ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2 ಯೋಜನೆ ರೋವರ್ ಇನ್ನೂ ಜೀವಂತ: ಚೆನ್ನೈ ಟೆಕ್ಕಿ

|
Google Oneindia Kannada News

ಚೆನ್ನೈ, ಆಗಸ್ಟ್ 02: ಭಾರತದ ಚಂದ್ರಯಾನ- 2 ಯೋಜನೆಯ 'ವಿಕ್ರಮ್ ಲ್ಯಾಂಡರ್' ಚಂದ್ರನ ಮೇಲೆ ಪತನಗೊಂಡ ಸ್ಥಳವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಹಚ್ಚಿ, ಚಿತ್ರ ಕಳಿಸಿದ್ದು ನೆನಪಿರಬಹುದು. ಆದರೆ ಈ ವಿಕ್ರಮ್ ಲ್ಯಾಂಡರ್ ನಿಖರವಾಗಿದೆ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ನೆರವಾಗಿದ್ದು ಚೆನ್ನೈ ಮೂಲದ ಟೆಕ್ಕಿ. ಲ್ಯಾಂಡರ್ ಪತ್ತೆಹಚ್ಚಿದ ಟೆಕ್ಕಿಯಿಂದ ಈಗ ರೋವರ್ ಬಗ್ಗೆ ಮಾಹಿತಿ ಸಿಕ್ಕಿದ್ದು, ಚಂದ್ರಯಾನ -2 ಇನ್ನೂ ಜೀವಂತ ಇರುವ ಆಸೆ ಹುಟ್ಟಿಕೊಂಡಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪರಿಶೀಲನೆಗೆ ಮುಂದಾಗಿದೆ.

2019ರ ಸೆಪ್ಟೆಂಬರ್ 7ರಂದು ಮುಂಜಾನೆ 1.55ಕ್ಕೆ ಚಂದ್ರನ ಮೇಲೆ ಇಳಿಯುವ ಕೊನೆ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಈ ಮೂಲಕ ಭಾರತದ ಮಹತ್ವದ ಚಂದ್ರಯಾನ -2 ಯೋಜನೆ ಕೊನೆ ಕ್ಷಣದಲ್ಲಿ ವಿಫಲವಾಗಿತ್ತು.

ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?

ವಿಕ್ರಮ್ ಲ್ಯಾಂಡರ್ ಪತನಗೊಂಡ ಬಳಿಕ ಅದರ ಭಾಗಗಳು 24 ವಿವಿಧ ಸ್ಥಳಗಳಲ್ಲಿ ಚದುರಿ ಹೋಗಿವೆ. ಕೆಲವು ಕಿಲೋಮೀಟರ್ ತನಕ ಬಿಡಿಭಾಗಗಳು ಹರಡಿಕೊಂಡಿರುವ ಚಿತ್ರವನ್ನು ನಾಸಾದ Lunar Reconnaissance Orbiter ದಿ ಲೂನಾರ್‌ ರಿಕಾನೈಸೆನ್ಸ್‌ ಆರ್ಬಿಟರ್‌ (ಎಲ್‌ಆರ್‌ಓ) ಉಪಗ್ರಹವು ನೀಡಿತ್ತು. ಈ ನಿಖರ ಸ್ಥಳ ಪತ್ತೆಗೆ ಖಗೋಳ ವಿಜ್ಞಾನ ಆಸಕ್ತ ಟೆಕ್ಕಿ ಷಣ್ಮುಗ ಸುಬ್ರಮಣಿಯನ್ ಕಾರಣ ಎಂದು ನಾಸಾ ಪ್ರಕಟಿಸಿತ್ತು.

ರೋವರ್ ಬಗ್ಗೆ ಮಾಹಿತಿ ನೀಡಿದ ಷಣ್ಮುಗ

ವಿಕ್ರಮ್ ಲ್ಯಾಂಡರ್ ಪೇ ಲೋಡ್ ಗಳು ಬೇರ್ಪಟ್ಟ ಬಳಿಕ ರೋವರ್ ಕೆಲವು ಮೀಟರ್ ಗಳ ಅಂತರ ಚಲಿಸಿದೆ. ಬಲವಂತವಾಗಿ ಲ್ಯಾಂಡಿಂಗ್ ನಿಂದಾಗಿ ಈ ರೀತಿ ಆಗಿದ್ದು, ಪ್ರಜ್ಞಾನ್ ರೋವರ್ ಬಗ್ಗೆ ಸರಣಿ ಟ್ವೀಟ್ ಮೂಲಕ ಷಣ್ಮುಗ ಮಾಹಿತಿ ಹಂಚಿಕೊಂಡಿದ್ದಾರೆ.

