ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನೆಗೆ ತೆರಳುತ್ತಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂ ಬಂಧನ

|
Google Oneindia Kannada News

ಚೆನ್ನೈ, ಅಕ್ಟೋಬರ್ 27: ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹಾಗೂ ಕೆಲವು ಬಿಜೆಪಿ ಸದಸ್ಯರನ್ನು ತಮಿಳುನಾಡಿನ ಮುಟ್ಟುಕಾಡುದಲ್ಲಿ ಮಂಗಳವಾರ ಬಂಧಿಸಲಾಗಿದೆ.

ವಿಸಿಕೆ ಅಧ್ಯಕ್ಷ ದೋಳ್ ತಿರುಮಾವಳವನ್ ಅವರು ಮನುಸ್ಮೃತಿ ಉಲ್ಲೇಖಿಸಿ ಮಹಿಳೆಯರ ಬಗ್ಗೆ ಆಡಿದ್ದರು ಎನ್ನಲಾದ ಮಾತುಗಳ ವಿರುದ್ಧ ಬಿಜೆಪಿ ಪ್ರತಿಭಟನೆ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಳ್ಳಲು ಖುಷ್ಬೂ ಅವರು ಚಿದಂಬರಂಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅವರನ್ನು ಬಂಧಿಸಲಾಗಿದೆ.

BJP Leader Khushbu Sundar Arrested While On The Way To Chidambaram

ಚಿದಂಬರಂನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಸೋಮವಾರ ಅನುಮತಿ ನಿರಾಕರಿಸಿದ್ದರು. ಖುಷ್ಬೂ ಅವರ ಬಂಧನದ ಬೆನ್ನಲ್ಲೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಟಿ ರಾಘವನ್ ಅವರನ್ನು ಮೇಲ್ಮರುವಥುರ್ ಸಮೀಪದ ಅಥುರ್ ಟೋಲ್‌ಗೇಟ್‌ನಲ್ಲಿ ಬಂಧಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮದಿಂದ ಅವರನ್ನು ಬಂಧಿಸಲಾಗಿದ್ದು, ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

'ಬಂಧನಕ್ಕೆ ಒಳಗಾಗಿದ್ದೇನೆ.. ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯಲಾಗುತ್ತಿದೆ. ಮಹಿಳೆಯರ ಗೌರವಕ್ಕಾಗಿ ನಮ್ಮ ಕೊನೆ ಉಸಿರಿನವರೆಗೂ ಹೋರಾಡುತ್ತೇವೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ನಾವು ಅವರ ಹಾದಿಯಲ್ಲಿ ಸಾಗುತ್ತಿದ್ದೇವೆ. ಕೆಲವು ಕೆಟ್ಟ ವ್ಯಕ್ತಿಗಳ ದೌರ್ಜನ್ಯಕ್ಕೆ ನಾವು ಮಂಡಿಯೂರುವುದಿಲ್ಲ. ಭಾರತ್ ಮಾತಾ ಕಿ ಜೈ' ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷದ ವಿರುದ್ಧ ಹರಿಹಾಯ್ದಿರುವ ಖುಷ್ಬೂ, 'ಹೇಡಿ ವಿಸಿಕೆ. ಖುಷಿ ಪಡಬೇಡಿ. ಇದು ನಿಮ್ಮ ವೈಫಲ್ಯ. ನಾವು ಶಕ್ತಿಯುತರು ಎಂಬುದು ಗೊತ್ತಿರುವುದರಿಂದ ನಮ್ಮನ್ನು ಬಂಧಿಸಿದ್ದಾರೆ. ನಾವು ಮಂಡಿಯೂರುವುದಿಲ್ಲ. ಈ ಮಣ್ಣಿನ ಪ್ರತಿ ಹೆಣ್ಣುಮಗಳ ಗೌರವ ಕಾಪಾಡಲು ನರೇಂದ್ರ ಮೋದಿ ಅವರು ಪ್ರತಿ ಹೆಜ್ಜೆಯನ್ನೂ ತೆಗೆದುಕೊಳ್ಳುತ್ತಾರೆ. ಹೇಡಿ ವಿಸಿಕೆ, ಮಹಿಳೆಯನ್ನು ಗೌರವಿಸುವುದು ನಿಮಗೆ ಕಷ್ಟವಾಗುತ್ತಿದೆ' ಎಂದು ಕಿಡಿಕಾರಿದ್ದಾರೆ.

ಮನುಸ್ಮೃತಿ ಹಾಗೂ ಮಹಿಳೆಯರ ಕುರಿತು ಅದರ ದೃಷ್ಟಿಕೋನದ ಬಗ್ಗೆ ತಿರುಮಾವಳವನ್ ವ್ಯಂಗ್ಯವಾಡಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ವೆಬಿನಾರ್‌ನಲ್ಲಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ. ಈ ಹೇಳಿಕೆಗೆ ಕ್ಷಮೆ ಕೇಳುವಂತೆ ಬಿಜೆಪಿ ಒತ್ತಾಯಿಸಿತ್ತು. ಆದರೆ ಅವರು ಕ್ಷಮೆಕೋರಲು ನಿರಾಕರಿಸಿದ್ದರು.

English summary
BJP leader Khushbu Sundar and few BJP members were arrested near Muttukadu while she was on her way to Chidambaram to take part in the agitation against Thol Thirumavalavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X