್ಠಿತ ಪ್ರಶಸ್ತಿ

Posted By:
Subscribe to Oneindia Kannada

ಚೆನ್ನೈ, ಜುಲೈ 20 : ಗೂಗಲ್ ವಿಜ್ಞಾನ ಹಬ್ಬ 2016 ರಲ್ಲಿ ಸಮಾಜಕ್ಕೆ ಮಾದರಿಯಾಗಬಲ್ಲ ಯೋಜನೆಯನ್ನು ಪ್ರಸ್ತುತ ಪಡಿಸಿದ ಚೆನ್ನೈ ಮೂಲದ 14 ವರ್ಷದ ಬಾಲಕನಿಗೆ ಕಮ್ಯುನಿಟಿ ಇಂಪ್ಯಾಕ್ಟ್ ಅವಾರ್ಡ್ ಘೋಷಿಸಲಾಗಿದೆ.

ಚೆನ್ನೈನ ಅದ್ವಾಯ್ ರಮೇಶ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಗೂಗಲ್ ಇಂಡಿಯಾ ಪ್ರಕಟಿಸಿದೆ. ಒಟ್ಟು 107 ದೇಶಗಳಿಂದ ಸಾವಿರಾರು ಪ್ರಾಜೆಕ್ಟ್ ​ಗಳು ಈ ವರ್ಷ ಗೂಗಲ್ ಸಂಸ್ಥೆಗೆ ಸಲ್ಲಿಕೆಯಾಗಿತ್ತು. ಅದರಲ್ಲಿ ಏಷ್ಯಾದಲ್ಲೇ ಪ್ರಥಮ ಸ್ಥಾನವನ್ನು ರಮೇಶ್ ಪಡೆದುಕೊಂಡಿದ್ದಾರೆ. [ಗೂಗಲ್ ಶುರುಮಾಡಿದೆ ಹೊಸ ಕೋರ್ಸ್, ನೀವು ಸೇರ್ತಿರಾ?]

FishErmen Lifeline Terminal (FELT) ಶೀರ್ಷಿಕೆಯ ಯೋಜನೆಗೆ ಹತ್ತು ಸಾವಿರ ಡಾಲರ್ ( 6 ಲಕ್ಷ 72 ಸಾವಿರ ರೂ.) ಬಹುಮಾನವನ್ನು ಅದ್ವಾಯ್ ಪಡೆದಿದ್ದಾರೆ. ಜಿಎಸ್ ಟಿ ಬಳಕೆ ಮಾಡಿಕೊಂಡು ಮೀನುಗಾರರ ಸುರಕ್ಷತೆ ಹಾಗೂ ಮತ್ಸ್ಯ ಉದ್ಯಮ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಿದೆ.

Chennai boy Advay Ramesh wins Google Community Impact Award for Asia

ರಮೇಶ್ ಏಷ್ಯಾದಲ್ಲಿಯೇ ಈ ಪ್ರಶಸ್ತಿಗೆ ಭಾಜನರಾದ ಮೊದಲಿಗ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಒಟ್ಟು 107 ಪ್ರಾಜೆಕ್ಟ್​ಗಳು ಈ ವರ್ಷ ಗೂಗಲ್ ಸಂಸ್ಥೆಗೆ ಸಲ್ಲಿಕೆಯಾಗಿದ್ದವು. ಇದರಲ್ಲಿ ಭಾರತೀಯ ಬಾಲಕ ರಮೇಶ್ ಅವರು ಎಲ್ಲರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಂತಿಮ ಹಂತದ ಪ್ರವೇಶ ಪಡೆದ 20 ಮಂದಿ ಸ್ಪರ್ಧಾಳುಗಳು 50,000 ಡಾಲರ್ ಶಿಷ್ಯವೇತನಕ್ಕಾಗಿ ಸ್ಪರ್ಧಿಸಲಿದ್ದಾರೆ. ಇದಕ್ಕಾಗಿ ಅಮೆರಿಕದಲ್ಲಿರುವ ಗೂಗಲ್ ಕೇಂದ್ರ ಕಚೇರಿಗೆ ಅದ್ವಾಯ್ ತೆರಳಲಿದ್ದಾರೆ.[ಮೋದಿಯನ್ನು ಕ್ರಿಮಿನಲ್ ಎಂದ ಗೂಗಲ್ ಗೆ ನೋಟಿಸ್]

ಪರಿಸರ, ಆರೋಗ್ಯ ಸಂಪನ್ಮೂಲಗಳ ಸವಾಲುಗಳನ್ನು ಯಾವರೀತಿ ಎದುರಿಸಬಹುದು ಎಂಬ ವಿಷಯದ ಆಧಾರದ ಮೇಲೆ ಈ ಪ್ರಾಜೆಕ್ಟ್​ಗಳನ್ನು ರೂಪಿಸಲಾಗಿದೆ.ಈ ಗೌರವದಿಂದ ನನಗೆ ಇನ್ನಷ್ಟು ಪ್ರೋತ್ಸಾಹ ದೊರಕಿದೆ.

ಭವಿಷ್ಯದಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನನ್ನ ಮುಂದಿನ ಸಂಶೋಧನೆ ನಡೆಯಲಿದೆ ಎಂದು ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಕ್ಲಾಸ್ X ರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Google India on Tuesday announced the winner of the Google Community Impact Award, a theme based award part of Google Science Fair 2016.
Please Wait while comments are loading...