ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿಕ್ಷೆ ಬೇಡಿದ ಹಣವನ್ನು ಚೆನ್ನೈನ ವೃದ್ಧ ಏನು ಮಾಡ್ತಾರೆ?

|
Google Oneindia Kannada News

ಚೆನ್ನೈ, ಆಗಸ್ಟ್. 18: ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಲಕ್ಷಾಂತರ ಜನ ಭಾರತದಲ್ಲಿದ್ದಾರೆ. ಭಿಕ್ಷೆ ಬೇಡಿಯೇ ಕಾರು, ಮನೆ, ಬಂಗಲೆ ಖರೀದಿಸಿದವರನ್ನು ನೋಡಿದ್ದೇವೆ, ಕೇಳಿದ್ದೇವೆ.

ಆದರೆ ಚೆನ್ನೈ ನ 73 ವರ್ಷದ ಆರ್. ಸೆಲ್ವರಾಜ್ ಹಣ ಮಾಡಲೋ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕೋ ಭಿಕ್ಷೆ ಬೇಡುತ್ತಿಲ್ಲ. ಇವರು ಭಿಕ್ಷೆ ಎತ್ತುತ್ತಿರುವುದು ಅನಾಥ ಮಕ್ಕಳಿಗೆ ಜೀವನ ಭದ್ರತೆ ಕಲ್ಪಿಸಿಕೊಡಲು ಎಂಬುದು ವಿಶೇಷ. ['ಪುಷ್ಪಕ ವಿಮಾನ'ದ ಭಿಕ್ಷುಕ ಕಣ್ಮುಂದೆ ಹಾದುಹೋದಾಗ]

Beggar In Chennai Who Buys Books For Underprivileged Children

ಹೌದು.. 73 ವರ್ಷದ ಆರ್. ಸೆಲ್ವರಾಜ್ ತಮ್ಮ ನೆರೆಹೊರೆಯಲ್ಲಿನ ಅನಾಥ ಮಕ್ಕಳಿಗೋಸ್ಕರ ಭಿಕ್ಷೆ ಬೇಡುತ್ತಿದ್ದಾರೆ. ಚೆನ್ನೈನ ಕರುಣಾನಿಧಿ ನಗರದ ನಿವಾಸಿ ಸೆಲ್ವರಾಜ್ ಮಧುರೈ ಮತ್ತು ತಿರುವನಂತಪುರ ನಡುವೆ ಸಂಚರಿಸುವ ಬಸ್ ನಲ್ಲಿ ಭಿಕ್ಷೆ ಬೇಡುತ್ತಾರೆ. ಬಂದ ಹಣವನ್ನು ಅನಾಥ ಮಕ್ಕಳ ಕಲ್ಯಾಣಕ್ಕೆ ಬಳಸುತ್ತಿದ್ದಾರೆ.

1968ರಿಂದಲೂ ಸೆಲ್ವರಾಜ್ ತಮ್ಮ ಕಾಯಕವನ್ನು ನಡೆಸಿಕೊಂಡು ಬಂದಿದ್ದಾರೆ, ದೊರೆತ ಹಣದಲ್ಲಿ ಮಕ್ಕಳಿಗೆ ಆಟಿಕೆ ಸಾಮಗ್ರಿ ಇಲ್ಲವೇ ಶಾಲಾ ಬ್ಯಾಗ್ ಗಳನ್ನು ಕೊಂಡು ತಂದು ನೀಡುತ್ತಿದ್ದಾರೆ.[ಭಾರತದ ಶ್ರೀಮಂತ ಭಿಕ್ಷುಕರ ಬಳಿ ಏನೇನಿದೆ?]

ಅರ್ಥಶಾಸ್ತ್ರ ಪದವಿಧರ
ಸೆಲ್ವರಾಜ್ ಅರ್ಥ ಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಸೈಕಲ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೆಲ್ವರಾಜ್ ಅವರನ್ನು ಅನಾರೋಗ್ಯ ಕಾಡತೊಡಗಿತ್ತು. ಅವರು ಜೀವನ ನಡೆಸಲು ಕೆಲಸ ತೊರೆದು ಭಿಕ್ಷಾಟನೆಗೆ ಇಳಿಯಬೇಕಾಯಿತು.[ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಜಗದಲ್ಲಿ ಇಂಥವ್ರೂ ಇರ್ತಾರೆ?]

ಸೆಲ್ವರಾಜ್ ಮೊದಲಿನಿಂದಲೂ ಮಕ್ಕಳಿಗೆ ಸಹಾಯ ಮಾಡಿಕೊಂಡೆ ಬರುತ್ತಿದ್ದರು. ಪೋಲಿಯೊ ಪೀಡಿತರಾದ ಅವರಿಗೆ 2006 ರಲ್ಲಿ ಇನ್ನು ಯಾವ ಕೆಲಸ ಸಿಗುವುದಿಲ್ಲ ಎಂಬುದು ಮನದಟ್ಟಾದ ಮೇಲೆ ಭಿಕ್ಷಾಟನೆ ಕಾಯಂ ಕಾಯಕವಾಯಿತು.

ಯಾವುದೋ ಮಗುವಿಗೆ ಒಂದು ಸ್ಕೂಲ್ ಬ್ಯಾಗ್ ಬೇಕಿರುತ್ತದೆ. ಅದನ್ನು ನಾನು ಬೇಡಿದ ಹಣದಲ್ಲಿ ತಂದು ನೀಡುತ್ತೇನೆ. ಇದೇ ನನಗೆ ಆತ್ಮತೃಪ್ತಿ ನೀಡುತ್ತದೆ ಎಂದು ಸೆಲ್ವರಾಜ್ ತಮ್ಮ ಕಾಯಕದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

English summary
Several media reports suggest that many of beggars living off alms even own flats and cars. But, there are also people like 73-year-old R Selvaraj, a man who begs for money to transform the lives of underprivileged kids in his locality. Selvaraj, a resident of Karunanidhi Nagar in Chennai, makes begging on buses plying between Madurai and Tirupattur,.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X