ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಮ್ಮಾ ಬ್ರ್ಯಾಂಡ್' ಜಯಲಲಿತಾ ಮೋದಿ ಕೈಹಿಡಿಯುವರೇ?

By Srinath
|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 18: ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ತಮ್ಮ ಆತ್ಮೀಯ ಮಿತ್ರ ನರೇಂದ್ರ ಮೋದಿಗೆ ಅಣ್ಣಾ ಡಿಎಂಕೆ ಅಧಿನಾಯಕಿ ಜಯಲಲಿತಾ ಅವರು ಮಣೆ ಹಾಕುತ್ತಾರಾ? ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯ ಭಾಗವಾಗಿ AIADMK ಹೊರಹೊಮ್ಮುತ್ತದಾ?

ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಅತ್ಯಂತ ವ್ಯವಸ್ಥಿತವಾಗಿ ತಮಿಳುನಾಡಿನಲ್ಲಿ ಪ್ರಸ್ತುತ 'ಅಮ್ಮಾ ಬ್ರ್ಯಾಂಡ್' ಆಗಿ ಚಾಲ್ತಿಯಲ್ಲಿರುವ ಜಯಲಲಿತಾ ತಮ್ಮ ವ್ಯಾಪ್ತಿಗೆ ಬರುವ 40 ಲೋಕಸಭಾ ಸೀಟುಗಳ ಪೈಕಿ 30ಕ್ಕೂ ಹೆಚ್ಚು ಸ್ಥಾನ ದಕ್ಕಿಸಿಕೊಂಡು ಅದನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಧಾರೆಯೆರೆದರೆ ಹೆಚ್ಚು ಸಂತೋಷ ಪಡುವುದು ಬಿಜೆಪಿಯೇ! ಅಥವಾ ಮಹತ್ವಾಕಾಂಕ್ಷಿ ಅಮ್ಮಾ ಜಯಾ ಅವರು ಒಂದೊಮ್ಮೆ 30ಕ್ಕೂ ಹೆಚ್ಚು ಸ್ಥಾನ ಗೆದ್ದು ತಮ್ಮನ್ನೇ ಪ್ರಧಾನಿ ಗಾದಿಯಲ್ಲಿ ಕಾಣಬಯಸಿದರೆ!?

 ಈಗಾಗಲೇ ಚಂದ್ರಬಾಬು ನಾಯ್ದುರತ್ತ ಮೋದಿ ಚಿತ್ತ

ಈಗಾಗಲೇ ಚಂದ್ರಬಾಬು ನಾಯ್ದುರತ್ತ ಮೋದಿ ಚಿತ್ತ

ಈಗ ಏನಾಗಿದೆಯೆಂದರೆ ಬಿಜೆಪಿ ಹೊಣೆಗಾರಿಕೆಯನ್ನು ಹೊತ್ತಿರುವ ಮೋದಿ ಅವರು ಒಂದೊಂದಾಗಿ ಎಲ್ಲ ರಾಜ್ಯಗಳತ್ತಲೂ ತಮ್ಮ ದೃಷ್ಟಿ ಹಾಯಿಸಿತ್ತಿದ್ದಾರೆ. ಈಗಾಗಲೇ ಹೈದರಾಬಾದಿನಲ್ಲಿ ಸಮಾವೇಶ ನಡೆಸಿ, ಟಿಡಿಪಿ ಚಂದ್ರಬಾಬು ನಾಯ್ದುಗೆ ಗಾಳ ಹಾಕಿರುವ ಮೋದಿ ಇದೇ ಮಾಸಾಂತ್ಯ ಕೇರಳ ಮತ್ತು ತಮಿಳುನಾಡಿನಲ್ಲಿಯೂ ಎನ್ ಡಿಎ ನೆಲೆ ಕಂಡುಕೊಳ್ಳಲು ಹಾತೊರೆಯುತ್ತಿದ್ದಾರೆ.

ಜಯಾ ಜತೆಗಿನ ಮಿತ್ರತ್ವ ವೃದ್ಧಿಸಿಕೊಳ್ಳಲು ನಿರ್ಧಾರ

ಜಯಾ ಜತೆಗಿನ ಮಿತ್ರತ್ವ ವೃದ್ಧಿಸಿಕೊಳ್ಳಲು ನಿರ್ಧಾರ

ಅದರಲ್ಲೂ ಪ್ರಧಾನವಾಗಿ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಜತೆಗಿನ ತಮ್ಮ ನಂಟನ್ನು ಬಲಪಡಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಅನೇಕ ವರ್ಷಗಳಿಂದ ಜಯಲಲಿತಾ ಜತೆಗಿನ ತಮ್ಮ ಮಿತ್ರತ್ವವನ್ನು ವೃದ್ಧಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಮೋದಿ ಆತ್ಮೀಯ ಮಿತ್ರ, ಉತ್ತಮ ಆಡಳಿತಗಾರ'

'ಮೋದಿ ಆತ್ಮೀಯ ಮಿತ್ರ, ಉತ್ತಮ ಆಡಳಿತಗಾರ'

'ಮೋದಿ ನನ್ನ ಆತ್ಮೀಯ ಮಿತ್ರ. ಒಬ್ಬ ಉತ್ತಮ ಆಡಳಿತಗಾರ. ಆತನ ಬಗ್ಗೆ ನನಗೆ ಅಪಾರ ಗೌರವವಿದೆ. ಆತನಿಗೆ ಸದಾ ನನ್ನ ಅಭಿನಂದನೆಗಳು ಸಲ್ಲುತ್ತವೆ' ಎಂದು ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗುತ್ತಿದ್ದಂತೆ ಜಯಲಲಿತಾ ಪ್ರತಿಕ್ರಿಸಿದ್ದರು.

