ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ಟೂರು ಅಣೆಕಟ್ಟಿನ ಪರಿಶೀಲನೆ ನಡೆಸಿದ ಝಾ ತಂಡ

By Mahesh
|
Google Oneindia Kannada News

ಕೊಯಮತ್ತೂರು, ಅಕ್ಟೋಬರ್ 10: ಕರ್ನಾಟಕದಲ್ಲಿ ಕಾವೇರಿ ನದಿ ಪಾತ್ರದ ಪ್ರದೇಶಗಳ ಸಮೀಕ್ಷೆ ನಡೆಸಿದ ಬಳಿಕ ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸುಪ್ರೀಂಕೋರ್ಟ್ ರಚಿಸಿರುವ ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ಭಾನುವಾರದಂದು ಕೊಯಮತ್ತೂರಿನ 150 ಕಿ.ಮೀ ದೂರದಲ್ಲಿರುವ ಮೆಟ್ಟೂರು ಜಲಾಶಯಕ್ಕೆ ಭೇಟಿ ನೀಡಿದರು. ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ಸಮಿತಿಯ ಸದಸ್ಯರು, ಜಲಾಶಯದ ನೀರಿನ ಮಟ್ಟ, ಒಳಹರಿವು, ಹೊರಹರಿವು ಮತ್ತಿತರ ಮಾಹಿತಿಗಳನ್
ನು ಸಂಗ್ರಹಿಸಿತು.[ಕೇಂದ್ರ ತಂಡದಿಂದ ಕೃಷ್ಣರಾಜ ಸಾಗರ ಸಮೀಕ್ಷೆ]

Cauvery dispute: High-level technical team inspects Mettur Dam

ಕರ್ನಾಟಕದಲ್ಲಿ 2 ದಿನಗಳ ಪರಿಶೀಲನೆ ಬಳಿಕ ತಮಿಳುನಾಡಿಗೆ ಆಗಮಿಸಿರುವ 13 ಸದಸ್ಯರ ಸಮಿತಿ, ತಮಿಳುನಾಡು, ಪುದುಚೇರಿ ಮತ್ತು ಕೇರಳದ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ.[ಅಧ್ಯಯನ ತಂಡದ ಜತೆ ರಮ್ಯಾ, ಅಂಬಿಯಣ್ಣ ಎಲ್ಲಿ?]

ಇದೇ ಸಂದರ್ಭದಲ್ಲಿ ಮಾತನಾಡಿದ ತಮಿಳುನಾಡು ಸಚಿವ ಎಡಪ್ಪಾಡಿ ಪಳನಿಸ್ವಾಮಿ, ಕಾವೇರಿ ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಮಾಡಬೇಕು. ಸಮಸ್ಯೆ ಪರಿಹಾರಕ್ಕೆ ಅದೊಂದೇ ಪರಿಹಾರ ಎಂಬ ಮನವಿ ಪತ್ರ ಸಲ್ಲಿಸಿದರು.['ತಜ್ಞರ ತಂಡಕ್ಕೆ ಕಾವೇರಿ ಕೊಳ್ಳದ ವಸ್ತುಸ್ಥಿತಿ ಮನವರಿಕೆ']

ಸೋಮವಾರ ಈರೋಡ್ ಜಿಲ್ಲೆಯಲ್ಲಿರುವ ಭವಾನಿ ಸಾಗರ ಜಲಾಶಯದ ಪರಿಸ್ಥಿತಿಯನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ತಂಜಾವೂರ್, ತಿರುವೂರ್ ಮತ್ತು ನಾಗಪಟ್ಟಿನಂ ಪ್ರದೇಶಗಳಲ್ಲೂ ಸಮೀಕ್ಷೆ ನಡೆಸಲಿದ್ದಾರೆ. ಅಕ್ಟೋಬರ್ 17ರಂದು ಸಮಿತಿ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಲಿದೆ.(ಪಿಟಿಐ)

English summary
The high-level technical team constituted by the Supreme Court to assess the situation in Cauvery Basin in Karnataka and Tamil Nadu, inspected the Mettur Dam, about 150 km from here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X