ಆ 30: ಕರ್ನಾಟಕ-ತಮಿಳುನಾಡು ನಡುವೆ ಬಸ್ ಸಂಚಾರ ಸ್ಥಗಿತ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 29: ಕರ್ನಾಟಕದಿಂದ 50 ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟಿನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಗೊತ್ತಿರಬಹುದು. ಆದರೆ, ಡಿಎಂಕೆ ಬೆಂಬಲಿತ ತಮಿಳುನಾಡಿನ ರೈತ ಸಂಘಗಳು ಮಂಗಳವಾರದಂದು ಬಂದ್ ಗೆ ಕರೆ ನೀಡಿವೆ.

ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಬಂದ್ ಸಕ್ರಿಯವಾಗಿರುವ ಸಾಧ್ಯತೆಯಿದ್ದು, ತಮಿಳುನಾಡು-ಕರ್ನಾಟಕ ನಡುವೆ ಬಸ್ ಸಂಚಾರ ವ್ಯತ್ಯಯವಾಗುವ ಸಾಧ್ಯತೆಯಿದೆ. [ತಮಿಳುನಾಡಿಗೆ ನೀರು ಬಿಡಲ್ಲ]

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕೊಂಗನಾಡು ಜನನಾಯಕ ಕಚ್ಚಿ ಸೇರಿದಂತೆ ವಿವಿಧ ಪಕ್ಷಗಳು ಮಂಗಳವಾರ (ಆಗಸ್ಟ್ 30) ತಮಿಳುನಾಡು ಬಂದ್ ಗೆ ಕರೆ ನೀಡಿವೆ.

ಎನ್ಡಿಎ ಮಿತ್ರ ಪಕ್ಷವಾಗಿರುವ ಕೆಜೆಕೆಗೆ ಡಿಎಂಕೆ ಬೆಂಬಲ ಸಿಕ್ಕಿರುವುದು ವಿಶೇಷ. ಡಿಎಂಕೆ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಬೆಂಬಲ ಯಶಸ್ವಿಗೊಳಿಸಲು ಮುಂದಾಗಿವೆ.

Cauvery water dispute: KJK extends total support to bandh TN

ಸಾರಿಗೆ ಸಂಚಾರ ವ್ಯತ್ಯಯ ಸಾಧ್ಯತೆ: ಬಂದ್ ನಿಂದಾಗಿ ಕರ್ನಾಟಕ- ತಮಿಳುನಾಡು ನಡುವೆ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಸುಮಾರು 600ಕ್ಕೂ ಅಧಿಕ ಬಸ್ ಗಳು ಉಭಯ ರಾಜ್ಯಗಳ ನಡುವೆ ಸಂಚರಿಸುತ್ತವೆ. [ತಮಿಳುನಾಡಿಗೆ ಕರ್ನಾಟಕದ ಪತ್ರ]

ಕಾವೇರಿ ಜಲಾನಯನ ತೀರದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ನೀರು ಬಿಡಲು ಸಾಧ್ಯವಿಲ್ಲ ಎಂದು ತಮಿಳುನಾಡಿಗೆ ಕರ್ನಾಟಕ ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಆದರೆ, ಕೊಂಗು ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ನೀರಾವರಿಗೆ ಕಾವೇರಿ ನೀರು ಅಗತ್ಯವಾಗಿದೆ ಎಂದು ಕೆಜೆಕೆ ಸಂಚಾಲಕ ಜಿಕೆ ನಾಗರಾಜ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kongunadu Jananayaka Katchi, an ally of NDA in Tamil Nadu, today extended support to the bandh call tomorrow by various farmers' associations to protest against Karnataka's 'refusal' to release Cauvery water.
Please Wait while comments are loading...