ಚೆನ್ನೈ ನಗರಕ್ಕೆ ಮಳೆ ಭೀತಿ ಇನ್ನೂ ಕಾಡಲಿದೆ : ಬಿಬಿಸಿ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ನವೆಂಬರ್ 03:ಚೆನ್ನೈ ನಗರಕ್ಕೆ ಮಳೆ ಭೀತಿ ಇನ್ನೂ ಕಾಡಲಿದೆ. ಮುಂಬರುವ ದಿನಗಳಲ್ಲಿ ಸರಿ ಸುಮಾರು 300 ರಿಂದ 500 ಮಿಲಿ ಮೀಟರ್ ನಷ್ಟು ಪ್ರಮಾಣದ ಮಳೆ ನಿರೀಕ್ಷಿಸಬಹುದು ಎಂದು ಬಿಬಿಸಿ ತನ್ನ ಹವಾಮಾನ ವರದಿಯಲ್ಲಿ ಹೇಳಿದೆ.

ಗ್ಯಾಲರಿ: ಚೆನ್ನೈನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

ಈಶಾನ್ಯ ಮುಂಗಾರು ಚುರುಕುಗೊಂಡಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ ಏಳು ಜಿಲ್ಲೆಗಳಲ್ಲಿ ಶುಕ್ರವಾರ(ನವೆಂಬರ್ 03)ದಂದು ಕೂಡಾ ಭಾರಿ ಮಳೆಯಾಗುತ್ತಿದೆ.

BBC predicts 300-500 mm more rains in Chennai

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದ ವಿವಿಧೆಡೆ ಮಳೆಯಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 9ಕ್ಕೇರಿದೆ.

ಬಿಬಿಸಿ ವರದಿ: ಚೆನ್ನೈ ಮಹಾನಗರದ ಹವಾಮಾನ ವರದಿ ನೀಡಿರುವ ಬಿಬಿಸಿ, ಚೆನ್ನೈನಲ್ಲಿ ಈಗಾಗಲೇ ಕಳೆದ ಮೂರು ದಿನಗಳಲ್ಲಿ 200 ಎಂಎಂನಷ್ಟು ಮಳೆಯಾಗಿದೆ. ಮುಂಬರುವ ದಿನಗಳಲ್ಲಿ 300ರಿಂದ 500 ಎಂಎಂನಷ್ಟು ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಪೆರಂಬೂರು, ಚೋಳೈ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ದಕ್ಷಿಣ ತಮಿಳುನಾಡಿನಿಂದ ಬರುವ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ಬೆಳಗ್ಗಿನ ವೇಳೆ ವಿಮಾನಗಳ ಟೇಕಾಫ್ ಕಷ್ಟವಾಗಿವೆ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಚೆನ್ನೈ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBC weather has predicted more rains in Chennai. According to BBC, Chennai will receive 300 to 500 mm more rains in the next few days.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