ಹಿಂದೂ ಭಯೋತ್ಪಾದನೆ ಹೇಳಿಕೆ, ಕಮಲ್ ಹಾಸನ್ ವಿರುದ್ಧ ದೂರು

By: ಚೆನ್ನಬಸವೇಶ್ವರ್
Subscribe to Oneindia Kannada

ಚೆನ್ನೈ, ನವೆಂಬರ್ 3: ಹಿಂದೂಗಳಲ್ಲಿ ಉಗ್ರವಾದ, ಭಯೋತ್ಪಾದನೆ ಇದೆ. ಇಲ್ಲ ಎಂದು ಬಲಪಂಥೀಯರು ಸವಾಲು ಹಾಕುವಂತಿಲ್ಲ. ಕಾರಣ, ಹಿಂದೂಗಳ ಕ್ಯಾಂಪಿನಲ್ಲೂ ಭಯೋತ್ಪಾದನೆ ಹರಡಿದೆ ಎಂದು ಕಮಲ್ ತಮ್ಮ ಅಂಕಣದಲ್ಲಿ ಹೇಳಿದ್ದರು.

ಅಪನಗದೀಕರಣ ತಪ್ಪು ನಡೆ ಎಂದು ಮೋದಿ ಒಪ್ಪಿಕೊಳ್ಳಲಿ: ಕಮಲ್

ಇದೀಗ ಈ ಸಂಬಂಧ ಅವರ ಮೇಲೆ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 500, 511, 298, 295 (a) ಮತ್ತು 505 (c) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ನಾಳೆ ಅಂದರೆ ಶನಿವಾರ ನಡೆಯಲಿದೆ.

Case against Kamal Hassan over Hindu terror remarks

ತಮಿಳು ನಿಯತಕಾಲಿಕೆಗೆ ಬರೆದ ತಮ್ಮ ವಾರದ ಅಂಕಣದಲ್ಲಿ ಕಮಲ್ ಹಾಸನ್, ಹಿಂದೂ ಸಂಘಟನೆಗಳು ವಿರೋಧಿಗಳ ಧ್ವನಿ ಅಡಗಿಸಲು ಭುಜ ಬಲ ಬಳಸುತ್ತಿದ್ದಾರೆ ಎಂದು ಹೇಳಿದ್ದರು. ಅವರ ಈ ಲೇಖನದ ವಿರುದ್ಧ ಕಿಡಿಕಾರಿದ್ದ ಆರ್.ಎಸ್.ಎಸ್ ಮತ್ತು ಬಿಜೆಪಿ ತಕ್ಷಣ ಈ ಲೇಖನವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು.

ಜತೆ ಜತೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ನರಸಿಂಹ ರಾವ್ ಕಮಲ್ ಹಾಸನ್ ರನ್ನು ಲಷ್ಕರ್ ಇ ತಯ್ಯಬಾ ಸಂಸ್ಥಾಪಕ ಹಫೀಜ್ ಸಯೀದ್ ಗೆ ಹೋಲಿಸಿದ್ದರು.

ಇದೀಗ ಕಮಲ್ ಹಾಸನ್ ವಿರುದ್ಧ ಪ್ರಕರಣ ದಾಖಲಾಗಿದ್ದು ಶನಿವಾರ ವಿಚಾರಣೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A case has been filed against actor Kamal Haasan over his remark on Hindu terror. The matter to be heard on Saturday. The case has been registered under IPC section 500, 511, 298, 295(a) and 505(c).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