ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಅಥವಾ ನಾರಾಯಣಸ್ವಾಮಿ; ಯಾವ ಸ್ವಾಮಿಯಾದರೂ ಅಷ್ಟೇ!

|
Google Oneindia Kannada News

ಚೆನ್ನೈ, ಜೂನ್ 19: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನಿರ್ವಹಣ ಮಂಡಳಿಯ ತೀರ್ಮಾನವೇ ಅಂತಿಮವಾಗಲಿದೆ ಎಂದು ಎಐಎಡಿಎಂಕೆ ಮುಖಂಡ ಡಿ. ಜಯಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ವಿಚಾರದ ಕುರಿತು ಉಲ್ಲೇಖಿಸಿರುವ ಎಐಎಡಿಎಂಕೆ, ಮಂಡಳಿಯೇ ಇಲ್ಲಿ ಅತ್ಯುನ್ನತ ಎಂದು ಪ್ರತಿಪಾದಿಸಿದೆ.

ತಮಿಳುನಾಡಿಗೆ ನೀರು ಬಿಡುವಂತೆ ಸಿಎಂ ಕುಮಾರಸ್ವಾಮಿ ಸೂಚನೆತಮಿಳುನಾಡಿಗೆ ನೀರು ಬಿಡುವಂತೆ ಸಿಎಂ ಕುಮಾರಸ್ವಾಮಿ ಸೂಚನೆ

'ಕಾವೇರಿ ನೀರು ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಕುಮಾರಸ್ವಾಮಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿರುವುದು ಸಮಯ ವ್ಯರ್ಥವಷ್ಟೇ.

Cauvery management board is the ultimate: aiadmk

ಅದು ಕುಮಾರಸ್ವಾಮಿ, ನಾರಾಯಣಸ್ವಾಮಿ ಅಥವಾ ಇನ್ಯಾವುದೇ ಸ್ವಾಮಿ ಆಗಿರಲಿ, ನಮಗೆ ಕಾವೇರಿ ನಿರ್ವಹಣಾ ಮಂಡಳಿ ಇದೆ. ಅದೇ ಅಂತಿಮ ಸ್ವಾಮಿ' ಎಂದು ಜಯಕುಮಾರ್ ಹೇಳಿದ್ದಾರೆ.

ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಇಬ್ಬರೂ ನಾಯಕರು ಇತ್ತೀಚೆಗೆ ರಚನೆಗೊಂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕುರಿತು ಚರ್ಚಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿ ಮಸೂದ್ ಹುಸೇನ್ ನೇಮಕಕಾವೇರಿ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿ ಮಸೂದ್ ಹುಸೇನ್ ನೇಮಕ

ಕರ್ನಾಟಕದಲ್ಲಿನ ಉಷ್ಣವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಿಲಿನ ಕೊರತೆ ಎದುರಾಗಿರುವುದರ ಕುರಿತು ಸಹ ಚರ್ಚೆ ನಡೆದಿತ್ತು ಎನ್ನಲಾಗಿದೆ.

English summary
AIADMK on Tuesday said that the Cauvery Management Board was the highest authority on the water sharing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X