ಮುಖ್ಯಮಂತ್ರಿ ಜಯಾಗೆ ಶುಭಕೋರಿದ್ದ ಮೋದಿ

ಮುಖ್ಯಮಂತ್ರಿ ಜಯಾಗೆ ಶುಭಕೋರಿದ್ದ ಮೋದಿ

ತಮಿಳುನಾಡಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಜಯಲಲಿತಾ ಅವರು ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾಗಲು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದರು. ಆ ಸಮಾರಂಭಕ್ಕೆ ಅಹಮದಾಬಾದಿನಿಂದ ಧಾವಿಸಿಬಂದಿದ್ದ ಮೋದಿ, ಜಯಾಗೆ ಆತ್ಮೀಯವಾಗಿ ಶುಭಕೋರಿದ್ದರು.

ಪರಸ್ಪರ ಗೌರವಾದರ

ಪರಸ್ಪರ ಗೌರವಾದರ

ಜಯಾ ಸಹ ಕಳೆದ ಜನವರಿಯಲ್ಲಿ ತಮ್ಮ ಆತ್ಮೀಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಖುದ್ದಾಗಿ ಕಂಡು ಸಂತೋಷಗೊಂಡಿದ್ದರು. ಇದರಿಂದ ಮೋದಿ-ಜಯಾ ಮಿತ್ರತ್ವ ಮತ್ತಷ್ಟು ದೃಢವಾಯಿತು.

ತಮಿಳುನಾಡಿನಲ್ಲಿ ಸೀಟು ಲೆಕ್ಕಾಚಾರ ಹೇಗಿದೆ?

ತಮಿಳುನಾಡಿನಲ್ಲಿ ಸೀಟು ಲೆಕ್ಕಾಚಾರ ಹೇಗಿದೆ?

ಜಯಲಲಿತಾ AIADMK ಪಕ್ಷವು 9 ಲೋಕಸಭಾ ಸ್ಥಾನಗಳನ್ನು ಹೊಂದಿದೆ. DMK ಪಕ್ಷ 18 ಸಂಸದರನ್ನು ಹೊಂದಿದೆ. ರಾಜ್ಯದಲ್ಲಿ ಒಟ್ಟು 40 ಸೀಟುಗಳಿವೆ (ಪಕ್ಕದ ಕೇಂದ್ರಾಡಳಿತ ಪ್ರದೇಶದ ಒಂದು ಸ್ಥಾನವೂ ಸೇರಿ).

ಜಯಲಲಿತಾ ಎಣಿಕೆಯೆಷ್ಟು!?

ಜಯಲಲಿತಾ ಎಣಿಕೆಯೆಷ್ಟು!?

ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎದುರಿಗೇ ಇರುವ ಲೋಕಸಭೆ ಚುನಾವಣೆಯತ್ತ ಕಣ್ಣಿಟ್ಟ ಜಯಲಲಿತಾ ತಮ್ಮ AIADMK ಪಕ್ಷವನ್ನು ಚುನಾವಣೆಗಾಗಿ ಅಣಿಗೊಳಿಸುತ್ತಿದ್ದಾರೆ. ಅಮ್ಮಾ ಬ್ರ್ಯಾಂಡ್ ನಿಂದ ಹಿಡಿದು ಅವರ ಎಲ್ಲ ನಡೆಗಳೂ ಲೋಕಸಭೆ ಚುನಾವಣೆಯತ್ತಲೇ ಮುನ್ನುಗ್ಗುತ್ತಿವೆ.

ಮುಳ್ಳಿನ ಹಾದಿಯಲ್ಲಿ DMK

ಮುಳ್ಳಿನ ಹಾದಿಯಲ್ಲಿ DMK

ಅತ್ತ 18 ಸಂಸದರ DMK ಪಕ್ಷ ಮುಳ್ಳಿನ ಹಾದಿಯಲ್ಲಿ ಸಾಗಿರುವುದನ್ನು ಜಯಲಲಿತಾ ಕಣ್ಣಳತೆಯಲ್ಲೇ ಗಮನಿಸಿದ್ದಾರೆ. ಹಾಗಾಗಿ, ತಾವು ಹೋದಕಡೆಯಲ್ಲೆಲ್ಲಾ '40ಕ್ಕಿಂತ ಒಂದು ಸೀಟು ಕಡಿಮೆಯಿದ್ದರೂ ಅದು ನನಗೆ ಬೇಡ. ಅಷ್ಟೂ ಸ್ಥಾನಗಳನ್ನು ತಮ್ಮ ಪಕ್ಷ ಗೆಲ್ಲಲೇಬೇಕು' ಎಂದು ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಆಜ್ಞಾಪೂರ್ವಕವಾಗಿ ನಿವೇದಿಸಿಕೊಳ್ಳುತ್ತಿದ್ದಾರೆ.

English summary
BJP Prime Ministerial candidate Narendra Modi may garner Tamilnadu Chief Minister AIADMK supremo Jayalalitha support for NDA. Tamil Nadu Chief Minister J Jayalalithaa has said she is "happy" for "very good friend" Narendra Modi, who has been made the chairman of the BJP's Election Campaign Committee for the 2014 polls, which many see as a step towards his being named the party's candidate for Prime Minister in next year's general elections. Narendra Modi will a rally in Tamilnadu during the month end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X