ನಾಸಾಕ್ಕೆ ಸಿಗದ ಮಾಹಿತಿ

ನಾಸಾಗೆ ಲ್ಯಾಂಡರ್ ನ ಪೇಲೋಡ್, ಆಂಟೆನಾ, ರೆಟ್ರೋ ಬ್ರೇಕಿಂಗ್ ಇಂಜಿನ್, ಸೋಲರ್ ಪ್ಯಾನೆಲ್ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ, ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ನಿಂದ ಪ್ರಜ್ಞಾನ್ ರೋವರ್ ಕೆಲ ಮೀಟರ್ ಗಳು ಚಲಿಸಿರುವುದರಿಂದ ನಾಸಾ ಈ ಬಗ್ಗೆ ಪತ್ತೆ ಹಚ್ಚಿಲ್ಲ. ವಿಕ್ರಮ್ ಲ್ಯಾಂಡರ್ ನ ಲಾಂಗುಮಿರ್ ಪ್ರೊಬ್ ನಾನು ಪತ್ತೆ ಹಚ್ಚಿದೆ ಎಂದು ಷಣ್ಮುಗ ಹೇಳಿದ್ದಾರೆ.

ವಿಕ್ರಮ್ ಲ್ಯಾಂಡರ್ ಪತ್ತೆಗೆ ನೆರವಾಗಿದ್ದು ಚೆನ್ನೈ ಟೆಕ್ಕಿವಿಕ್ರಮ್ ಲ್ಯಾಂಡರ್ ಪತ್ತೆಗೆ ನೆರವಾಗಿದ್ದು ಚೆನ್ನೈ ಟೆಕ್ಕಿ

ನಿಖರವಾದ ಸ್ಥಳ ಪತ್ತೆ ಹಚ್ಚಿದ್ದ ಷಣ್ಮುಗ

ನಿಖರವಾದ ಸ್ಥಳ ಪತ್ತೆ ಹಚ್ಚಿದ್ದ ಷಣ್ಮುಗ

ನಾಸಾ ಅವರು ಷಣ್ಮುಗ ಸುಬ್ರಮಣಿಯನ್ ಅವರು ಎಲ್ ಆರ್ ಒ ಯೋಜನೆಯನ್ನು ಸಂಪರ್ಕಿಸಿ ಚಂದ್ರನ ಮೇಲ್ಮೈನ ವಾಯುವ್ಯದಲ್ಲಿ 750 ಮೀಟರ್ ದೂರದಲ್ಲಿ ಅಪಘಾತ ಸ್ಥಳವಿದೆ ಎಂದು ಹೇಳಿದ್ದರು. ಚೆನ್ನೈನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಾನ್ ಅವರು ಸದ್ಯ ಕಾಗ್ನಿಜೆಂಟ್ ನಲ್ಲಿ ಪ್ರೊಗ್ರಾಂ ಅನಾಲಿಸ್ಟ್ ಆಗಿದ್ದಾರೆ. ಎಲ್ ಆರ್ ಒದಿಂದ ಲಭ್ಯವಾದ ಚಂದ್ರದ ಚಿತ್ರಗಳನ್ನು ಸಂಗ್ರಹಿಸಿದ ಶಾನ್ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 14,15 ಹಾಗೂ ನವೆಂಬರ್ 11ರ ಚಿತ್ರಗಳನ್ನು ಪರಿಶೀಲಿಸಿ ನಿಖರವಾದ ಸ್ಥಳ ಪತ್ತೆ ಹಚ್ಚಿದ್ದರು.

ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಬಗ್ಗೆ ನಾಸಾಗೆ ಪತ್ರ

ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಬಗ್ಗೆ ನಾಸಾಗೆ ಪತ್ರ

ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಬಗ್ಗೆ ನಾಸಾಗೆ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಮೊದಲಿಗೆ ಈ ಬಗ್ಗೆ ಹೆಚ್ಚು ಗಮನಹರಿಸದ ನಾಸಾ ನಂತರ, ಶಾನ್ ಗುರುತು ಪತ್ತೆ ಕ್ರಮವನ್ನೇ ಅನುಸರಿಸಿದೆ. ಇದು ಸರಿಯಾದ ವಿಧಾನ ಈ ಕ್ರಮದಿಂದ ನಿಖರವಾದ ಸ್ಥಳ ಪತ್ತೆ ಸಾಧ್ಯ ಎಂಬುದನ್ನು ದೃಢಪಡಿಸಿಕೊಂಡಿದೆ. ನಂತರ ಎಲ್ ಆರ್ ಒ ಯೋಜನೆಯ ವಿಜ್ಞಾನಿ ಜಾನ್ ಕೆಲ್ಲರ್ ಅವರು ಶಾನ್ ಅವರನ್ನು ಅಭಿನಂದಿಸಿ ಪತ್ರ ಬರೆದಿದ್ದಾರೆ.

English summary
Is the Chandrayaan-2 mission still alive? Mystery deepens as Chennai based space enthusiast Shanmuga Subramanian, who was credited by NASA late last year for spotting the debris of India's Chandrayaan-2 moon probe Vikram lander.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X