ಜಯಾಗೆ ಆಗಿದ್ದು ಹೃದಯಾಘಾತವಲ್ಲ, ಹೃದಯ ಸ್ಥಂಭನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 5: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಆಗಿರುವುದು ಹೃದಯಾಘಾತವಲ್ಲ, ಹೃದಯ ಸ್ಥಂಭನ ಎನ್ನುವುದು ವೈಜ್ಞಾನಿಕವಾಗಿಯೂ ಸರಿಯಾದ ಪದ. ಹೌದು, ಈ ಎರಡಕ್ಕೂ ಏನು ವ್ಯತ್ಯಾಸ ಅನ್ನೋದು ಮೊದಲು ತಿಳಿದುಕೊಳ್ಳಬೇಕು. ಹೃದಯಾಘಾತವೆಂದರೆ ರಕ್ತನಾಳ ಬ್ಲಾಕ್ ಆಗಿರುತ್ತದೆ.

ಅಂದರೆ ಹೃದಯದ ನಾಲ್ಕು ರಕ್ತನಾಳಗಳಲ್ಲಿ ಬ್ಲಾಕೇಜ್ ಆಗಿದ್ದಲ್ಲಿ ಹೃದಯಾಘಾತ ಎನ್ನುತ್ತಾರೆ. ಯಾವ ರಕ್ತನಾಳ ಬ್ಲಾಕ್ ಆಗಿರುತ್ತದೋ ಅದು ರಕ್ತ ಪೂರೈಸುವ ದೇಹದ ಭಾಗ ನಿಧಾನಕ್ಕೆ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿಬಿಡುತ್ತದೆ. ಅಂದರೆ ಆ ನಿರ್ದಿಷ್ಟ ರಕ್ತನಾಳ ಕೈಗೆ ರಕ್ತ ಪೂರೈಸುತ್ತಿದ್ದರೆ, ನಿಧಾನಕ್ಕೆ ಕೈ ಕಾರ್ಯನಿರ್ವಹಿಸುವುದು ನಿಲ್ಲಿಸುತ್ತದೆ.[ಜಯಾಗೆ ಅನಾರೋಗ್ಯ, ತಮಿಳುನಾಡಲ್ಲಿ ಅಘೋಷಿತ ಬಂದ್]

Heart

ಆದರೆ, ಹೃದಯ ಸ್ಥಂಭನವಾದಲ್ಲಿ ಇಡೀ ರಕ್ತ ಪೂರೈಕೆಯನ್ನೆ ನಿಲ್ಲಿಸುತ್ತದೆ. ಅಗ ಮೆದುಳಿಗೆ ರಕ್ತ ಪೂರೈಕೆ ಆಗುವುದೇ ನಿಂತು ಹೋಗುತ್ತದೆ. ಅಂಥ ಸನ್ನಿವೇಶದಲ್ಲಿ ಮೆದುಳೇ ತನ್ನ ಕಾರ್ಯ ನಿರ್ವಹಣೆ ನಿಲ್ಲಿಸುವುದರಿಂದ ಬ್ರೈನ್ ಡೆಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈಗ ಅಪೋಲೋ ಆಸ್ಪತ್ರೆ ವೈದ್ಯರು ಮೆದುಳು ತನ್ನ ಕೆಲಸ ನಿಲ್ಲಿಸದಿರುವಂತೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದು ಸದ್ಯದ ಮಾಹಿತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is a clear difference between cardiac arrest and Heart attack. Cardiac arrest to Jayalalithaa is a serious condition. So, here is the difference explained.
Please Wait while comments are loading...